ETV Bharat / bharat

ಪತ್ನಿ, ಪುಟ್ಟ ಮಗುವನ್ನು ಕೊಡಲಿಯಿಂದ ಹತ್ಯೆಗೈದ ವ್ಯಕ್ತಿ! - ದಾತಾಗಂಜ್​​ನ ಕೊತ್ವಾಲಿ ಪ್ರದೇಶದಲ್ಲಿ ಘಟನೆ

ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ 8 ತಿಂಗಳ ಮಗುವನ್ನು ಕೊಡಲಿಯಿಂದ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

crime-news-in-badaun-man-killed-his-wife-and-daughter-with-an-axe
ಕೌಟುಂಬಿಕ ಕಲಹ ಶಂಕೆ : ಪತ್ನಿ ಮತ್ತು ಪುಟ್ಟ ಮಗುವನ್ನು ಕೊಡಲಿಯಿಂದ ಹತ್ಯೆಗೈದ ವ್ಯಕ್ತಿ
author img

By

Published : Aug 16, 2023, 10:43 PM IST

ಬುಡೌನ್​ (ಉತ್ತರಪ್ರದೇಶ) : ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು 8 ತಿಂಗಳ ಮಗುವನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ದಾತಾಗಂಜ್​​ನ ಕೊತ್ವಾಲಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪತ್ನಿ ಮತ್ತು ಮಗು ಮನೆಯಲ್ಲಿ ಮಲಗಿದ್ದ ವೇಳೆ ಆರೋಪಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ. ಮೃತರನ್ನು ಖುಷ್ಬೂ ಹಾಗೂ 8 ತಿಂಗಳ ಹೆಣ್ಣು ಮಗು ಎಂದು ಗುರುತಿಸಲಾಗಿದೆ. ಅಖಿಲೇಶ್ ಅಲಿಯಾಸ್​ ಅಜಯ್ ಕೊಲೆಗೈದ ಆರೋಪಿ.

ಘಟನೆ ಸಂಬಂಧ ಮಾಹಿತಿ ನೀಡಿದ ಪೊಲೀಸರು, ಇಲ್ಲಿನ ದಾತಾಗಂಜ್​ ಎಂಬಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಹೆಣ್ಣು ಮಗುವನ್ನು ಹತ್ಯೆ ಮಾಡಿದ್ದಾನೆ. ಈ ಸಂಬಂಧ ಮಾಹಿತಿ ದೊರೆತ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ಅಖಿಲೇಶ್​ನನ್ನು ಬಂಧಿಸಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.

ಆರೋಪಿ ಅಖಿಲೇಶ್​​ ಕಳೆದ ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಈ ಸಂದರ್ಭ ಬಿಹಾರ ಮೂಲದ ಖುಷ್ಬು ಎಂಬಾಕೆಯ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಖುಷ್ಬು ಪೋಷಕರು ದೆಹಲಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.

ಬಳಿಕ ಆರೋಪಿ ಅಖಿಲೇಶ್​ ಖುಷ್ಬುವನ್ನು ಮದುವೆಯಾಗಿ ಉತ್ತರಪ್ರದೇಶದ ಕೊತ್ವಾಲಿ ಗ್ರಾಮಕ್ಕೆ ಕರೆತಂದಿದ್ದ. ಇಲ್ಲಿ ದಂಪತಿಗಳು ಒಂದು ಮನೆಯಲ್ಲಿ ವಾಸವಾಗಿದ್ದರು. ಈ ನಡುವೆ ಬುಧವಾರ ಬೆಳಗ್ಗೆ ಮಲಗಿಕೊಂಡಿದ್ದ ಪತ್ನಿ ಮತ್ತು ಪುಟ್ಟ ಮಗಳ ಮೇಲೆ ಏಕಾಏಕಿ ಅಖಿಲೇಶ್ ಕೊಡಲಿಯಿಂದ ದಾಳಿ ನಡೆಸಿದ್ದ. ಈ ವೇಳೆ ಗಂಭೀರ ಗಾಯಗೊಂಡ ಇಬ್ಬರ ಪ್ರಾಣ ಪಕ್ಷಿ ಸ್ಥಳದಲ್ಲೇ ಹಾರಿಹೋಗಿತ್ತು. ಖುಷ್ಬು ಅಜಯ್​ನಲ್ಲಿ ತನ್ನ ತಾಯಿಯ ಮನೆಗೆ ಹೋಗಬೇಕೆಂದು ಪದೇ ಪದೇ ಒತ್ತಾಯಿಸುತ್ತಿದ್ದಳು. ಈ ವಿಚಾರವಾಗಿಯೇ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಅಜಯ್​ ತಾಯಿ ಮತ್ತು ತಂದೆ ಬರೇಲಿಯಲ್ಲಿ ಪ್ರತ್ಯೇಕ ಮನೆಯಲ್ಲಿ ವಾಸವಾಗಿದ್ದರು. ಅಜಯ್​ ತನ್ನ ಇಬ್ಬರು ತಂಗಿಯರೊಂದಿಗೆ ವಾಸವಿದ್ದ. ಇಬ್ಬರು ಸಹೋದರಿಯರ ಮುಂದೆಯೇ ಅಜಯ್​ ಕೃತ್ಯ ಎಸಗಿದ್ದು, ಸಹೋದರಿಯರು ಭಯಭೀತಗೊಂಡಿದ್ದಾರೆ. ಸದ್ಯ ಅಖಿಲೇಶ್​ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ : ಮೊಬೈಲ್ ಕದ್ದು ಗೂಗಲ್ ಪೇ, ಫೋನ್ ಪೇ ಮೂಲಕ ಹಣ ದೋಚುತ್ತಿದ್ದ ಅಂತರ್‌ರಾಜ್ಯ ಕಳ್ಳರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.