ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಸೋಮವಾರ ಬೆಳಗ್ಗೆಯಿಂದ ಮಂಗಳವಾರ ಬೆಳಗ್ಗೆ 8 ರವರೆಗೆ 4,043 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೋವಿಡ್‌ನಿಂದ 15 ಜನರು ಸಾವನ್ನಪ್ಪಿದ್ದಾರೆ. ಚೇತರಿಕೆ ಪ್ರಮಾಣ 98.71 ಪ್ರತಿಶತ. 0.11ರಷ್ಟು ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
- ಒಟ್ಟು ಪ್ರಕರಣಗಳು: 4,45,43,089
- ಸಾವುಗಳು: 5,28,370
- ಸಕ್ರಿಯ ಪ್ರಕರಣಗಳು: 47,379
- ಚೇತರಿಕೆ: 4,39,67,340
ಭಾರತದಲ್ಲಿ ವ್ಯಾಕ್ಸಿನೇಷನ್: ಸೋಮವಾರ ದೇಶದಲ್ಲಿ 13,10,410 ಜನರಿಗೆ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಈವರೆಗೆ 2,16,83,24,537 ಕೋಟಿ ಡೋಸ್ ನೀಡಲಾಗಿದೆ. ಒಂದೇ ದಿನದಲ್ಲಿ 2,95,894 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
ವಿಶ್ವದಲ್ಲಿ ಕೊರೊನಾ ಪ್ರಕರಣಗಳು: ಪ್ರಪಂಚದಾದ್ಯಂತ ಕೊರೊನಾ ಪ್ರಕರಣಗಳು ಸ್ವಲ್ಪ ಹೆಚ್ಚಿವೆ. 3,10,515 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದೇ ದಿನದಲ್ಲಿ 860 ಸಾವುಗಳು ದಾಖಲಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 61,75,25,803 ತಲುಪಿದೆ. ಇದುವರೆಗೆ 65,31,867 ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ. 5,20,978 ಜನರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 59,72,59,920ಕ್ಕೆ ತಲುಪಿದೆ.
- ಜಪಾನ್‌ನಲ್ಲಿ 63,620 ಹೊಸ ಪ್ರಕರಣಗಳು ವರದಿಯಾಗಿವೆ. ವೈರಸ್‌ನಿಂದ 82 ಜನರು ಪ್ರಾಣ ಕಳೆದುಕೊಂಡಿದ್ದಾರೆ.
- ಜರ್ಮನಿಯಲ್ಲಿ 60,238 ಹೊಸ ಪ್ರಕರಣಗಳು, 146 ಸಾವು.
- ರಷ್ಯಾದಲ್ಲಿ 49,488 ಹೊಸ ಪ್ರಕರಣಗಳು, 91 ಜನರು ಸಾವು.
- ತೈವಾನ್‌ನಲ್ಲಿ 28,449 ಹೊಸ ಕೋವಿಡ್ ಪ್ರಕರಣಗಳು 31 ಸಾವು.
- ಅಮೆರಿಕದಲ್ಲಿ 19,891 ಹೊಸ ಪ್ರಕರಣಗಳು ದಾಖಲಾಗಿದ್ದು, 90 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮೆಕ್ಸಿಕೋದಲ್ಲಿ 7.5 ತೀವ್ರತೆಯ ಭಾರಿ ಭೂಕಂಪನ; ಸುನಾಮಿ ಆತಂಕ