ETV Bharat / bharat

ಜೈಲಿನಿಂದ ಹೊರಬಂದ ಹತ್ತೇ ದಿನದಲ್ಲಿ 6 ಜನರಿಗೆ ಚಾಕುವಿನಿಂದ ಇರಿದ ರೌಡಿಶೀಟರ್!

History sheeter stabs people: ಹತ್ತು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿಶೀಟರ್‌ವೊಬ್ಬ ತನ್ನ ಗ್ರಾಮದ ಜನರ ಮೇಲೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಚಾಕು ಇರಿತ
ಚಾಕು ಇರಿತ
author img

By

Published : Jul 28, 2023, 8:28 AM IST

ಪ್ರಯಾಗ್‌ರಾಜ್ (ಉತ್ತರ ಪ್ರದೇಶ) : 10 ದಿನಗಳ ಹಿಂದಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದ ಇಲ್ಲಿನ ರೌಡಿಶೀಟರ್‌ವೊರ್ವ ತನ್ನ ಹಳೆಯ ಚಾಳಿಯನ್ನೇ ಮುಂದುವರೆಸಿದ್ದಾನೆ. ರಾಜಾಬಾಬು ಎಂಬಾತ ಪ್ರಯಾಗ್‌ರಾಜ್ ಜಿಲ್ಲೆಯ ಥಾರ್ವಾಯ್‌ನ ಪಡಿಲಾ ಎಂಬ ಗ್ರಾಮದಲ್ಲಿ 6 ಮಂದಿಗೆ ಚಾಕುವಿನಿಂದ ಜನರಿಗೆ ಇರಿದು ಗಾಯಗೊಳಿಸಿದ್ದಾನೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋಪಗೊಂಡ ಜನರು ರಾಜಾ ಬಾಬುನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ಆರೋಪಿಯನ್ನು ಇಲ್ಲಿನ ಎಸ್​ಆರ್​ಎನ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂಪೂರ್ಣ ವಿವರ: ತರವಾಯಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡಿಲಾ ಗ್ರಾಮದ ರಾಜಾ ಬಾಬು ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಕೆಲವು ತಿಂಗಳ ಹಿಂದೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಈತನ ಕಾಲಿಗೆ ಗುಂಡು ತಗುಲಿತ್ತು. ಚಿಕಿತ್ಸೆಯ ಬಳಿಕ ಜೈಲಿಗೆ ಕಳುಹಿಸಲಾಗಿತ್ತು. ಹತ್ತು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದನು. ಈತನ ಗ್ರಾಮದ ಕಾರ್ಮಿಕ ಲಾಲ್ಜಿ ಭಾರತಿಯ ಎಂಬಾತ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ವಾಗ್ವಾದ ನಡೆಸಿದ್ದಾನೆ. ಇಬ್ಬರ ನಡುವೆ ಗಲಾಟೆ ನಡೆದು ರಾಜಾ ಬಾಬು ಲಾಲ್ಜಿಯನ್ನು ಥಳಿಸಿದ್ದಾನೆ.

ಇದನ್ನೂ ಓದಿ: Bengaluru crime: ಬೆಂಗಳೂರಿನಲ್ಲಿ ಪತ್ನಿ ಕೊಂದು ಅತ್ತೆಗೆ ಕರೆ ಮಾಡಿದ ಅಳಿಯ

ಥಳಿತಕ್ಕೊಳಗಾದ ಲಾಲ್ಜಿ ಮನೆಗೆ ಬಂದು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ. ಸೋದರ ಸಂಬಂಧಿ ಸುರೇಶ್​ ಎಂಬಾತ ರಾಜಾ ಬಾಬು ಮನೆಗೆ ಬಂದು ಪ್ರಶ್ನಿಸಿದ್ದಾನೆ. ಇದೇ ವಿಚಾರದಲ್ಲಿ ಪರಿಸ್ಥಿತಿ ತೀವ್ರ ಸ್ರೂಪ ಪಡೆದು ರಾಜಾ ಬಾಬು ಚಾಕು ತೆಗೆದುಕೊಂಡು ಲಾಲ್ಜಿ ಮತ್ತು ಸುರೇಶ್ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ. ಗಾಯಾಳುಗಳ ಕಿರುಚಾಟ ಕೇಳಿದ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ರೌಡಿಶೀಟರ್ ಮತ್ತಷ್ಟು ಜನರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಸ್ಥಳೀಯರು ಹರಸಾಹಸಪಟ್ಟು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ.

"ಘಟನೆ ಕುರಿತು ಲಾಲ್ಜಿ ಭಾರತಿಯ ಅವರ ತಂದೆ ಕಮಲೇಶ್ ನೀಡಿದ ದೂರಿನ ಮೇರೆಗೆ ಸಂಬಂಧಿತ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ರಾಜಾ ಬಾಬು ವಿರುದ್ಧ ಪ್ರಕರಣ ದಾಖಲಿಸಲಾಗಿದೆ" ಎಂದು ಠಾಣಾಧಿಕಾರಿ ಲೋಕೇಂದ್ರ ತ್ರಿಪಾಠಿ ತಿಳಿಸಿದರು.

ಇದನ್ನೂ ಓದಿ: CPI(M) leader shot dead: ರಾಂಚಿಯಲ್ಲಿ ಸಿಪಿಐ(ಎಂ) ಮುಖಂಡನ ಗುಂಡಿಕ್ಕಿ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.