ನವದೆಹಲಿ: ಗುಜರಾತ್‌ನಲ್ಲಿ ಕೊರೊನಾದಿಂದ ಸಾಯುತ್ತಿರುವವರ ಸಂಖ್ಯೆ ಕಡಿಮೆ ಇದ್ದರೂ ಹೆಚ್ಚೆಂದು ತೋರಿಸಲಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಆರೋಪಿಸಿದ್ದಾರೆ.
ದೀರ್ಘಕಾಲದ ಮಧುಮೇಹ, ಹೃದಯಾಘಾತದಿಂದ ಮೃತಪಟ್ಟವರನ್ನು ಕೋವಿಡ್‌ನಿಂದ ಸತ್ತಿದ್ದಾರೆ ಎಂದು ತಪ್ಪಾಗಿ ವರದಿ ಮಾಡಲಾಗುತ್ತಿದೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಕೇಂದ್ರದ ಮಾಜಿ ಸಚಿವರು ಟ್ವೀಟ್ ಮಾಡಿದ್ದಾರೆ.
-
Covid-caused deaths are being mis-reported as caused by cardiac arrest, chronic diabetes etc.
— P. Chidambaram (@PChidambaram_IN) April 19, 2021 " class="align-text-top noRightClick twitterSection" data="
That is the Gujarat model!
">Covid-caused deaths are being mis-reported as caused by cardiac arrest, chronic diabetes etc.
— P. Chidambaram (@PChidambaram_IN) April 19, 2021
That is the Gujarat model!Covid-caused deaths are being mis-reported as caused by cardiac arrest, chronic diabetes etc.
— P. Chidambaram (@PChidambaram_IN) April 19, 2021
That is the Gujarat model!
ಇದನ್ನೂ ಓದಿ: ಗಮನಿಸಿ: ಈ ರಾಜ್ಯಗಳಿಗೆ ಪ್ರಯಾಣಿಸಲು ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ
ಶುಕ್ರವಾರ (ಏಪ್ರಿಲ್ 17) ಗುಜರಾತ್‌ನಲ್ಲಿ ಅಧಿಕೃತವಾಗಿ 78 ಕೋವಿಡ್ ಸಾವು ವರದಿಯಾಗಿದೆ. ಆದರೆ ಕೋವಿಡ್ ಮಾನದಂಡಗಳನ್ನು ಅನುಸರಿಸಿ 7 ನಗರಗಳಲ್ಲೇ 689 ಶವಗಳ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಆರೋಪ ಮಾಡಿದ್ದಾರೆ. 'ಇದೇ ಗುಜರಾತ್ ಮಾದರಿ' ಎಂದು ವ್ಯಂಗ್ಯವಾಡಿದ್ದಾರೆ.