ETV Bharat / bharat

'ಕೋವ್ಯಾಕ್ಸಿನ್' ತಯಾರಿಸಲು ಬಯೋವೆಟ್ ಪ್ರೈವೇಟ್ ಕಂಪನಿಗೆ ಪರವಾನಗಿ ನೀಡಲು 'ಮಹಾ' ಸರ್ಕಾರದ ನಿರ್ಧಾರ

ಮಹಾರಾಷ್ಟ್ರ ಜನರಿಗೆ ಸರ್ಕಾರ ಗುಡ್​ನ್ಯೂಸ್​ ನೀಡಿದ್ದು, 'ಕೋವಿಶೀಲ್ಡ್' ನಂತರ, 'ಕೋವ್ಯಾಕ್ಸಿನ್' ಅನ್ನು ಸಹ ಮಹಾರಾಷ್ಟ್ರದಲ್ಲಿ ತಯಾರಿಸಲು ಬಯೋವೆಟ್ ಪ್ರೈವೇಟ್ ಕಂಪನಿಗೆ ಪರವಾನಗಿ ನೀಡಲು ಮುಂದಾಗಿದೆ.

author img

By

Published : May 11, 2021, 9:40 PM IST

covaxine
covaxine

ಮುಂಬೈ: ಮಹಾರಾಷ್ಟ್ರದಲ್ಲಿ 'ಕೋವ್ಯಾಕ್ಸಿನ್' ಅನ್ನು ತಯಾರಿಸಲು ಭಾರತ್ ಬಯೋಟೆಕ್‌ನ ಸಹವರ್ತಿ ಕಂಪನಿಯಾದ ಬಯೋವೆಟ್ ಪ್ರೈವೇಟ್ ಲಿಮಿಟೆಡ್‌ಗೆ ಪುಣೆ ಬಳಿ ಲಸಿಕೆ ತಯಾರಿಸಲು ಅನುಮತಿ ನೀಡುವಂತೆ ಬಾಂಬೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಲಸಿಕೆ ತಯಾರಿಸಲು ಪುಣೆ ಬಳಿ 12 ಹೆಕ್ಟೇರ್ ಭೂಮಿಯನ್ನು ಬಳಸಲು ಅನುಮತಿ ಕೋರಿ ಬಯೋವೆಟ್ ಪ್ರೈವೇಟ್ ಲಿಮಿಟೆಡ್ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಉತ್ಪಾದನೆಗೆ ಅಗತ್ಯವಾದ ವಿವಿಧ ಅನುಮತಿ ಮತ್ತು ಪರವಾನಗಿಯನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಅದು ಮನವಿ ಮಾಡಿದೆ. ಈ ಸಂಬಂಧ ಮುಂಬೈ ಹೈಕೋರ್ಟ್‌ನಲ್ಲಿ ಬಯೋವೆಟ್ ಪ್ರೈವೇಟ್ ಲಿಮಿಟೆಡ್ ಅರ್ಜಿ ಸಲ್ಲಿಸಿದೆ. ನ್ಯಾಯಮೂರ್ತಿಗಳಾದ ಕೆ ಕೆ ಟೇಟ್ ಮತ್ತು ಎನ್ ಆರ್ ಬೋರ್ಕರ್ ಅವರ ಮುಂದಿನ ವಿಭಾಗದ ನ್ಯಾಯಪೀಠದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಿತು. ಕರ್ನಾಟಕ ಮೂಲದ ಬಯೋವೆಟ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ಕುರಿತು ನ್ಯಾಯಮೂರ್ತಿಗಳಾದ ಕೆ ಕೆ ಟೇಟ್ ಮತ್ತು ಎನ್ ಆರ್ ಬೋರ್ಕರ್ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿ ಪುಣೆ ಸಮೀಪದ ಮಂಜಾರಿ ಖುರ್ದ್‌ನಲ್ಲಿ ಉತ್ಪಾದನಾ ಘಟಕವನ್ನು ಹಸ್ತಾಂತರಿಸುವಂತೆ ಈ ತೀರ್ಪು ನೀಡಿತು.

ಕೊವ್ಯಾಕ್ಸಿನ್ ಉತ್ಪಾದನೆಗೆ ಇದನ್ನು ಬಳಸಬಹುದು. ಇದು ಭೂಮಿಯ ಮಾಲೀಕತ್ವವನ್ನು ಪಡೆಯುವುದಿಲ್ಲ ಮತ್ತು ಲಸಿಕೆ ಉತ್ಪಾದನೆಗೆ ಮಾತ್ರ ಬಳಸಲಾಗುವುದು ಎಂದು ವಿಚಾರಣೆಯ ಸಮಯದಲ್ಲಿ ಬಯೋವೆಟ್ ನ್ಯಾಯಾಲಯಕ್ಕೆ ಭರವಸೆ ನೀಡಿದೆ. ಭೂಮಿಯನ್ನು ಬಳಸಲು ಅನುಮತಿ ನೀಡಲು ಸರ್ಕಾರಕ್ಕೆ ಯಾವುದೇ ಆಕ್ಷೇಪವಿಲ್ಲ. ಕೆಲ ನಿಯಮಗಳಿಗೆ ಬಯೋವೆಟ್ ಒಪ್ಪಿದರೆ ಅದು ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು . ಇದರಿಂದ ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗಲಿದೆ ಎಂದು ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಹೇಳಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.