ETV Bharat / bharat

ಖ್ಯಾತ ಫುಟ್​​ ಬಾಲ್​ ಲೆಜೆಂಡ್ ಡಿಯೇಗೋ​ ಮೆರಡೋನ ವಿರುದ್ಧ ಅತ್ಯಾಚಾರ ಆರೋಪ - ಖ್ಯಾತ ಫುಟ್​ ಬಾಲ್​ ಲೆಜೆಂಡ್ ಡಿಯೇಗೋ​ ಮೆರಡೋನ ಸುದ್ದಿ

Diego Maradona rape case; ಖ್ಯಾತ ಫುಟ್​ ಬಾಲ್​ ಲೆಜೆಂಡ್ ಡಿಯೇಗೋ​ ಮೆರಡೋನ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಮಹಿಳೆಯೊಬ್ಬಳು ಈ ಆರೋಪ ಮಾಡಿದ್ದಾಳೆ. ಅರ್ಜಿಂಟಿನಾದಲ್ಲಿ ದೇವರಂತೆ ನೋಡುವ ಮೆರಡೋನಾ ತನ್ನನ್ನು 16 ವಯಸ್ಸಿನಲ್ಲಿ ಇದ್ದಾಗ ರೇಪ್​ ಮಾಡಿರುವುದಾಗಿ ಆಕೆ ಆರೋಪಿಸಿದ್ದಾರೆ.

diego-maradona
ಡಿಯೇಗೋ​ ಮೆರಡೋನ
author img

By

Published : Nov 23, 2021, 4:01 PM IST

ಬ್ಯೂನಸ್ ಐರಿಸ್: ಅರ್ಜಿಂಟಿನಾದ ಖ್ಯಾತ ಫುಟ್​ ಬಾಲ್​ ಆಟಗಾರ ಡಿಯೇಗೋ ಮೆರಡೋನ ವಿರುದ್ಧ ಮಾವಿಸ್​ ಅಲ್ವಾರೆಜ್​ ಎಂಬ ಕ್ಯೂಬಾ ದೇಶದ ಮಹಿಳೆ ಅತ್ಯಾಚಾರದ ಆರೋಪ ಮಾಡಿದ್ದಾರೆ.

ಡಿಯೇಗೋ ಮೆರಡೋನ ಕಳೆದ ವರ್ಷ ನವೆಂಬರ್​ 25ರಂದು ಮೃತಪಟ್ಟಿದ್ದಾರೆ. ಆದರೆ ಡಿಯೇಗೋ ನಿಧನದ ನಂತರ ಮಹಿಳೆಯೊಬ್ಬರು ಈಗ ಅವರ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಕ್ಯೂಬಾ ದೇಶದ ಮಹಿಳೆಯೊಬ್ಬಳು ತಾನು16ನೇ ವಯಸ್ಸಿನಲ್ಲಿದ್ದಾಗ ಡಿಯೇಗೋ ತನ್ನ ಮೇಲೆ ಅತ್ಯಾಚಾರ ಮಾಡಿದ್ದರು. ಈ ಮೂಲಕ ನನ್ನ ಬಾಲ್ಯವನ್ನು ಕರಾಳವಾಗಿಸಿದ್ದರು ಎಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಾವಿಸ್ ಅಲ್ವಾರೆಜ್​​ಗೆ ಈಗ 37ವರ್ಷ. ಮೆರಡೋನಾ ತನ್ನ ಮೇಲೆ ರೇಪ್​ ಮಾಡಿದ್ದಾರೆ ಎಂಬುದಕ್ಕೆ ಅರ್ಜಿಂಟಿನಾದ ನ್ಯಾಯಾಂಗ ಸಚಿವಾಲಯ ಕೋರ್ಟ್​​ಗೆ ಕಳೆದವಾರವೇ ಮಾವಿಸ್ ಸಾಕ್ಷಿಗಳನ್ನೂ ನೀಡಿದ್ದಾರೆ. ಮೆರಡೋನ ಅವರಿದ್ದಾಗ ಅವರೊಂದಿಗಿದ್ದ ಆಪ್ತರ ವಿರುದ್ಧ ಕಳ್ಳಸಾಗಣೆ ಆರೋಪ ಕೇಳಿಬಂದಿದ್ದು, ಅದರ ವಿರುದ್ಧವೂ ಸಚಿವಾಲಯ ತನಿಖೆ ನಡೆಸುತ್ತಿದೆ.

'ನಾನು 16ವರ್ಷದವಳಿದ್ದಾಗ ಮೆರಡೋನಾ 40ನೇ ವರ್ಷದಲ್ಲಿದ್ದರು. 16ನೇ ವಯಸ್ಸಿನಲ್ಲಿ ನಾನು ಅರ್ಜಿಂಟಿನಾಕ್ಕೆ ಭೇಟಿ ನೀಡಿದ್ದೆ. ಅದಕ್ಕೂ ಮೊದಲು ಅವರು ಮಾದಕ ವ್ಯಸನ ಬಿಡಲು ತೆಗೆದುಕೊಳ್ಳುತ್ತಿದ್ದ ಚಿಕಿತ್ಸೆಗಾಗಿ ಕ್ಯೂಬಾಕ್ಕೆ ಬಂದಾಗ ನಾನವರನ್ನು ಭೇಟಿಯಾಗಿದ್ದೆ. ಆಗ ಅವರು ಹವಾನಾ ಎಂಬ ಆಸ್ಪತ್ರೆಯಲ್ಲಿದ್ದರು. ಅದೇ ಕ್ಲಿನಿಕ್​​ನಲ್ಲಿ ನನ್ನ ಮೇಲೆ ರೇಪ್​ ಮಾಡಿದ್ದರು. ಆ ವೇಳೆ ಅವರ ತಾಯಿ ಪಕ್ಕದ ಕೋಣೆಯಲ್ಲಿದ್ದರು ಎಂದು ತಿಳಿಸಿದ್ದಾರೆ. ನನ್ನ ಬಾಯಿಯನ್ನು ತನ್ನ ಕೈಯಿಂದ ಮುಚ್ಚಿ ಡಿಯೇಗೋ ಮೆರಡೋನಾ ಅತ್ಯಾಚಾರವೆಸಗಿದ್ದರು. ಈ ಬಗ್ಗೆ ಇಂದು ಯೋಚಿಸಲೂ ಸಾಧ್ಯವಾಗುತ್ತಿಲ್ಲ ಎಂದು ಸಂತ್ರಸ್ತೆ​ ನೋವನ್ನು ತೋಡಿಕೊಂಡಿದ್ದಾರೆ.

ಮೆರಡೋನಾರನ್ನು ಅರ್ಜಿಂಟಿನಾದಲ್ಲಿ ದೇವರಂತೆ ನೋಡಲಾಗುತ್ತದೆ. ಅವರಿದ್ದ ಈ ದೇಶದಲ್ಲಿ ನನಗಂತೂ ಇರಲು ಕಷ್ಟ. ಎಲ್ಲಿ ನೋಡಿದರೂ ಅವನೇ ಇದ್ದಂತೆ ಅನ್ನಿಸುತ್ತದೆ. ಆದರೆ ಈಗ ಅವರ ಆಪ್ತರ ವಿರುದ್ಧ ಕಳ್ಳಸಾಗಣೆಗೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದೆ. ಇದೇ ವೇಳೆ ನಾನೂ ದೂರು ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಮಹಿಳೆಯ ಆರೋಪಕ್ಕೆ ಕ್ಯೂಬಾ ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.