ETV Bharat / bharat

ಕೋಲ್ಕತಾ ಬಿಜೆಪಿ ಕಚೇರಿ ಬಳಿ 54 ಕಚ್ಚಾ ಬಾಂಬ್‌ಗಳು ಪತ್ತೆ - ಕೋಲ್ಕತಾ ಬಿಜೆಪಿ ಕಚೇರಿ ಬಳಿ ಕಚ್ಚಾ ಬಾಂಬ್‌ ಪತ್ತೆ ಸುದ್ದಿ

ಪೊಲೀಸರು ಇನ್ನೂ ಬಾಂಬ್‌ಗಳ ವಿವರಗಳನ್ನು ಬಹಿರಂಗಪಡಿಸದಿದ್ದರೂ ಸ್ಥಳೀಯರ ಪ್ರಕಾರ, ಕನಿಷ್ಠ 54 ಕಚ್ಚಾ ಬಾಂಬ್‌ಗಳನ್ನು ನಾಲ್ಕು ಚೀಲಗಳಲ್ಲಿ ತುಂಬಿಸಿಟ್ಟಿರುವುದು ಪತ್ತೆಯಾಗಿದೆ.

Crude bombs found near BJP office
ಕೋಲ್ಕತಾ ಬಿಜೆಪಿ ಕಚೇರಿ ಬಳಿ ಕಚ್ಚಾ ಬಾಂಬ್‌ ಪತ್ತೆ
author img

By

Published : Jun 6, 2021, 7:59 AM IST

ಕೋಲ್ಕತಾ (ಪಶ್ಚಿಮ ಬಂಗಾಳ): ನಗರದ ದಕ್ಷಿಣದ ಅಂಚಿನಲ್ಲಿರುವ ಖಿದರ್‌ಪೋರ್ ಮತ್ತು ಹೇಸ್ಟಿಂಗ್ಸ್ ಕ್ರಾಸಿಂಗ್‌ ಬಳಿ 54 ಕಚ್ಚಾ ಬಾಂಬ್‌ ಪತ್ತೆಯಾಗಿದ್ದು, ಕೋಲ್ಕತಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚುನಾವಣೆಯ ಸಮಯದಲ್ಲಿ ಬಳಸಲಾಗಿದ್ದ ಬಿಜೆಪಿ ಕಚೇರಿಯಿಂದ 20 ಮೀಟರ್ ದೂರದಲ್ಲಿ ಕಚ್ಚಾ ಬಾಂಬ್‌ಗಳು ಪತ್ತೆಯಾಗಿವರುವುದು ಆತಂಕ ಮೂಡಿಸಿದೆ.

Crude bombs found near BJP office
ಕೋಲ್ಕತಾ ಬಿಜೆಪಿ ಕಚೇರಿ ಬಳಿ ಕಚ್ಚಾ ಬಾಂಬ್‌ ಪತ್ತೆ

ಪೊಲೀಸರು ಇನ್ನೂ ಬಾಂಬ್‌ಗಳ ವಿವರಗಳನ್ನು ಬಹಿರಂಗಪಡಿಸದಿದ್ದರೂ ಸ್ಥಳೀಯರ ಪ್ರಕಾರ, ಕನಿಷ್ಠ 54 ಕಚ್ಚಾ ಬಾಂಬ್‌ಗಳನ್ನು ನಾಲ್ಕು ಚೀಲಗಳಲ್ಲಿ ಇಡಲಾಗಿತ್ತು. ಇದನ್ನು ಮುಖ್ಯವಾಗಿ ಹಣ್ಣುಗಳ ಪ್ಯಾಕಿಂಗ್‌ಗೆ ಬಳಸಲಾಗುವ ಚೀಲದಲ್ಲಿ ತುಂಬಿಡಲಾಗಿದೆ. ಬಾಂಬ್‌ಗಳು ಸಿಕ್ಕಿರುವ ಸ್ಥಳವು ಮಾರುಕಟ್ಟೆ ಪ್ರದೇಶವಾಗಿದ್ದು, ಚೀಲಗಳನ್ನು ಪ್ಯಾಕಿಂಗ್ ಪೆಟ್ಟಿಗೆಗಳಿಂದ ಮುಚ್ಚಲಾಗಿತ್ತು ಮತ್ತು ಅದು ಹಣ್ಣುಗಳಂತೆ ಕಾಣುತ್ತಿತ್ತು.

ಹೇಸ್ಟಿಂಗ್ಸ್ ಠಾಣೆಯ ಪೊಲೀಸರು, ಬಾಂಬ್ ಸ್ಕ್ವಾಡ್ ಮತ್ತು ಅಪರಾಧ ನಿಗ್ರಹ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಾಂಬ್‌ಗಳನ್ನು ವಶಪಡಿಸಿಕೊಂಡು, ನಿಷ್ಕ್ರಿಯಗೊಳಿಸಿದ್ದಾರೆ.

"ಬಾಂಬ್​ಗಳು ಅಲ್ಲಿಗೆ ಹೇಗೆ ಬಂದವು ಎಂದು ಕಂಡುಹಿಡಿಯಲು ನಾವು ತನಿಖೆ ಪ್ರಾರಂಭಿಸಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.