ETV Bharat / bharat

ಒಮಿಕ್ರಾನ್ ಆಯ್ತು.. ಈಗ ಬಂತು ಒಮಿಕ್ರಾನ್ ಮತ್ತು ಡೆಲ್ಟಾ ಮಿಶ್ರಣ ಡೆಲ್ಮಿಕ್ರಾನ್ ! - ಡೆಲ್ಮಿಕ್ರಾನ್​ ಕುರಿತ ಮಾಹಿತಿ

ಹಲವಾರು ರೀತಿಯ ಕೊರೊನಾ ರೂಪಾಂತರಿಗಳಿಂದ ಜಗತ್ತು ಈಗಲೇ ಕಂಗಾಲಾಗಿದೆ. ವರ್ಷಾಂತ್ಯದಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ಭೀತಿಯನ್ನು ಜನರು ಎದುರಿಸುತ್ತಿರುವಾಗಲೇ ಡೆಲ್ಮಿಕ್ರಾನ್ ಎಂಬ ಹೊಸ ವೈರಸ್ ಕಾಣಿಸಿಕೊಂಡಿದೆ.

covid-new-variant-delmicron-details
ಒಮಿಕ್ರಾನ್ ಆಯ್ತು.. ಈಗ ಬಂತು ಒಮಿಕ್ರಾನ್ ಮತ್ತು ಡೆಲ್ಟಾ ಮಿಶ್ರಣ ಡೆಲ್ಮಿಕ್ರಾನ್ !
author img

By

Published : Dec 23, 2021, 2:34 PM IST

ನವದೆಹಲಿ: ಕೊರೊನಾ ಸೋಂಕಿನ ವಿವಿಧ ತಳಿಗಳು ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿವೆ. 2021ಕ್ಕೆ ಈ ಕೊರೊನಾ ಹಾವಳಿ ಮಾಯವಾಗಬಹುದು ಎಂಬ ಭರವಸೆಯನ್ನು ಈಗಾಗಲೇ ಒಮಿಕ್ರಾನ್ ಹುಸಿಗೊಳಿಸಿದೆ. ಈ ಬೆನ್ನಲ್ಲೇ ಕೊರೊನಾದ ಹೊಸ ತಳಿಯೊಂದು ಪತ್ತೆಯಾಗಿದೆ.

ಅಲ್ಫಾ, ಬೀಟಾ, ಕಪ್ಪಾ, ಡೆಲ್ಟಾ, ಡೆಲ್ಟಾ ಪ್ಲಸ್​ ನಂತರ ಹಾಗೂ ಒಮಿಕ್ರಾನ್ ಭೀತಿಯಲ್ಲಿ ಜಗತ್ತು ತತ್ತರಿಸಿದೆ. ಒಮಿಕ್ರಾನ್ ತಳಿಯ ಸಾಮರ್ಥ್ಯವೇನು? ಅದಕ್ಕೆ ಹಿಂದಿನ ಲಸಿಕೆಗಳು ಕೆಲಸ ಮಾಡುತ್ತವೆಯೇ? ಎಂಬ ಬಗ್ಗೆ ಪ್ರಯೋಗಗಳು ನಡೆಯುತ್ತಿರುವಾಗಲೇ ಹೊಸದೊಂದು ತಳಿ ಕಾಣಿಸಿಕೊಂಡಿದೆ. ಅದರ ಹೆಸರು ಡೆಲ್ಮಿಕ್ರಾನ್​.

ಹೊಸ ರೂಪಾಂತರಿ ಡೆಲ್ಮಿಕ್ರಾನ್ ವಿಭಿನ್ನ ಹೇಗೆ?

ಡೆಲ್ಮಿಕ್ರಾನ್ ಹೊಸ ರೂಪಾಂತರ ವೈರಸ್ ಅಮೆರಿಕ ಮತ್ತು ಯೂರೋಪ್​ನ ಹಲವಡೆ ಕಾಣಿಸಿಕೊಂಡಿದ್ದು, ಇದನ್ನು ಅರ್ಥಮಾಡಿಕೊಳ್ಳುವುದು ಅಷ್ಟೇನೂ ಕಷ್ಟವಲ್ಲ. ಸಿಂಪಲ್ಲಾಗಿ ಹೇಳುವುದಾದರೆ ಈ ಮೊದಲು ಕಾಣಿಸಿಕೊಂಡಿದ್ದ ಡೆಲ್ಟಾ ಮತ್ತು ಒಮಿಕ್ರಾನ್​ ರೂಪಾಂತರ ವೈರಸ್​ಗಳ ಮಿಶ್ರಣವೇ ಈ ಡೆಲ್ಮಿಕ್ರಾನ್ ಆಗಿದೆ.

ಆತಂಕ ವಿಚಾರ ಎಂದರೆ ಈಗ ಅಸ್ಥಿತ್ವದಲ್ಲಿರುವ ರೂಪಾಂತರ ವೈರಸ್​ಗಳಿಗಿಂತ ತುಂಬಾ ವೇಗವಾಗಿ ಹರಡುವ ಸಾಮರ್ಥ್ಯ ಈ ವೈರಸ್​ಗೆ ಇದೆ. ಆದರೆ, ಬೇರೆ ರೂಪಾಂತರಿಗಳಷ್ಟು ಗಂಭೀರವಾದ ದುಷ್ಪರಿಣಾಮಗಳನ್ನು ಈ ಡೆಲ್ಮಿಕ್ರಾನ್ ಉಂಟು ಮಾಡುವುದಿಲ್ಲ ಎಂದು ತಜ್ಞರ ಅಭಿಪ್ರಾಯವಾಗಿದ್ದು, ಮತ್ತಷ್ಟು ಸಂಶೋಧನೆಯ ನಂತರವೇ ಡೆಲ್ಮಿಕ್ರಾನ್ ಸಾಮರ್ಥ್ಯದ ಬಗ್ಗೆ ಗೊತ್ತಾಗಲಿದೆ.

ಒಮಿಕ್ರಾನ್​ ಮತ್ತು ಡೆಲ್ಮಿಕ್ರಾನ್ ನಡುವಿನ ವ್ಯತ್ಯಾಸ..

ಈ ಮೊದಲೇ ಹೇಳಿದಂತೆ ಒಮಿಕ್ರಾನ್ ಮತ್ತು ಡೆಲ್ಟಾ ರೂಪಾಂತರ ವೈರಸ್​ಗಳ ಮಿಶ್ರಣವಾಗಿದ್ದು, ಸದ್ಯಕ್ಕೆ ಡೆಲ್ಟಾ ವೈರಸ್​ನ ಲಕ್ಷಣಗಳು ಪತ್ತೆಯಾಗಿವೆ. ಇನ್ನೂ ಇದು ತನಿಖೆಯ ಹಂತದಲ್ಲಿದ್ದು, ಸದ್ಯಕ್ಕೆ ಡೆಲ್ಟಾ ಸೋಂಕಿತ ವ್ಯಕ್ತಿಯಲ್ಲಿ ಕಾಣಸಿಗುವ ಲಕ್ಷಣಗಳೇ ಡೆಲ್ಮಿಕ್ರಾನ್ ಸೋಂಕಿತರಲ್ಲೂ ಕಂಡು ಬರುತ್ತದೆ. ಆದರೂ ಇನ್ನಷ್ಟು ಸಂಶೋಧನೆ ನಡೆಯಬೇಕಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಒಂದೇ ದಿನ 14 ಒಮಿಕ್ರಾನ್​ ಕೇಸ್​ ಪತ್ತೆ.. ನಾನ್​ ರಿಸ್ಕ್​ ದೇಶಗಳಿಂದ ಬಂದ ಹೆಚ್ಚು ಜನಕ್ಕೆ ವೈರಸ್​ ದೃಢ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.