ನಾಗ್ಪುರ(ಮಹಾರಾಷ್ಟ್ರ): ಶಾಲೆಗಳು, ಧಾರ್ಮಿಕ ಸ್ಥಳಗಳ 200 ಮೀಟರ್ ವ್ಯಾಪ್ತಿಯೊಳಗೆ ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂಬ ನಿಯಮ ಜಾರಿಯಲ್ಲಿದೆ. ಆದರೆ, ಜಿಲ್ಲೆಯ ಗಂಗಾ-ಜಮುನಾ ಪ್ರದೇಶದಲ್ಲಿ ಶಾಲೆ, ದೇವಸ್ಥಾನಗಳಿಗೆ ಹತ್ತಿರವಾಗಿ ವೇಶ್ಯಾಗೃಹಗಳಿದ್ದರಿಂದ ಅಲ್ಲಿ 144 ಸೆಕ್ಷನ್ಅನ್ನು ಜಾರಿಗೊಳಿಸಲಾಗಿತ್ತು.
ಇದೀಗ, ಇಲ್ಲಿನ ಐದು ವೇಶ್ಯಾಗೃಹಗಳನ್ನು ಮುಚ್ಚಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ಜಾರಿಗೊಳಿಸಲಾಗಿದ್ದ 144 ಸೆಕ್ಷನ್ಅನ್ನು ತೆರವುಗೊಳಿಸಲಾಗಿದೆ. ವೇಶ್ಯಾಗೃಹಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಎಎ ವಿರೋಧಿಸಿ ನಾಟಕ ಪ್ರದರ್ಶನ: ಇಲಾಖಾ ತನಿಖೆ ನಡೆಸುವಂತೆ ಡಿಜಿಪಿಗೆ ಶಿಫಾರಸು
ಇನ್ಮುಂದೆ ಈ ಪ್ರದೇಶಗಳಲ್ಲಿ ಇಂಥ ಪ್ರಕರಣಗಳು ಕಂಡು ಬಂದರೆ, ಅನೈತಿಕ ಕಳ್ಳಸಾಗಣೆ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.