ETV Bharat / bharat

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಹುಟ್ಟಡಗಿಸಲು 100 ಕೋಬ್ರಾ ಕಮಾಂಡೋಗಳ ನಿಯೋಜನೆ - ಜಮ್ಮು ಮತ್ತು ಕಾಶ್ಮೀರ

ಕಾಶ್ಮೀರದ ಕಣಿವೆಯ ಪರ್ವತ ಮತ್ತು ದಟ್ಟ ಅರಣ್ಯ ಪ್ರದೇಶಗಳಲ್ಲಿ ನಡೆಯಲಿರುವ ಭಯೋತ್ಪಾದಕ ದಾಳಿ ಎದುರಿಸುವುದು ಸೇರಿದಂತೆ ಇತರೆ ಭದ್ರತಾ ಪಡೆಗಳಿಗೆ ಸಹಾಯ ಒದಗಿಸಲು 100 ಕೋಬ್ರಾ ಕಮಾಂಡೋಗಳನ್ನು ನಿಯುಕ್ತಿ ಮಾಡಲಾಗಿದೆ ಎಂದು ಹಿರಿಯ ಸಿಆರ್‌ಪಿಎಫ್ ಅಧಿಕಾರಿ ತಿಳಿಸಿದ್ದಾರೆ.

cobra commandos
ಕೋಬ್ರಾ ಕಮಾಂಡೋಗಳ ನಿಯುಕ್ತಿ
author img

By ETV Bharat Karnataka Team

Published : Sep 27, 2023, 10:57 PM IST

ನವದೆಹಲಿ: ಕಾಶ್ಮೀರದಲ್ಲಿ ಮುಂದಿನ ದಿನಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ಎದುರಿಸಿಲು ಹಾಗೂ ಭದ್ರತಾ ಪಡೆಗಳಿಗೆ ಸಹಾಯ ಒದಗಿಸುವ ದೃಷ್ಟಿಯಿಂದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯೂ (ಸಿಆರ್‌ಪಿಎಫ್) ವಿಶೇಷ ತರಬೇತಿ ಪಡೆದ 100 ಕೋಬ್ರಾ ಕಮಾಂಡೋಗಳನ್ನು ನಿಯೋಜಿಸಿದೆ.

ವಿಶೇಷವಾಗಿ ಕಣಿವೆಯ ಪರ್ವತ ಮತ್ತು ದಟ್ಟ ಅರಣ್ಯ ಪ್ರದೇಶಗಳಲ್ಲಿ ನಡೆಯಲಿರುವ ಭಯೋತ್ಪಾದಕ ದಾಳಿಗಳನ್ನು ಎದುರಿಸುವ ಜೊತೆಗೆ ಕೋಬ್ರಾ ಕಮಾಂಡೋಗಳು ದೇಶದ ಇತರ ಭದ್ರತಾ ಪಡೆಗಳಿಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಾಯ ಮಾಡಲಿದ್ದಾರೆ ಎಂದು ಹಿರಿಯ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

CRPF ನ ಕೋಬ್ರಾ ಕಮಾಂಡೋಗಳು ಬೆಟಾಲಿಯನ್ ಜಂಗಲ್ ಮತ್ತು ಗೆರಿಲ್ಲಾ ಯುದ್ಧದಲ್ಲಿ ವಿಶೇಷವಾಗಿ ತರಬೇತಿ ಪಡೆದಿದ್ದು, ನಕ್ಸಲರನ್ನು ಎದುರಿಸಲು ಅವರನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅರಣ್ಯದಿಂದ ಭದ್ರತಾ ಪಡೆಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಮೂಲದ ಭಯೋತ್ಪಾದಕರ ತಂತ್ರಗಳನ್ನು ಬದಲಾಯಿಸಿದ ನಂತರ ಕೇಂದ್ರ ಸರ್ಕಾರವು ಕೋಬ್ರಾ ಕಮಾಂಡೋಗಳನ್ನು ನಿಯೋಜಿಸುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದರು.

ಕೋಕೆರ್‌ನಾಗ್‌ದಂತ ದಾಳಿ ಎದುರಿಸಲು 100 ಕೋಬ್ರಾ ಕಮಾಂಡೋ: ಈ ತಿಂಗಳ ಆರಂಭದಲ್ಲಿ ಅನಂತ್‌ನಾಗ್ ಜಿಲ್ಲೆಯ ಕೋಕೆರ್‌ನಾಗ್‌ನ ದಟ್ಟ ಅರಣ್ಯದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ನಡೆಸಿದ ದಾಳಿಯ ಕೃತ್ಯದಲ್ಲಿ ಕರ್ನಲ್ ಮತ್ತು ಸೇನೆಯ ಮೇಜರ್, ಮತ್ತು ಜಮ್ಮು ಕಾಶ್ಮೀರದ ಡಿಎಸ್‌ಪಿ ಸೇರಿದಂತೆ ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮರಾದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 71 ವಿದೇಶಿಗರು ಸೇರಿದಂತೆ ಕನಿಷ್ಠ 111 ಭಯೋತ್ಪಾದಕರು ಸಕ್ರಿಯರಾಗಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಅರೆಸೇನಾ ಪಡೆಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಮತ್ತು ಗಸ್ತು ತಿರುಗುತ್ತಿವೆ ಎಂದು ಹೇಳಿದರು.

2022 ರಲ್ಲಿ 55 ಸ್ಥಳೀಯ ಭಯೋತ್ಪಾದಕರು ಮತ್ತು 82 ವಿದೇಶಿ ಭಯೋತ್ಪಾದಕರು ಸೇರಿದಂತೆ 137 ಭಯೋತ್ಪಾದಕರು ಪ್ರದೇಶದಲ್ಲಿ ಸಕ್ರಿಯರಾಗಿದ್ದರು ಎಂದು ವಿವರಣೆ ನೀಡಿದ ಅಧಿಕಾರಿಗಳು ಸಿಆರ್​ಪಿಎಫ್ ಕಣ್ಗಾವಲಿನಿಂದ 2023 ರಲ್ಲಿ ಇದುವರೆಗೆ ಒಂಬತ್ತು ಸ್ಥಳೀಯ ಭಯೋತ್ಪಾದಕರು ಮತ್ತು 38 ವಿದೇಶಿ ಭಯೋತ್ಪಾದಕರು ಸೇರಿದಂತೆ 47 ಭಯೋತ್ಪಾದಕರ ದುಷ್ಕೃತ್ಯಗಳನ್ನು ತಟಸ್ಥಗೊಳಿಸಿದ್ದೇವೆ ಎಂದು ಹೇಳಿದರು.

ಸಿಆರ್​ಪಿಎಫ್ ಕಣ್ಗಾವಲಿನಿಂದ 2022 ರಲ್ಲಿ 130 ಸ್ಥಳೀಯ ಭಯೋತ್ಪಾದಕರು ಮತ್ತು 57 ವಿದೇಶಿ ಭಯೋತ್ಪಾದಕರು ಸೇರಿದಂತೆ 187 ಭಯೋತ್ಪಾದಕರ ದುಷ್ಕೃತ್ಯಗಳನ್ನು ತಡೆಯಲಾಗಿದೆ. 2022 ರಲ್ಲಿ 373 ಉಗ್ರರನ್ನು 2023 ರಲ್ಲಿ 204 ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂಓದಿ:ಮಣಿಪುರದಲ್ಲಿ ವಿದ್ಯಾರ್ಥಿಗಳ ಹತ್ಯೆ ಪ್ರಕರಣ: ಇಂಫಾಲ್​ಗೆ ತೆರಳಿದ ಸಿಬಿಐ ವಿಶೇಷ ನಿರ್ದೇಶಕರ ನೇತೃತ್ವದ ತಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.