ETV Bharat / bharat

ದೇಶಾದ್ಯಂತ ಹೆಚ್ಚುತ್ತಿರುವ H3N2 ಇನ್‌ಫ್ಲುಯೆಂಜಾ ವೈರಸ್: ದೆಹಲಿಯಲ್ಲಿ ಮಹತ್ವದ ಸಭೆ - ಆರೋಗ್ಯ ಪ್ರೋಟೋಕಾಲ್

H3N2 ಇನ್‌ಫ್ಲುಯೆಂಜಾ ವೈರಸ್ ದೇಶದಾದ್ಯಂತ ಹೆಚ್ಚುತ್ತಿದೆ. ದೇಶದಲ್ಲಿ ಪ್ರಸ್ತುತ ಆರೋಗ್ಯ ಮೂಲ ಸೌಕರ್ಯಗಳ ಕುರಿತು ಸಭೆಯು ವಿಶ್ಲೇಷಿಸುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

h3n3 influenza virus health ministry
ದೇಶದಾದ್ಯಂತ ಹೆಚ್ಚುತ್ತಿರುವ H3N2 ಇನ್‌ಫ್ಲುಯೆಂಜಾ ವೈರಸ್
author img

By

Published : Mar 11, 2023, 7:54 PM IST

ನವದೆಹಲಿ: H3N2 ಇನ್‌ಫ್ಲುಯೆಂಜಾ ವೈರಸ್‌ನ ತ್ವರಿತ ಏರಿಕೆ ಹಿನ್ನೆಲೆಯಲ್ಲಿ ನೀತಿ ಆಯೋಗ ಮತ್ತು ಕೋವಿಡ್-19 (ಎನ್​ಇಜಿವಿಎಸಿ)ಗಾಗಿ ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ತಂಡವು ಕಾಳಜಿ ವಹಿಸಿದೆ. ಭಾರತದಾದ್ಯಂತ ಪರಿಸ್ಥಿತಿಯನ್ನು ಮತ್ತು ಬಿಕ್ಕಟ್ಟನ್ನು ಎದುರಿಸಲು ಸರ್ಕಾರದ ಕಾರ್ಯತಂತ್ರವನ್ನು ಸಭೆಯಲ್ಲಿ ಮೌಲ್ಯಮಾಪನ ಮಾಡಲಿದೆ. ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯು ಪ್ರಸ್ತುತ ಭಾರತದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಒಟ್ಟಾರೆ ವಿಶ್ಲೇಷಣೆ ಮಾಡುತ್ತದೆ ಎಂದು ಸರ್ಕಾರದ ಮೂಲಗಳು ಈಟಿವಿ ಭಾರತ್‌ಗೆ ತಿಳಿಸಿವೆ.

ಆರೋಗ್ಯ ಮೂಲಸೌಕರ್ಯ: H3N2 ಇನ್‌ಫ್ಲುಯೆಂಜಾ ವೈರಸ್ ದೇಶದಾದ್ಯಂತ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯ ಹಾಸಿಗೆಗಳು, ಐಸಿಯು ಹಾಸಿಗೆಗಳು ಮತ್ತು ಆಮ್ಲಜನಕದ ಲಭ್ಯತೆ ಸೇರಿದಂತೆ ದೇಶದಲ್ಲಿ ಪ್ರಸ್ತುತ ಆರೋಗ್ಯ ಮೂಲಸೌಕರ್ಯಗಳ ಕುರಿತು ಸಭೆಯು ವಿಶ್ಲೇಷಿಸುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಕೂಡಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಆರೋಗ್ಯ ಪ್ರೋಟೋಕಾಲ್: ಆರೋಗ್ಯ ಸಚಿವಾಲಯ, ರಾಸಾಯನಿಕ ಮತ್ತು ರಸಗೊಬ್ಬರ, ನಾಗರಿಕ ವಿಮಾನಯಾನ, ಗೃಹ, ವಿಜ್ಞಾನ ಮತ್ತು ತಂತ್ರಜ್ಞಾನ, ರೈಲ್ವೆ ಮತ್ತು ಐಸಿಎಂಆರ್‌ನ ಅಧಿಕಾರಿಗಳು ಪ್ರಸ್ತುತ ಪರಿಸ್ಥಿತಿಯನ್ನು ಚರ್ಚಿಸಲು ಸಭೆಯಲ್ಲಿ ಉಪಸ್ಥಿತರಿರುತ್ತಾರೆ. "H3N2 ವೈರಸ್‌ನಿಂದ ಉಂಟಾಗುವ ಯಾವುದೇ ಪರಿಣಾಮವನ್ನು ಎದುರಿಸಲು ಪ್ರಸ್ತುತ ಆರೋಗ್ಯ ಪ್ರೋಟೋಕಾಲ್ ಅನ್ನು ತರುವುದರ ಜೊತೆಗೆ ಅಗತ್ಯವಿದ್ದರೆ, ಸ್ಥಳೀಯ ನಿರ್ಬಂಧಗಳನ್ನು ಸಭೆಯು ಚರ್ಚಿಸುತ್ತದೆ" ಎಂದು ಮೂಲಗಳು ತಿಳಿಸಿವೆ.

ಆಸ್ಪತ್ರೆಯ ಹಾಸಿಗೆಗಳು, ಐಸಿಯು ಹಾಸಿಗೆಗಳು ಮತ್ತು ಆಮ್ಲಜನಕದ ಲಭ್ಯತೆ ಸೇರಿದಂತೆ ದೇಶದಲ್ಲಿ ಪ್ರಸ್ತುತ ಆರೋಗ್ಯ ಮೂಲಸೌಕರ್ಯವನ್ನು ಸಭೆಯು ವಿಶ್ಲೇಷಿಸುತ್ತದೆ. ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಕೂಡ ಸಭೆಯಲ್ಲಿ ಉಪಸ್ಥಿತರಿರುತ್ತಾರೆ. ಏಕೆಂದರೆ, ಆರೋಗ್ಯ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಲು ಚರ್ಚೆ ನಡೆಯಲಿದೆ.

ಇದನ್ನೂ ಓದಿ: ಮಲಗುವ ಮುನ್ನ ಮಂದ ಬೆಳಕಿನ ಬಳಕೆಯಿಂದ ಗರ್ಭಾವಸ್ಥೆ ಮಧುಮೇಹ ಅಪಾಯ ಕಡಿಮೆ; ಅಧ್ಯಯನ

H3N3 ಉಸಿರಾಟದ ಕಾಯಿಲೆ: ಕೋವಿಡ್-19 (ಎನ್​ಇಜಿವಿಎಸಿ)ಗಾಗಿ ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸಭೆ ನಡೆಸಲಿದೆ. ಎನ್‌ಇಜಿವಿಎಸಿ ಅಧ್ಯಕ್ಷ ಡಾ.ಎನ್‌.ಕೆ.ಅರೋರಾ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಆರೋಗ್ಯ ತಜ್ಞರು ಮತ್ತು ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಇದಕ್ಕೂ ಮೊದಲು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್​) ಇತ್ತೀಚೆಗೆ H3N3 ಅನ್ನು ಪ್ರಸ್ತುತ ಉಸಿರಾಟದ ಕಾಯಿಲೆಗೆ ಪ್ರಮುಖ ಕಾರಣವೆಂದು ವರ್ಗೀಕರಿಸಿದೆ.

ಏನು ಹೇಳುತ್ತದೆ ಐಸಿಎಂಆರ್: ಐಸಿಎಂಆರ್​ ವಿಶ್ಲೇಷಣೆಯು, ಈ ಉಪವಿಧದ ಇನ್‌ಫ್ಲುಯೆಂಜಾವು, ಇತರ ಇನ್‌ಫ್ಲುಯೆಂಜಾ ಉಪವಿಭಾಗಗಳಿಗಿಂತ ಹೆಚ್ಚು ಕಾರಣವಾಗುತ್ತದೆ ಎಂದು ಹೇಳಿದೆ. H3N2 ಇನ್‌ಫ್ಲುಯೆಂಜಾವು, ಉಸಿರಾಟದ ತೊಂದರೆ ಮತ್ತು ಇತರ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಎಸ್​ಎಆರ್​ಐ ರೋಗಿಗಳಲ್ಲಿ, ಶೇಕಡಾ 10ರಷ್ಟು ಆಮ್ಲಜನಕದ ಅಗತ್ಯವಿದೆ. ಶೇಕಡಾ 7ರಷ್ಟು ಐಸಿಯು ಆರೈಕೆಯ ಅಗತ್ಯವಿದೆ" ಎಂದು ಐಸಿಎಂಆರ್​ ಹೇಳಿದೆ.

ಇದನ್ನೂ ಓದಿ: ದೃಷ್ಟಿ ಹೀನತೆಗೆ ಕಾರಣವಾಗುವ ಗ್ಲುಕೋಮ; ಈ ಬಗ್ಗೆ ಇರಲಿ ಕಾಳಜಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.