ನವದೆಹಲಿ : ಮೇ 1ರಿಂದಲೇ 18 ರಿಂದ 45 ವರ್ಷದೊಳಗಿನ ಜನರಿಗೆ ಲಸಿಕೆ ಹಾಕುವ ಮೊದಲು ಹೆಚ್ಚುವರಿ ಖಾಸಗಿ ವ್ಯಾಕ್ಸಿನೇಷನ್ ಕೇಂದ್ರಗಳ ನೋಂದಣಿ ಮತ್ತು ಕೇಂದ್ರಗಳಲ್ಲಿ ಜನಸಮೂಹ ನಿರ್ವಹಣೆ ನಿಭಾಯಿಸಲು ಸಜ್ಜಾಗುವಂತೆ ಕೇಂದ್ರವು ರಾಜ್ಯಗಳಿಗೆ ತಾಕೀತು ಮಾಡಿದೆ.
ಮುಂದಿನ ಹಂತದ ಲಸಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗದರ್ಶನ ನೀಡಲು ಕೋವಿಡ್ -19 ಅಧ್ಯಕ್ಷ ಆರ್.ಎಸ್.ಶರ್ಮಾ ಅವರು ಉನ್ನತ ಮಟ್ಟದ ಸಭೆ ನಡೆಸಿದರು.
ಕೋವಿಡ್-19 ರೋಗಿಗಳಿಗೆ ಅಸ್ತಿತ್ವದಲ್ಲಿ ಇರುವ ಆಸ್ಪತ್ರೆ ಮತ್ತು ಕ್ಲಿನಿಕಲ್ ಚಿಕಿತ್ಸೆಯ ಮೂಲಸೌಕರ್ಯಗಳನ್ನು ಬಲಪಡಿಸುವಂತೆ ಕೇಳಿಕೊಂಡರು.
ಮೇ 1ರಿಂದ 3ನೇ ಹಂತದ ವ್ಯಾಕ್ಸಿನೇಷನ್ ಕಾರ್ಯತಂತ್ರ ಆರಂಭವಾಗಲಿದೆ. ಖಾಸಗಿ ಆಸ್ಪತ್ರೆಗಳು, ಕೈಗಾರಿಕಾ ಸಂಸ್ಥೆಗಳ ಆಸ್ಪತ್ರೆಗಳು, ಕೈಗಾರಿಕಾ ಸಂಘಗಳು ಜತೆಗೆ ತೊಡಗಿಸಿಕೊಳ್ಳುವ ಮೂಲಕ ಹೆಚ್ಚುವರಿ ಖಾಸಗಿ ಕೋವಿಡ್ -19 ವ್ಯಾಕ್ಸಿನೇಷನ್ ಕೇಂದ್ರಗಳನ್ನು (ಸಿವಿಸಿ) ನೋಂದಾಯಿಸಲು ರಾಜ್ಯಗಳಿಗೆ ಸೂಚಿಸಲಾಯಿತು ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಲಸಿಕೆಗಳನ್ನು ಸಂಗ್ರಹಿಸಿದ ಆಸ್ಪತ್ರೆಗಳ ಸಂಖ್ಯೆ ಮೇಲ್ವಿಚಾರಣೆ ಮತ್ತು ಕೋವಿನ್ ಪೋರ್ಟಲ್ನಲ್ಲಿ ಸ್ಟಾಕ್ ಮತ್ತು ಬೆಲೆಗಳನ್ನು ಘೋಷಿಸಲು ಹಾಗೂ ಕೋವಿನ್ನಲ್ಲಿ ವ್ಯಾಕ್ಸಿನೇಷನ್ ಸ್ಲಾಟ್ಗಳ ಸಾಕಷ್ಟು ಲಭ್ಯತೆ ಒದಗಿಸಲು ಅರ್ಹ ಜನಸಂಖ್ಯೆಗೆ ವ್ಯಾಕ್ಸಿನೇಷನ್ ನಿಗದಿಪಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.