ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಚೂರಿ ಇರಿದು ರಕ್ತ ಸುರಿಯುವುದು ಸಾಮಾನ್ಯ ಸಂಗತಿಯಾಗಿದೆ. ಸಣ್ಣಪುಟ್ಟ ವಿಷಯಗಳಿಗೆ ಜಗಳವಾದಾಗ ಪರಸ್ಪರ ಚಾಕುವಿನಿಂದ ಹಲ್ಲೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಜಗಳಗಳಲ್ಲಿ ಮಧ್ಯಪ್ರವೇಶಿಸಲು ಯಾರೂ ಮುಂದೆ ಬರದಿರುವುದು ಅತ್ಯಂತ ಆತಂಕ ಸಂಗತಿ. ರಸ್ತೆಗಳು ಮತ್ತು ಬೀದಿಗಳಲ್ಲಿ ನಡೆಯುತ್ತಿದ್ದ ಪ್ರಕರಣಗಳು ಈಗ ಶಾಲಾ - ಕಾಲೇಜುಗಳಲ್ಲಿಯೂ ಸಹ ಮುನ್ನೆಲೆಗೆ ಬರುತ್ತಿವೆ.
-
#WATCH | Delhi: Sanjay, father of student Nikhil, who was stabbed to death yesterday in Delhi University's South Campus by few assailants, breaks down while speaking to media pic.twitter.com/brc83BKyd3
— ANI (@ANI) June 19, 2023 " class="align-text-top noRightClick twitterSection" data="
">#WATCH | Delhi: Sanjay, father of student Nikhil, who was stabbed to death yesterday in Delhi University's South Campus by few assailants, breaks down while speaking to media pic.twitter.com/brc83BKyd3
— ANI (@ANI) June 19, 2023#WATCH | Delhi: Sanjay, father of student Nikhil, who was stabbed to death yesterday in Delhi University's South Campus by few assailants, breaks down while speaking to media pic.twitter.com/brc83BKyd3
— ANI (@ANI) June 19, 2023
ಹೌದು, ದೆಹಲಿಯ ಸೌತ್ ಕ್ಯಾಂಪಸ್ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಯಭಟ್ಟ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದ್ದು, ತಲೆಮರಿಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯಾದ ವಿದ್ಯಾರ್ಥಿ ನಿಖಿಲ್ ಎಂದು ತಿಳಿದು ಬಂದಿದ್ದು, ಆರೋಪಿಗಳನ್ನು ಬಿಂದಾಪುರ ನಿವಾಸಿ ರಾಹುಲ್ (19) ಮತ್ತು ಜನಕಪುರಿ ನಿವಾಸಿ ಹರೂನ್ (19) ಎಂದು ಗುರುತಿಸಲಾಗಿದೆ.
ಮಾಹಿತಿ ಪ್ರಕಾರ, ಕೆಲ ದಿನಗಳ ಹಿಂದೆ ಯುವತಿಗೆ ಕಿರುಕುಳ ನೀಡುವ ಬಗ್ಗೆ ನಿಖಿಲ್ ಮತ್ತು ರಾಹುಲ್, ಹರೂನ್ ನಡುವೆ ವಾಗ್ವಾದ ನಡೆದಿತ್ತು. ನಿಖಿಲ್ ಕಾಲೇಜು ಗೇಟ್‌ನ ಹೊರಗೆ ಒಬ್ಬನೇ ಇದ್ದಾಗ ಸಿಕ್ಕ ಅವಕಾಶ ಬಿಡಬಾರದೆಂದು ರಾಹುಲ್ ಮತ್ತು ಹರೂನ್ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣದ ಆರೋಪಿಗಳನ್ನು ಪೊಲೀಸರು ಗುರುತಿಸಿ, ಕೊಲೆ ಪ್ರಕರಣದಡಿ ಬಂಧಿಸಿದ್ದಾರೆ.
ಕೊಲೆ ಎಂಬುದು ದೃಢಪಡಿಸಿದ ದಕ್ಷಿಣ ಡಿಸಿಪಿ: ಚರಕ್ ಪಾಲಿಕೆ ಆಸ್ಪತ್ರೆಯಿಂದ ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ನಿಖಿಲ್ ಚೌಹಾಣ್ ಎಂಬ 19 ವರ್ಷದ ಯುವಕ ಪಶ್ಚಿಮ ಬಿಹಾರದ ನಿವಾಸಿ. ಇವರಿಗೆ ಚೂರಿ ಇರಿತವಾಗಿದ್ದು, ಆರ್ಯಭಟ್ಟ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ. ಕೊಲೆಯಾದ ಯುವಕ ಬಿಎ ಆನರ್ಸ್ ರಾಜ್ಯಶಾಸ್ತ್ರದಲ್ಲಿ ವ್ಯಾಸಂಗ ಮಾಡುತ್ತಿದ್ದನು. ನಿಖಿಲ್ ಸಾವಿನ ನಂತರ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
-
#WATCH | "Police have told us nothing so far. We did not have a word with Police till now. Yesterday at 12pm, I received a call from the students who took my son to the hospital...Police kept these students here (Police station) throughout the night...": Sanjay, Father of student… https://t.co/XiEPXXCeA4 pic.twitter.com/qFwkoLCzLG
— ANI (@ANI) June 19, 2023 " class="align-text-top noRightClick twitterSection" data="
">#WATCH | "Police have told us nothing so far. We did not have a word with Police till now. Yesterday at 12pm, I received a call from the students who took my son to the hospital...Police kept these students here (Police station) throughout the night...": Sanjay, Father of student… https://t.co/XiEPXXCeA4 pic.twitter.com/qFwkoLCzLG
— ANI (@ANI) June 19, 2023#WATCH | "Police have told us nothing so far. We did not have a word with Police till now. Yesterday at 12pm, I received a call from the students who took my son to the hospital...Police kept these students here (Police station) throughout the night...": Sanjay, Father of student… https://t.co/XiEPXXCeA4 pic.twitter.com/qFwkoLCzLG
— ANI (@ANI) June 19, 2023
ಗರ್ಲ್ ಫ್ರೆಂಡ್ಗೆ ಕಿರುಕುಳ: 7 ದಿನಗಳ ಹಿಂದೆ ನಿಖಿಲ್ ಗೆಳತಿಯ ಬಳಿ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ಅನುಚಿತವಾಗಿ ವರ್ತಿಸಿರುವುದು ದೆಹಲಿ ಪೊಲೀಸರಿಗೆ ತನಿಖೆ ವೇಳೆ ಗೊತ್ತಾಗಿದೆ. ಇದೇ ವಿಚಾರವಾಗಿ ಕೆಲ ದಿನಗಳ ಹಿಂದೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಭಾನುವಾರ ಮಧ್ಯಾಹ್ನ ಕಾಲೇಜು ಗೇಟ್‌ನ ಹೊರಗೆ ಮೂವರು ಹುಡುಗರು ನಿಖಿಲ್ನನ್ನು ಭೇಟಿ ಮಾಡಿದ್ದರು. ಆಗ ನಿಖಿಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ನಿಖಿಲ್ನನ್ನು ಸಮೀಪದ ಚರಕ್ ಪಾಲಿಕಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ವೇಳೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಎದೆಗೆ ಇರಿತದಿಂದ ಸಾವು: ಎದೆಗೆ ಇರಿದ ಕಾರಣ ನಿಖಿಲ್ ಚೌಹಾಣ್ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದಿದ್ದೇವೆ ಎಂದು ನಿಖಿಲ್ ತಂದೆ ತಿಳಿಸಿದ್ದಾರೆ. ಇಬ್ಬರ ನಡುವೆ ಜಗಳ ನಡೆದಿದೆ ಎಂದು ತಿಳಿಸಿದರು.
ಆರೋಪಿಗಳ ಬಂಧನ: ರಾಹುಲ್ ಕೂಡ ಬಿಎ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದು, ರಾಹುಲ್‌ನ ಸ್ನೇಹಿತ ಹರೂನ್ ಶಾಲೆಯನ್ನು ತೊರೆದಿದ್ದಾನೆ. ಘಟನೆಯಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ಯುವಕರನ್ನು ನಾವು ಗುರುತಿಸಿದ್ದೇವೆ ಎಂದು ಅಧಿಕಾರಿ ಹೇಳಿದರು. ಮರಣೋತ್ತರ ಪರೀಕ್ಷೆ ಬಳಿಕ ನಿಖಿಲ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಘಟನೆ ಸಂಬಂಧಿಸಿದ ಇನ್ನಿಬ್ಬರು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಓದಿ: ಮಗನ ಬರ್ತ್ಡೇಗೆ ಬೈಕ್ ಗಿಫ್ಟ್ ಕೊಡಲು ತಯಾರಿ.. ಸಾವಿರ ರೂಪಾಯಿಗಾಗಿ ನಡೆದ ಜಗಳದಲ್ಲಿ ಯುವಕನ ಕೊಂದ ಸ್ನೇಹಿತ!