ETV Bharat / bharat

ಕೊರೊನಾ: ಜಮ್ಮು ಕಾಶ್ಮೀರದ 11 ಜಿಲ್ಲೆಗಳಲ್ಲಿ 84 ಗಂಟೆಗಳ ಲಾಕ್‌ಡೌನ್ - ಕೇಂದ್ರಾಡಳಿತ ಪ್ರದೇಶ

ಕೇಂದ್ರಾಡಳಿತ ಪ್ರದೇಶವು ಮಂಗಳವಾರ ಅತಿ ಹೆಚ್ಚು ಅಂದರೆ 3,164 ಕೊರೊನಾ ಪ್ರಕರಣ ದಾಖಲಾಗಿದ್ದು, ಒಟ್ಟಾರೆ ಪ್ರಕರಣ 1,66,054 ಕ್ಕೆ ತಲುಪಿದೆ.

covid-19-j-and-k-admin-orders-84-hours-lockdown-in-11-districts-of-ut
ಜಮ್ಮು ಕಾಶ್ಮೀರದ 11 ಜಿಲ್ಲೆಗಳಲ್ಲಿ 84 ಗಂಟೆಗಳ ಲಾಕ್‌ಡೌನ್
author img

By

Published : Apr 29, 2021, 4:59 AM IST

ಶ್ರೀನಗರ: ಕೋವಿಡ್ -19 ಪ್ರಕರಣಗಳ ಹೆಚ್ಚಳ ನಿಭಾಯಿಸುವ ಉದ್ದೇಶದಿಂದ ಇಂದು ಸಂಜೆ ಆರಂಭಗೊಂಡು ಜಮ್ಮು ಮತ್ತು ಕಾಶ್ಮೀರದ 11 ಜಿಲ್ಲೆಗಳಲ್ಲಿ 84 ಗಂಟೆಗಳ ಲಾಕ್‌ಡೌನ್ ವಿಧಿಸಲಾಗುವುದು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶವು ಮಂಗಳವಾರ ಅತಿ ಹೆಚ್ಚು ಅಂದರೆ 3,164 ಕೊರೊನಾ ಪ್ರಕರಣ ದಾಖಲಾಗಿದ್ದು, ಒಟ್ಟಾರೆ ಪ್ರಕರಣ 1,66,054 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 25 ಸಾವುನೋವುಗಳು ಸಂಭವಿಸಿದ್ದು, ಒಟ್ಟಾರೆ ಈವರೆಗೆ 2,197 ಸೋಂಕಿತರು ಸಾವಿಗೀಡಾಗಿದ್ದಾರೆ.

ಗುರುವಾರ ಸಂಜೆ 7 ಗಂಟೆಗೆ ಕರ್ಫ್ಯೂ ಜಾರಿಗೆ ಬರಲಿದ್ದು, ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ವಿಪತ್ತು ನಿರ್ವಹಣಾ ಪರಿಹಾರ, ಪುನರ್ವಸತಿ ಮತ್ತು ಪುನರ್ನಿರ್ಮಾಣ ವಿಭಾಗದ ಕಾರ್ಯದರ್ಶಿ ಸಿಮ್ರಂದೀಪ್ ಸಿಂಗ್ ಬುಧವಾರ ತಿಳಿಸಿದ್ದಾರೆ.

ಶ್ರೀನಗರ, ಅನಂತ್‌ನಾಗ್, ಬಾರಾಮುಲ್ಲಾ, ಬುಡ್ಗಮ್, ಕುಲ್ಗಮ್, ಪುಲ್ವಾಮಾ, ಗ್ಯಾಂಡರ್‌ಬಾಲ್, ಜಮ್ಮು, ಕಥುವಾ, ರಿಯಾಸಿ, ಉಧಂಪುರ ಜಿಲ್ಲೆಗಳಲ್ಲಿ ಈ ನಿಯಮ ಜಾರಿಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.