ETV Bharat / bharat

ಕೋವಿಡ್ ಬಿಕ್ಕಟ್ಟು; ಭಾರತ ಸರ್ಕಾರ ಘೋಷಿಸಿದ ಆರ್ಥಿಕ ಉತ್ತೇಜನಾ ಪ್ಯಾಕೇಜ್​ಗಳು - ಆದಾಯ ಖಾತ್ರಿ

ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಆರ್ಥಿಕ ಉತ್ತೇಜನಾ ಪ್ಯಾಕೇಜ್​ ಘೋಷಣೆಯ ಮಾದರಿ ಭಿನ್ನವಾಗಿತ್ತು. ಬಹುತೇಕ ದೇಶಗಳು ಒಂದೇ ಬಾರಿಗೆ ದೊಡ್ಡ ಮೊತ್ತದ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಜಾರಿಗೊಳಿಸಿದ್ದವು. ಆದರೆ ಭಾರತ ಸರ್ಕಾರ ಮಾತ್ರ ಇದನ್ನು ಹಂತ ಹಂತವಾಗಿ ಜಾರಿಗೊಳಿಸಿತು.

Fiscal stimulus  by government of  India
ಕೋವಿಡ್ ಬಿಕ್ಕಟ್ಟು; ಭಾರತ ಸರ್ಕಾರ ಘೋಷಿಸಿದ ಆರ್ಥಿಕ ಉತ್ತೇಜನಾ ಪ್ಯಾಕೇಜ್​ಗಳು
author img

By

Published : Feb 1, 2021, 5:08 PM IST

ಕೋವಿಡ್​-19 ಬಿಕ್ಕಟ್ಟಿನಿಂದ ಎದುರಾದ ಆರ್ಥಿಕ ಸಂಕಷ್ಟದಿಂದ ದೇಶವನ್ನು ಪಾರು ಮಾಡಲು ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್​ಗಳು ಜಂಟಿಯಾಗಿ ಹಲವಾರು ಆರ್ಥಿಕ ಉತ್ತೇಜನಾ ಪ್ಯಾಕೇಜ್​ಗಳನ್ನು ಘೋಷಿಸಿವೆ. ಒಟ್ಟು 29.87 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆರ್ಥಿಕ ಉತ್ತೇಜನಾ ಪ್ಯಾಕೇಜ್​ಗಳನ್ನು ಘೋಷಿಸಲಾಗಿದ್ದು, ಇದರ ಮೌಲ್ಯ ದೇಶದ ಒಟ್ಟು ಜಿಡಿಪಿಯ ಶೇ 15 ರಷ್ಟಾಗುತ್ತದೆ.

ಈ ಆರ್ಥಿಕ ಉತ್ತೇಜನಾ ಪ್ಯಾಕೇಜ್​ನ ಶೇ 9 ರಷ್ಟನ್ನು ಆತ್ಮ ನಿರ್ಭರ್ ಭಾರತ ಯೋಜನೆಯಡಿ ನೀಡಲಾಗಿದೆ. ಕಾಲಕಾಲಕ್ಕೆ ಘೋಷಿಸಲಾದ ಆರ್ಥಿಕ ಉತ್ತೇಜನಾ ಪ್ಯಾಕೇಜ್​ಗಳು ಹೀಗಿವೆ:

  • ವಿಶೇಷ ಆರ್ಥಿಕ ಮತ್ತು ಪರಿಹಾರ ಪ್ಯಾಕೇಜ್. ಇದನ್ನು 13 ರಿಂದ 17 ಮೇ 2020 ರಲ್ಲಿ ಜಾರಿಗೊಳಿಸಲಾಯಿತು.
  • ಗ್ರಾಹಕರ ಕೊಳ್ಳುವಿಕೆಯ ಶಕ್ತಿ ಹೆಚ್ಚಿಸಲು 12, ಅಕ್ಟೋಬರ್ 2020 ರಂದು ವಿಶೇಷ ಕ್ರಮಗಳನ್ನು ಘೋಷಿಸಲಾಯಿತು.

ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಆರ್ಥಿಕ ಉತ್ತೇಜನಾ ಪ್ಯಾಕೇಜ್​ ಘೋಷಣೆಯ ಮಾದರಿ ಭಿನ್ನವಾಗಿತ್ತು. ಬಹುತೇಕ ದೇಶಗಳು ಒಂದೇ ಬಾರಿಗೆ ದೊಡ್ಡ ಮೊತ್ತದ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಜಾರಿಗೊಳಿಸಿದ್ದವು. ಆದರೆ ಭಾರತ ಸರ್ಕಾರ ಮಾತ್ರ ಇದನ್ನು ಹಂತ ಹಂತವಾಗಿ ಜಾರಿಗೊಳಿಸಿತು.

ಕೋವಿಡ್​ ಲಾಕ್​ಡೌನ್​​ನ ಆರಂಭಿಕ ಹಂತದಲ್ಲಿ ಘೋಷಿಸಲಾದ ಆರ್ಥಿಕ ಪ್ಯಾಕೇಜ್​ ಸಮಾಜದ ಅತಿ ಕೆಳಸ್ತರದಲ್ಲಿರುವ ಜನತೆ ಹಾಗೂ ಸಣ್ಣ ವ್ಯಾಪಾರ ವ್ಯವಹಾರ ನಡೆಸುವ ಜನರನ್ನು ತಲುಪುವ ಉದ್ದೇಶ ಹೊಂದಿತ್ತು. ಬಡವರಿಗೆ ನೇರವಾಗಿ ಆಹಾರ ತಲುಪಿಸುವುದು, ಉದ್ಯೋಗ ನೀಡುವುದು, ಆದಾಯ ಖಾತ್ರಿ ಪಡಿಸುವುದು ಮುಂತಾದ ಕ್ರಮಗಳನ್ನು ಈ ಪ್ಯಾಕೇಜ್​ನಲ್ಲಿ ಜಾರಿ ಮಾಡಲಾಯಿತು.

ಇನ್ನು ಮೇಲಿನ ಎಲ್ಲ ಕ್ರಮಗಳನ್ನು ಅನುಸರಿಸುವ ಜೊತೆಗೆ ಹಂತ ಹಂತವಾಗಿ ಹಾಗೂ ಸ್ಥಿರವಾಗಿ ಲಾಕ್​ಡೌನ್​ ನಿಯಮಗಳನ್ನು ಸಡಿಲಿಸುತ್ತ, ಮಾರುಕಟ್ಟೆಯಲ್ಲಿ ಚೇತರಿಕೆಗೆ ಕ್ರಮಗಳನ್ನು ಕೈಗೊಳ್ಳಲಾಯಿತು. ಉತ್ಪಾದನಾ ಆಧರಿತ ವಿಶೇಷ ಪ್ರೋತ್ಸಾಹ, ಮೂಲಭೂತ ವೆಚ್ಚ ಹೆಚ್ಚಳ, ಮೂಲಭೂತ ಸೌಕರ್ಯಗಳ ನಿರ್ಮಾಣದಲ್ಲಿ ಬಂಡವಾಳ ಹೂಡಿಕೆ ಹೆಚ್ಚಳದಂಥ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.