ರಾಯ್ ಬರೇಲಿ(ಉತ್ತರಪ್ರದೇಶ): ರಾಯ್ ಬರೇಲಿ ಜಿಲ್ಲೆಯಲ್ಲಿ ಒಂದು ಆಘಾತಕರ ಘಟನೆಯೊಂದು ನಡೆದಿದೆ. ಕೆರೆಗೆ ಈಜಲು ತೆರಳಿದ್ದ ಐವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗದಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿ ಮಂಗತಾ ಪೂರ್ವ ಗ್ರಾಮದಲ್ಲಿ ಶನಿವಾರ ಜರುಗಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಮುಗಿಲು ಮುಟ್ಟಿದ ಪೋಷಕರ ಆಕ್ರಂದನ:ಸುತ್ತಮುತ್ತಲಿನ ಜನರು ಕೆರೆಗೆ ಧಾವಿಸಿ, ಸಮಯ ವ್ಯರ್ಥ ಮಾಡದೇ, ಮಕ್ಕಳನ್ನು ಉಳಿಸಲು ಸಾಕಷ್ಟು ಪ್ರಯತ್ನ ಪಟ್ಟರು. ಆದರೆ, ಮಕ್ಕಳನ್ನು ಹೊರ ತೆಗೆಯುವಷ್ಟರಲ್ಲಿ ಐವರು ಮಕ್ಕಳ ಪ್ರಾಣಪಕ್ಷಿ ಹೊರಟ ಹೋಗಿತು. ಪೊಲೀಸರು ಮಕ್ಕಳ ಸಾವಿನ ಸುದ್ದಿ ಕೇಳಿದ ತಕ್ಷಣ ಸ್ಥಳಕ್ಕೆ ಧಾವಿಸಿದರು. ಪರಿಶೀಲಿಸಿದ ಪೊಲೀಸರು ಮಕ್ಕಳ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಗ್ರಾಮದಲ್ಲಿ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತಪಟ್ಟ ಮಕ್ಕಳು ಮೂರು ಕುಟುಂಬಕ್ಕೆ ಸೇರಿದವರು: ಕೆರೆ ನೀರಿನಲ್ಲಿ ಮುಳಗಿ ಮೃತಪಟ್ಟ ಮಕ್ಕಳು ಮೂರು ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಏಕಕಾಲಕ್ಕೆ ಐವರು ಮಕ್ಕಳ ಸಾವಿನಿಂದ ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಗ್ರಾಮದಲ್ಲಿ ಮೂರು ಕುಟುಂಬಗಳಲ್ಲಿ ಮಕ್ಕಳಿಲ್ಲದೇ ದೀಪ ಆರಿದಂತಾಗಿದೆ ಎಂದು ಕುಟುಂಬಸ್ಥರಯ ದುಃಖ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : Chikkamagaluru crime: ಎರಡನೇ ಹೆಂಡತಿ ಕಡೆ ಗಂಡನಿಗೆ ಹೆಚ್ಚಿನ ಒಲವು: ಸವತಿಯನ್ನು ಕೊಂದು ಪೊಲೀಸರಿಗೆ ಶರಣಾದ ಮೊದಲ ಪತ್ನಿ
ಜೀವರಕ್ಷಣೆಗೆ ಕಿರುಚಾಡಿದ ಐವರು ಮಕ್ಕಳು: ಗದಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗತಾ ಪೂರ್ವ ಗ್ರಾಮದ ನಿವಾಸಿಗಳಾದ ಸೋನು ಅವರ ಪುತ್ರ ಅಮಿತ್ ಮತ್ತು ಪುತ್ರಿ ಸೋನಂ, ವಿಕ್ರಮ್ ಅವರ ಪುತ್ರಿ ವೈಶಾಲಿ , ರೂಪಾಲಿ ಮತ್ತು ಜೀತು ಅವರ ಪುತ್ರಿ ರೀತು ಗ್ರಾಮದ ಇತರ ಮೂವರು ಮಕ್ಕಳೊಂದಿಗೆ ಗ್ರಾಮದ ಸಮೀಪದ ಕೆರೆಗೆ ಈಜುವುದಕ್ಕೆ ತೆರಳಿದ್ದರು.
ಈ ಐವರಿಗೆ ಕೆರೆಯಲ್ಲಿ ಆಳವಾದ ನೀರು ಇರುವುದು ಗೊತ್ತಾಗಿಲ್ಲ. ಮಕ್ಕಳು ಆಡುವ ಗುಂಗಿನಲ್ಲಿ ಈಜುತ್ತಾ ಆಳವಾದ ನೀರಿಗೆ ಇಳಿದಿದ್ದಾರೆ. ಒಟ್ಟಿಗೆ ಎಲ್ಲರೂ ಮುಳುಗಲು ಪ್ರಾರಂಭಿಸುತ್ತಿದ್ದಂತೆ ಜೀವ ರಕ್ಷಣೆಗೆ ಕಿರುಚಾಡಿದ್ದಾರೆ. ಮಕ್ಕಳ ಕಿರುಚಾಟದ ಶಬ್ಧ ಕೇಳಿ ಸುತ್ತಲಿನವರು ಓಡಿ ಬಂದು ಮಕ್ಕಳನ್ನು ಕೆರೆಯಿಂದ ಹೊರತೆಗೆಯುವಷ್ಟರಲ್ಲಿ ಮಕ್ಕಳು ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಂದ ತನಿಖೆ: ಮಕ್ಕಳನ್ನು ಕಳೆದುಕೊಂಡು ಕುಟುಂಬಗಳಲ್ಲಿ ದುಃಖ ಮಡುಗಟ್ಟಿತ್ತು. ಸ್ಥಳದಲ್ಲಿ ಅಪಾರ ಜನಸ್ತೋಮ ಸೇರಿತ್ತು. ಪೊಲೀಸರು ಈ ಸಂಬಂದ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಪೊಲೀಸ್ ಅಧಿಕಾರಿ ಡಾಲ್ಮೌ ಇಂದರ್‌ಪಾಲ್ ಸಿಂಗ್ ಈ ವಿಚಾರವನ್ನ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ದಾವಣಗೆರೆಯಲ್ಲಿ ಮನೆ ಬಾಗಿಲು ಒಡೆದು ಕಳ್ಳತನ.. 6 ಜನ ಆರೋಪಿಗಳ ಬಂಧನ, 25 ಲಕ್ಷ ಮೌಲ್ಯದ ಚಿನ್ನಾಭರಣ ವಶ