ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ವ್ಯಾಕ್ಸಿನೇಷನ್ ಅತ್ಯಂತ ಪರಿಣಾಮಕಾರಿ. ಭಾರತದಲ್ಲಿ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ 1ನೇ ದಿನದಿಂದ ಹೆಚ್ಚಿನ ವೇಗ ಪಡೆದಿದೆ ಎಂದೇ ಹೇಳಬಹುದು. ನಾಗರಿಕ ಸಂಸ್ಥೆಗಳ ಪ್ರೋತ್ಸಾಹದಿಂದ, ನಾವು ನಿಧಾನವಾಗಿಯಾದ್ರೂ ಕೂಡ ನಮ್ಮ ಗುರಿ ತಲುಪುತ್ತಿದ್ದೇವೆ ಎನ್ನಬಹುದು. ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕೆಲಸಗಾರರಿಗೆ ಈ ಯಶಸ್ಸು ಲಭಿಸುತ್ತದೆ. ಇದೀಗ 60 ವರ್ಷ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದೆ.
ನೀವು ಮತ್ತು ನಿಮ್ಮ ಪ್ರೀತಿಪಾತ್ರರು ಲಸಿಕೆ ಹಾಕಿಸಿಕೊಳ್ಳಲು ಕೆಲ ಮಾರ್ಗಸೂಚಿ ಇಲ್ಲಿವೆ :
1. ಎಲ್ಲಾ ವಯಸ್ಕರು ಕೋವಿಡ್-19 ಲಸಿಕೆ ತೆಗೆದುಕೊಳ್ಳಬೇಕು ಮತ್ತು ಅದನ್ನು ತೆಗೆದುಕೊಳ್ಳಲು ಇತರರನ್ನು ಪ್ರೋತ್ಸಾಹಿಸಬೇಕು.
2. ಲಸಿಕೆ ಹಾಕಿಸಿಕೊಳ್ಳುವ ಮೊದಲು ಆಹಾರ ಸೇವಿಸಬೇಕು ಮತ್ತು ವ್ಯಾಕ್ಸಿನೇಷನ್ಗಾಗಿ ಚೆನ್ನಾಗಿ ನೀರು ಕುಡಿಯಬೇಕು.
3. ಯಾವುದೇ ರೀತಿಯ ಬೇರೆ ಲಸಿಕೆಯನ್ನು ತೆಗೆದುಕೊಂಡಾಗ ಅಲರ್ಜಿಗೆ ಒಳಗಾಗುವವರು, ಕೋವಿಡ್ ಲಸಿಕೆ ತೆಗೆದುಕೊಳ್ಳಬಾರದು.
4. 'ಕೋವಿಶೀಲ್ಡ್' ಮತ್ತು 'ಕೋವಾಕ್ಸಿನ್' ಸೇರಿ ಎಲ್ಲಾ ಅನುಮೋದಿತ ಲಸಿಕೆಗಳು
- ಕೋವಿಡ್-19ನಿಂದ ಉಂಟಾಗುವ ಸಾವನ್ನು ತಡೆಗಟ್ಟುವಲ್ಲಿ ಶೇ.100ರಷ್ಟು ಪರಿಣಾಮಕಾರಿ.
- ಕೊರೊನಾ ಹೆಚ್ಚು ಆದಾಗ ಲಸಿಕೆ ಪರಿಣಾಮಕಾರಿ.
- ಕೋವಿಡ್-19 ರೋಗಲಕ್ಷಣ ಇರುವವರಿಗೆ ಲಸಿಕೆ ಪರಿಣಾಮಕಾರಿ (60% -95%).
- ಲಕ್ಷಣರಹಿತ ಕೋವಿಡ್-19 ವಿರುದ್ಧ ಮಾತ್ರ ಲಸಿಕೆ ಪರಿಣಾಮಕಾರಿಯಲ್ಲ.
5. ಕೊರೊನಾ ಲಸಿಕೆ 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಕೊಮೊರ್ಬಿಡಿಟಿಗಳ ಮರಣ ಪ್ರಮಾಣವನ್ನು 'ತೀರಾ ಕಡಿಮೆ'ಮಾಡುತ್ತದೆ. ಈ ಗುಂಪಿನ ಶೇ.90 ಪ್ರತಿಶತದಷ್ಟು ರೋಗಿಗಳು ಇದ್ದು, ಈ ವಯಸ್ಸಿನ ಜನರಿಗೆ ಲಸಿಕೆ ಹಾಕುವಂತೆ ನಾವು ಪ್ರೋತ್ಸಾಹಿಸಬೇಕು.
6. ಮೊದಲೇ ಕೊರೊನಾಗೆ ತುತ್ತಾದವರು ಕೋವಿಡ್-19ನಿಂದ ಚೇತರಿಸಿಕೊಂಡ 8-12 ವಾರಗಳ ನಂತರ ಮಾತ್ರ ಲಸಿಕೆ ತೆಗೆದುಕೊಳ್ಳಬೇಕು.
7. ಕೋವಿಡ್-19ಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಪಡೆದ ವ್ಯಕ್ತಿಯು ಲಸಿಕೆ ತೆಗೆದುಕೊಳ್ಳುವ ಮೊದಲು 8-12 ವಾರಗಳವರೆಗೆ ಕಾಯಬೇಕು.
8. ಅಧಿಕ ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡ ವೈಫಲ್ಯ ಮತ್ತು ಹೃದ್ರೋಗ ಹೊಂದಿರುವ ರೋಗಿಗಳು, ಬೈಪಾಸ್, ಆಂಜಿಯೋಗ್ರಫಿ ಮತ್ತು ಡಯಾಲಿಸಿಸ್‌ಗೆ ಒಳಗಾದವರಿಗೂ ಲಸಿಕೆ ಸುರಕ್ಷಿತವಾಗಿದೆ.
9. ಗರ್ಭಿಣಿಯರು ಕೊರೊನಾ ಲಸಿಕೆ ತೆಗೆದುಕೊಳ್ಳುವುದರಿಂದ ಅಪಾಯ ಕಡಿಮೆ. ಹಾಗಾಗಿ, ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಗರ್ಭಿಣಿಯರು ಲಸಿಕೆ ತೆಗೆದುಕೊಳ್ಳಬಹುದು.
10. ವ್ಯಾಕ್ಸಿನೇಷನ್ ನಂತರದ ಗರ್ಭಧಾರಣೆಯನ್ನು ಎಷ್ಟು ದಿನ ತಪ್ಪಿಸಬೇಕು ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಆದಾಗ್ಯೂ, ಇದು ನಿಷ್ಕ್ರಿಯ ಅಥವಾ ಸತ್ತ ವೈರಸ್ ಆಗಿರುವುದರಿಂದ ಇದು ಗರ್ಭಧಾರಣೆಯ 6-8 ವಾರಗಳ ವ್ಯಾಕ್ಸಿನೇಷನ್ ನಂತರ ಸುರಕ್ಷಿತವಾಗಿರಬೇಕು.
11. ಆಹಾರ ಅಲರ್ಜಿ, ಔಷಧ ಅಲರ್ಜಿ (ಲಸಿಕೆ ಘಟಕಗಳನ್ನು ಹೊರತುಪಡಿಸಿ) ಮತ್ತು ಆಸ್ತಮಾ, ಅಲರ್ಜಿಕ್ ರಿನಿಟಿಸ್ ಮತ್ತು ಅಲರ್ಜಿಕ್ ಡರ್ಮಟೈಟಿಸ್ ನಂತಹ ಸಾಮಾನ್ಯ ಅಲರ್ಜಿಯ ಪರಿಸ್ಥಿತಿಗಳಲ್ಲಿ ಲಸಿಕೆ ಸುರಕ್ಷಿತವಾಗಿದೆ. ಆದರೆ, ಲಸಿಕೆ ತೆಗೆದುಕೊಳ್ಳುವ ಮೊದಲು ವೈದ್ಯರನ್ನ ಸಂಪರ್ಕಿಸುವುದು ಉತ್ತಮ.
12. ಪ್ಲೇಟ್‌ಲೆಟ್ ಪ್ರತಿಕಾಯಗಳಾದ ಆಸ್ಪಿರಿನ್ ಮತ್ತು ಕ್ಲೋಪಿಡೋಗ್ರೆಲ್ನನ್ನು ತೆಗೆದುಕೊಳ್ಳುವವರು ತಮ್ಮ ಔಷಧಿಗಳನ್ನು ನಿಲ್ಲಿಸದೆ, ಕೋವಿಡ್-19 ಲಸಿಕೆ ತೆಗೆದುಕೊಳ್ಳಬಹುದು.
13. ರಕ್ತ ತೆಳುವಾಗಿಸುವ ವಾರ್ಫರಿನ್ ಅಥವಾ ಹೊಸ ಆ್ಯಂಟಿ-ಹೆಪ್ಪುಗಟ್ಟುವಿಕೆ ರೋಗಿಗಳು ಇಂಜೆಕ್ಷನ್ ತೆಗೆದುಕೊಳ್ಳುವುದರಿಂದ ತೊಂದರೆ ಅನುಭವಿಸಬಹುದು. ಈ ರೋಗಿಗಳು ತಮ್ಮ ಬೆಳಗ್ಗೆನೆಯ ಔಷಧಿಯನ್ನು ಬಿಟ್ಟು, ಲಸಿಕೆ ತೆಗೆದುಕೊಳ್ಳಬಹುದು ಮತ್ತು ಮುಂದಿನ ಔಷಧಿಯನ್ನು ನಿಯಮಿತವಾಗಿ ಮುಂದುವರಿಸಬಹುದು.
14. ಪಾರ್ಶ್ವವಾಯು, ಪಾರ್ಕಿನ್ಸನ್, ಬುದ್ಧಿಮಾಂದ್ಯತೆಯಂತಹ ನರವೈಜ್ಞಾನಿಕ ತೊಂದರೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಲಸಿಕೆ ಸುರಕ್ಷಿತವಾಗಿರುವುದರಿಂದ ತೆಗೆದುಕೊಳ್ಳಬಹುದು.
15. ಯಾವುದೇ ರೀತಿಯ ರೋಗನಿರೋಧಕ ಔಷಧಿಗಳನ್ನು (ಅಂದರೆ ಅಂಗಾಂಗ ಕಸಿಗೆ ಒಳಗಾದ ರೋಗಿಗಳು) ತೆಗೆದುಕೊಳ್ಳುವವರಿಗೆ ಲಸಿಕೆ ಸುರಕ್ಷಿತವಾಗಿದ್ದು, ತೆಗೆದುಕೊಳ್ಳಬಹುದು.
16. ಲಸಿಕೆ ತೆಗೆದುಕೊಂಡ ನಂತರ ಆಲ್ಕೊಹಾಲ್ನನ್ನು ಸೇವಿಸುವಂತಿಲ್ಲ. ಇದು ಲಸಿಕೆಯ ದುರ್ಬಲತೆಗೆ ಕಾರಣವಾಗುತ್ತದೆ. ಲಸಿಕೆ ವ್ಯಕ್ತಿಯ ಡಿಎನ್‌ಎ ಬದಲಾಯಿಸುತ್ತದೆ ಎಂಬುದು ಸುಳ್ಳಾಗಿದೆ.
17. ಪ್ರಸ್ತುತ ಮಕ್ಕಳ ಮೇಲೆ ಯಾವುದೇ ಪ್ರಯೋಗಗಳು ಆಗಿಲ್ಲ. ಆದ್ದರಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡುವುದು ಇದೀಗ ಕಡಿಮೆ.
18. ಕ್ಯಾನ್ಸರ್ ರೋಗಿಗಳು ಮತ್ತು ಕೀಮೋಥೆರಪಿಗೆ ಒಳಗಾಗುವವರು ತಮ್ಮ ವೈದ್ಯರನ್ನು ಸಂಪರ್ಕಿಸಿ ಲಸಿಕೆ ಪಡೆಯಬೇಕು. ರೋಗಿಯು ಲಸಿಕೆಯನ್ನು ತೆಗೆದುಕೊಂಡ ಬಳಿಕ ಕನಿಷ್ಠ 4 ವಾರಗಳ ನಂತರ ಕೀಮೋಥೆರಪಿಗಾಗಿ ಕಾಯಬೇಕು.
19. ಜ್ವರ, ದೇಹದ ನೋವು, ತಲೆತಿರುಗುವಿಕೆ, ತಲೆನೋವು ವ್ಯಾಕ್ಸಿನೇಷನ್ ನಂತರದ ಸಾಮಾನ್ಯ ಲಕ್ಷಣಗಳಾಗಿವೆ.
20. ಅಗತ್ಯವಿದ್ದರೆ ಸರಳವಾದ ಪ್ಯಾರೆಸಿಟಮಾಲ್ನನ್ನು ವ್ಯಾಕ್ಸಿನೇಷನ್ ನಂತರ ತೆಗೆದುಕೊಳ್ಳಬಹುದು ಮತ್ತು ಹೆಚ್ಚಿನ ರೋಗಲಕ್ಷಣಗಳನ್ನು ಚೆನ್ನಾಗಿ ನಿಯಂತ್ರಿಸಲಾಗುತ್ತದೆ.
ವದಂತಿಗಳನ್ನು ನಂಬಬೇಡಿ, ಸರಿಯಾದ ಮಾಹಿತಿಯನ್ನು ಪಡೆಯಲು ಉತ್ತಮ ಮಾರ್ಗವೆಂದರೆ ಕೋವಿಡ್-19 ಲಸಿಕೆ ನೀಡುವ ವೈದ್ಯಕೀಯ ಕೇಂದ್ರಗಳ ವೈದ್ಯರೊಂದಿಗೆ ಮಾತನಾಡುವುದು.
ವೈರಸ್ ಹೆಚ್ಚುತ್ತಿರುವ ಭೀತಿ ನಿಭಾಯಿಸಲು ಇದು ಪ್ರಸ್ತುತ ಮತ್ತು ಏಕೈಕ ಮಾರ್ಗವಾಗಿದೆ. ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಮತ್ತು ಅದರ ವಿರುದ್ಧ ಹೋರಾಡಲು ಎಲ್ಲರೂ ಒಂದಾಗೋಣ.