ETV Bharat / bharat

Husband kills wife: ಶೀಲ ಶಂಕಿಸಿ ಪತ್ನಿಯ ಹತ್ಯೆ.. ಪೊಲೀಸ್​ ಠಾಣೆಗೆ ಶರಣಾದ ಪತಿ - husband killed his wife suspicion of affair

ಪತಿಯೋರ್ವ ಶೀಲ ಶಂಕಿಸಿ ಪತ್ನಿಯನ್ನು ಹತ್ಯೆಗೈದಿರುವ ಘಟನೆ ರಾಜಸ್ಥಾನ ಬಹ್ರೈಚ್​ ಜಿಲ್ಲೆಯಲ್ಲಿ ನಡೆದಿದೆ.

crime-husband-killed-his-wife-suspicion-of-affair-in-bahraich-and-surrender-to-police
ಶೀಲ ಶಂಕಿಸಿ ಪತ್ನಿಯ ಹತ್ಯೆ : ಪೊಲೀಸ್​ ಠಾಣೆಗೆ ಶರಣಾದ ಪತಿ
author img

By ETV Bharat Karnataka Team

Published : Sep 3, 2023, 6:33 PM IST

ಬಹ್ರೈಚ್​ (ರಾಜಸ್ಥಾನ) : ಪತಿಯೋರ್ವ ಶೀಲ ಶಂಕಿಸಿ ಪತ್ನಿಯನ್ನು ಕತ್ತು ಸೀಳಿ ಹತ್ಯೆಗೈದಿರುವ ದಾರುಣ ಘಟನೆ ರಾಜಸ್ಥಾನದ ಬಹ್ರೈಚ್​​ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ರೇಷ್ಮಾ ಎಂದು ಗುರುತಿಸಲಾಗಿದ್ದು, ಆರೋಪಿ ಪತಿ ಆಸಿಫ್​ ಹತ್ಯೆ ಬಳಿಕ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ.

ಇಲ್ಲಿನ ದರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯ ಮೊಹಲ್ಲಾ ಸಲಾರಗಂಜ್ ಬಳಿಯ ಘೋಸಿಯಾರಿ ಮಸೀದಿ ಬಳಿ ಆಸಿಫ್​ ದಂಪತಿ ವಾಸವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಶನಿವಾರ ರಾತ್ರಿ ಎಂದಿನಂತೆ ರೇಷ್ಮಾ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿ ಮಲಗಿಕೊಂಡಿದ್ದಳು. ಈ ವೇಳೆ ಆಗಮಿಸಿದ್ದ ಆಸಿಫ್​ ಮಲಗಿದ್ದ ಮಕ್ಕಳನ್ನು ಎಬ್ಬಿಸಿ ಮನೆಯಿಂದ ಹೊರಗೆ ಹೋಗುವಂತೆ ಹೇಳಿದ್ದಾನೆ. ಮಕ್ಕಳು ಹೊರ ಹೋದ ಬಳಿಕ ಆಸಿಫ್​ ತನ್ನ ಪತ್ನಿ ರೇಷ್ಮಾಳಿಗೆ ಮನಸೋಇಚ್ಛೆ ಥಳಿಸಿದ್ದಾನೆ. ಬಳಿಕ ರೇಷ್ಮಾ ಪ್ರಜ್ಞಾಹೀನಳಾಗಿದ್ದು, ಈ ವೇಳೆ ಆರೋಪಿ ರೇಷ್ಮಾಳನ್ನು ಕತ್ತು ಸೀಳಿ ಹತ್ಯೆಗೈದಿದ್ದಾನೆ. ಬಳಿಕ ಮರುದಿನ(ಭಾನುವಾರ) ಬೆಳಿಗ್ಗೆ ಆರೋಪಿಯು ಇಲ್ಲಿನ ಪೊಲೀಸ್​ ಠಾಣೆಗೆ ಆಗಮಿಸಿ ಪತ್ನಿಯನ್ನು ಹತ್ಯೆ ಮಾಡಿರುವುದಾಗಿ ಪೊಲೀಸ್​ ಠಾಣೆಗೆ ಶರಣಾಗಿದ್ದಾನೆ. ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಮಕ್ಕಳ ಮುಂದೆಯೇ ತಾಯಿಯ ಹತ್ಯೆ : ಆರೋಪಿ ಆಸಿಫ್​ ಮಕ್ಕಳ ಎದುರಲ್ಲೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಮೃತ ರೇಷ್ಮಾಳ ಆರು ವರ್ಷದ ಮಗ ಅಳುತ್ತಾ ಘಟನೆ ಬಗ್ಗೆ ವಿವರಿಸಿದ್ದು, ತಂದೆ ನಮಗೆ ತಿನ್ನಲು ತಿಂಡಿ ನೀಡಿ ಮನೆಯ ಹೊರ ಕಳುಹಿಸಲು ಮುಂದಾದರು. ಆದರೆ ನಾವು ಎಲ್ಲರೂ ಹೊರಗೆ ಹೋಗಲಿಲ್ಲ. ನಾನು ಒಳಗೆ ಇದ್ದೆ. ಈ ವೇಳೆ ತಂದೆ ತಾಯಿಯನ್ನು ಥಳಿಸಿದರು. ಬಳಿಕ ಆಕೆಯ ಮೊಬೈಲ್​ ಕಿತ್ತುಕೊಂಡು ಹಲ್ಲೆ ನಡೆಸಿದರು. ಈ ವೇಳೆ ಅವರು ಪ್ರಜ್ಞಾಹೀನರಾಗಿದ್ದು, ಬಳಿಕ ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ, ಮೃತ ರೇಷ್ಮಾ ಯಾರೊಂದಿಗೋ ಮೊಬೈಲಿನಲ್ಲಿ ಮಾತನಾಡುತ್ತಿದ್ದಳು. ಇದರಿಂದ ಕೋಪಗೊಂಡು ಆರೋಪಿ ಆಸಿಫ್ ಹತ್ಯೆ ಮಾಡಿದ್ದಾನೆ. ಬಳಿಕ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಮೃತ ರೇಷ್ಮಾ ಅವರ ತಾಯಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Mysore crime: ಪತ್ನಿಯ ಶೀಲ ಶಂಕಿಸಿ ಹತ್ಯೆ.. ಬಳಿಕ ತಾನೇ ಪೊಲೀಸರಿಗೆ ಶರಣಾದ ಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.