ETV Bharat / bharat

ವಿಶ್ವಕಪ್​ ಫೈನಲ್: ದೆಹಲಿಯ ಜೈಲುಗಳಲ್ಲಿ ಕೈದಿಗಳಿಗೆ ಪಂದ್ಯ ವೀಕ್ಷಿಸಲು ವ್ಯವಸ್ಥೆ - 20 ಸಾವಿರ ಕೈದಿಗಳಿಂದ ಪಂದ್ಯ ವೀಕ್ಷಣೆ

Cricket World Cup 2023: ವಿಶ್ವಕಪ್​ ಕ್ರಿಕೆಟ್​ ಫೈನಲ್ ಪಂದ್ಯ ವೀಕ್ಷಣೆಗೆ ದೆಹಲಿಯ ತಿಹಾರ್, ರೋಹಿಣಿ ಮತ್ತು ಮಂಡೋಲಿಯ ಜೈಲುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

cricket world cup: special-arrangements-made-to-watch the-match in delhi jails
ವಿಶ್ವಕಪ್​ ಫೈನಲ್: ದೆಹಲಿಯ ಜೈಲುಗಳಲ್ಲಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ
author img

By ETV Bharat Karnataka Team

Published : Nov 19, 2023, 3:51 PM IST

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್​ ಕ್ರಿಕೆಟ್​ ಫೈನಲ್ ಪಂದ್ಯ ವೀಕ್ಷಣೆಗೆ ದೆಹಲಿಯ ಜೈಲುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಆಮ್​ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್​ ಸಿಂಗ್​ ಸೇರಿ ಸುಮಾರು 20 ಸಾವಿರ ಕೈದಿಗಳು ಪಂದ್ಯ ವೀಕ್ಷಣೆ ಮಾಡುತ್ತಿದ್ದಾರೆ.

ಗುಜರಾತ್​ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್​ ಫೈನಲ್ ಪಂದ್ಯ ನಡೆಯುತ್ತಿದೆ. ಟೀಂ ಇಂಡಿಯಾ ಗೆಲುವಿಗಾಗಿ ದೇಶಾದ್ಯಂತ ಜನತೆ ಪ್ರಾರ್ಥಿಸುತ್ತಿದ್ದಾರೆ. ಹಲವೆಡೆ ಪೂಜೆ-ಪುನಸ್ಕಾರ ನೆರವೇರಿಸಲಾಗುತ್ತಿದೆ. ಸ್ಟೇಡಿಯಂನಲ್ಲಿ ತಂಡವನ್ನು ಹುರಿದುಂಬಿಸಲು ಹೆಚ್ಚಿನ ಅಭಿಮಾನಿಗಳು ಸೇರಿದ್ದಾರೆ. ಅನೇಕ ಕಡೆಗಳಲ್ಲಿ ಫೈನಲ್ ಹಣಾಹಣಿ ವೀಕ್ಷಿಸಲು ಜನರು ದೊಡ್ಡ ಪರದೆಯ ವಿಶೇಷ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ.

ಮೂರು ಜೈಲುಗಳಲ್ಲಿ 20 ಸಾವಿರ ಕೈದಿಗಳಿಂದ ಪಂದ್ಯ ವೀಕ್ಷಣೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೂರು ಜೈಲುಗಳಲ್ಲಿ ಮಹತ್ವದ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಅಂದಾಜು 20 ಸಾವಿರ ವಿಚಾರಣಾಧೀನ ಮತ್ತು ಶಿಕ್ಷೆಗೊಳಗಾದ ಕೈದಿಗಳು ಇಂಡಿಯಾ ಹಾಗೂ ಆಸೀಸ್​ ನಡುವೆ ಪಂದ್ಯ ವೀಕ್ಷಿಸಲಿದ್ದಾರೆ.

ಇದನ್ನೂ ಓದಿ: ನಾವು ಇಂದು ವಿಶ್ವಕಪ್‌ ಎತ್ತಿ ಹಿಡಿಯುವ ಭರವಸೆ ಇದೆ: ಸಚಿನ್ ತೆಂಡೂಲ್ಕರ್

ತಿಹಾರ್, ರೋಹಿಣಿ ಮತ್ತು ಮಂಡೋಲಿಯ ಜೈಲುಗಳಲ್ಲಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಪುರುಷರು, ಮಹಿಳೆಯರು ಮತ್ತು ತೃತೀಯ ಲಿಂಗಿ ಕೈದಿಗಳು ಜೈಲುಗಳಿಂದ ಭಾರತ ತಂಡವನ್ನು ಬೆಂಬಲಿಸಲಿದ್ದಾರೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ಡಿಸಿಎಂ ಮನೀಶ್ ಸಿಸೋಡಿಯಾ, ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ವಂಚನೆ ಪ್ರಕರಣದ ಆರೋಪಿ ಸುಖೇಶ್ ಚಂದ್ರಶೇಖರ್ ಕೂಡ ಪಂದ್ಯ ವೀಕ್ಷಣೆ ಮಾಡಲಾಗಿದೆ.

ಸಂಜಯ್ ಸಿಂಗ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ತಿಹಾರ್ ಜೈಲು ಸಂಕೀರ್ಣದ ಜೈಲು ಸಂಖ್ಯೆ 1 ಮತ್ತು 2ರ ಪ್ರತ್ಯೇಕ ಜೈಲುಗಳ ವಿಶೇಷ ವಾರ್ಡ್‌ಗಳಲ್ಲಿ ಇರಿಸಲಾಗಿದೆ. ಸುಕೇಶ್ ಚಂದ್ರಶೇಖರ್ ಮಂಡೋಲಿಯ ಜೈಲಿನಲ್ಲಿದ್ದಾನೆ. ಜೈಲಿನಲ್ಲಿರುವ ಕೈದಿಗಳಿಗೆ ವಾರ್ಡ್​ಗಳಲ್ಲಿ ಟಿವಿಗಳನ್ನು ಅಳವಡಿಸಲಾಗಿದೆ ಎಂದು ಕಾರಾಗೃಹ ಪ್ರಧಾನ ಕಚೇರಿಯ ಅಧಿಕಾರಿ ತಿಳಿಸಿದ್ದಾರೆ.

ಜೈಲಿನಲ್ಲಿ ಮನರಂಜನೆಗೆ ಸಂಬಂಧಿಸಿದಂತೆ ಅಗತ್ಯ ಮಾರ್ಗಸೂಚಿಗಳ ಪ್ರಕಾರ, ಅನೇಕ ಚಾನಲ್‌ಗಳನ್ನು ತೋರಿಸಲು ಅನುಮತಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ, ಕೆಲವು ಕೈದಿಗಳನ್ನು ಪ್ರತ್ಯೇಕ ಸೆಲ್‌ಗಳಲ್ಲಿ ಇರಿಸಲಾಗುತ್ತದೆ. ಅಲ್ಲಿಯೂ ಟಿವಿಗೆ ಅವಕಾಶವಿದೆ. ಇಂದು ಎಲ್ಲರೂ ಕ್ರಿಕೆಟ್ ವಿಶ್ವಕಪ್ ಪಂದ್ಯ ವೀಕ್ಷಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಭಾರತದ ಗೆಲುವಿಗೆ ಪ್ರಾರ್ಥಿಸಿದ ಮೊಹಮ್ಮದ್ ಶಮಿ ಹಳ್ಳಿಯ ಜನರು: ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.