ETV Bharat / bharat

ಸಿಎಎ & ಎನ್‌ಆರ್‌ಸಿ ಹಿಂಸಾಚಾರದಲ್ಲಿ ದೆಹಲಿ ಹೆಡ್‌ ಕಾನ್ಸ್‌ಟೇಬಲ್‌ ಹತ್ಯೆ: 3 ವರ್ಷಗಳ ನಂತರ ಆರೋಪಿ ಚಿಕ್ಕಬಳ್ಳಾಪುರದಲ್ಲಿ ಸೆರೆ!

author img

By

Published : Jun 22, 2023, 10:25 PM IST

2020ರ ಹಿಂಸಾಚಾರದಲ್ಲಿ ಹೆಡ್ ಕಾನ್‌ಸ್ಟೆಬಲ್ ರತನ್ ಲಾಲ್ ಹತ್ಯೆಯ ಪ್ರಮುಖ ಆರೋಪಿ ಮೊಹಮ್ಮದ್ ಅಯಾಜ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

Mastermind arrested after 3 years
3 ವರ್ಷಗಳ ನಂತರ ಮಾಸ್ಟರ್ ಮೈಂಡ್ ಬಂಧನ

ನವದೆಹಲಿ: ಮೂರು ವರ್ಷಗಳ ಹಿಂದೆ ಪೂರ್ವ ದೆಹಲಿ ಗಲಭೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ರತನ್ ಲಾಲ್ ಹತ್ಯೆಯ ಪ್ರಮುಖ ಸಂಚುಕೋರನನ್ನು ದೆಹಲಿ ಪೊಲೀಸ್ ವಿಶೇಷ ವಿಭಾಗ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಂಧಿಸಿದೆ. ಈತನಿಗಾಗಿ ಒಂದು ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ದೆಹಲಿಯ ಚಾಂದ್‌ಬಾಗ್ ನಿವಾಸಿ ಮೊಹಮ್ಮದ್ ಅಯಾಜ್ ಬಂಧಿತ ಆರೋಪಿ.

ಇದನ್ನೂ ಓದಿ: Bengaluru crime: ಮಾಜಿ ಸಿಎಂ ನಿವಾಸದ ಬಳಿ ಅಪಾರ್ಟ್ ಮೆಂಟ್​ನ ಸೆಕ್ಯೂರಿಟಿ ಗಾರ್ಡ್​ ಸಿಬ್ಬಂದಿ ಮೇಲೆ ಹಲ್ಲೆ‌ ಕೇಸ್​.. ಆರೋಪಿ ಬಂಧನ

ಆರೋಪಿಯನ್ನು ಬಂಧಿಸಲು ಪೊಲೀಸರ ತಂಡವು ಬಹಳ ಸಮಯದಿಂದ ಕಾರ್ಯಾಚರಣೆಯಲ್ಲಿ ತೊಡಗಿತ್ತು ಎಂದು ವಿಶೇಷ ವಿಭಾಗದ ಸಿಪಿ ಎಚ್.ಎಸ್. ಧಲಿವಾಲ್ ಹೇಳಿದ್ದಾರೆ. ಆದರೆ, ಈತ ಎಲ್ಲಿ ತಲೆಮರೆಸಿಕೊಂಡಿದ್ದ ಎಂಬ ಸ್ಥಳವನ್ನು ಸರಿಯಾಗಿ ಕಂಡುಹಿಡಿಯಲು ಆಗಿರಲಿಲ್ಲ. ಜೂನ್ ಮೊದಲ ವಾರದಲ್ಲಿ ವಿಶೇಷ ವಿಭಾಗದ ತಂಡಕ್ಕೆ ಆತ ಬೆಂಗಳೂರಿನಿಂದ 100 ಕಿಲೋ ಮೀಟರ್ ದೂರದಲ್ಲಿರುವ ಚಿಕ್ಕಬಳ್ಳಾಪುರದ ಹಳ್ಳಿಯೊಂದರಲ್ಲಿ ತಲೆಮರೆಸಿಕೊಂಡ ಮಾಹಿತಿ ದೊರೆತಿತ್ತು. ವಿಶೇಷ ದಳ ಅಲ್ಲಿಗೆ ಆಗಮಿಸಿ ಆತನನ್ನು ಬಂಧಿಸಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತಂದೆ ಸಾವು, ತಾಯಿ ಅನಾರೋಗ್ಯ, 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ.. ಬಿಆರ್​ಎಸ್​ ಪಾರ್ಟಿಯಿಂದ ಅಣ್ತಮ್ಮ ಅಮಾನತು

ಪ್ರಕರಣದ ಹಿನ್ನೆಲೆ: 2020ರ ಜನವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ರತನ್ ಲಾಲ್ ಕೊಲೆ ಮಾಡಲಾಗಿತ್ತು. ಡಿಸಿಪಿ ಶಹದಾರ ಅಮಿತ್ ಶರ್ಮಾ ಹಾಗೂ ಎಸಿಪಿ ಗೋಕುಲಪುರಿ ಅನುಜ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ, ಸಂಚುಕೋರ ಮೊಹಮ್ಮದ್ ಅಯಾಜ್ ತನ್ನ ಸಹೋದರ ಖಾಲಿದ್ ಮತ್ತು ಇತರ ಸಹಚರರೊಂದಿಗೆ ಸಿಎಎ ಮತ್ತು ಎನ್‌ಆರ್‌ಸಿಯನ್ನು ವಿರೋಧಿಸುತ್ತಿದ್ದರು. ಅದಕ್ಕಾಗಿಯೇ ಚಾಂದ್ ಬಾಗ್ ಪ್ರದೇಶದಲ್ಲಿ ಇಟ್ಟಿಗೆ, ಕಲ್ಲು ಮತ್ತು ಕಬ್ಬಿಣದ ರಾಡ್‌ಗಳಿಂದ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಪ್ರಕರಣ 2020ರ 24 ಫೆಬ್ರವರಿ ನಡೆದಿತ್ತು. ದಯಾಲ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಇತ್ತೀಚೆಗಿನ ಪ್ರಕರಣಗಳು- ಕಾನ್‌ಸ್ಟೆಬಲ್ ಹತ್ಯೆಗೈದ ಐಟಿಬಿಪಿ ಅಧಿಕಾರಿಯ ಪುತ್ರ: ದೆಹಲಿಯ ಚಾವ್ಲಾ ಪ್ರದೇಶದ ಬಳಿಯಿರುವ ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್ ಕ್ಯಾಂಪ್‌ನಲ್ಲಿ ಕಾನ್‌ಸ್ಟೆಬಲ್​ನನ್ನು ಐಟಿಬಿಪಿ ಅಧಿಕಾರಿಯೊಬ್ಬರ ಪುತ್ರ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಡಿಸಿಪಿ ದ್ವಾರಕಾ ಎಂ.ಹರ್ಷವರ್ಧನ್ ಈ ಪ್ರಕರಣವನ್ನು ದೃಢಪಡಿಸಿದ್ದಾರೆ. ''ಬುಧವಾರ ಮಧ್ಯಾಹ್ನ 2.20ಕ್ಕೆ ಐಟಿಬಿಪಿ ಕ್ಯಾಂಪ್ ಚಾವ್ಲಾದಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಮಾಹಿತಿ ದೊರೆತಿತ್ತು. ಬಳಿಕ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದಾಗ 36 ವರ್ಷದ ಕಾನ್‌ಸ್ಟೆಬಲ್ ಬುಲೆಟ್​ಗಳಿಂದ ಗಾಯಗೊಂಡು ಮೃತಪಟ್ಟಿರುವುದು ತಿಳಿಸಿದಿದೆ ಎಂದು ಅವರು ಹೇಳಿದ್ದಾರೆ. ನಿನ್ನೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಐಟಿಬಿಪಿ ಅಧಿಕಾರಿ ದಿಗ್ವಿಜಯ್ ಅವರ 32 ವರ್ಷದ ಪುತ್ರನನ್ನು ಅರೆಸ್ಟ್​ ಮಾಡಿದ್ದರು. ವಿಧಿವಿಜ್ಞಾನ ಪ್ರಯೋಗಾಲಯದ ತಂಡವನ್ನು ತನಿಖೆಗಾಗಿ ಸ್ಥಳಕ್ಕೆ ಕರೆಸಲಾಗಿತ್ತು.

ಇದನ್ನೂ ಓದಿ: ಶ್ರೀರಂಗಪಟ್ಟಣ ಬಳಿ ಹೃದಯವಿದ್ರಾವಕ ಘಟನೆ: ಇಬ್ಬರು ಮಕ್ಕಳ ಬರ್ಬರ ಹತ್ಯೆ, ಹೆಂಡ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪತಿ ಎಸ್ಕೇಪ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.