ETV Bharat / bharat

ನವನೀತ್ ಕೌರ್ ರಾಣಾ ನೀಡಿರುವ ಜಾತಿ ಪ್ರಮಾಣಪತ್ರ ರದ್ದುಪಡಿಸಿದ ಬಾಂಬೆ ಹೈಕೋರ್ಟ್ - ನವನೀತ್ ಕೌರ್ ಜಾತಿ ಪ್ರಮಾಣಪತ್ರ

ಈ ಕುರಿತು ಮಾತನಾಡಿರುವ ರಾಣಾ, ಈ ದೇಶದ ಪ್ರಜೆಯಾಗಿ ನ್ಯಾಯಾಲಯದ ಆದೇಶವನ್ನು ನಾನು ಗೌರವಿಸುತ್ತೇನೆ. ಜತೆಗೆ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಹೋಗುತ್ತೇನೆ. ಅಲ್ಲಿ ನನಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು..

Navneet Rana
ನವನೀತ್ ಕೌರ್ ರಾಣಾ
author img

By

Published : Jun 8, 2021, 5:43 PM IST

ನವದೆಹಲಿ/ಮುಂಬೈ : ಅಮರಾವತಿ ಲೋಕಸಭಾ ಸದಸ್ಯೆ ನವನೀತ್ ಕೌರ್ ರಾಣಾ ನೀಡಿರುವ ಜಾತಿ ಪ್ರಮಾಣಪತ್ರವನ್ನು ಬಾಂಬೆ ಹೈಕೋರ್ಟ್ ಮಂಗಳವಾರ ರದ್ದುಪಡಿಸಿದೆ. ಇದು ನಕಲಿ ದಾಖಲೆಗಳನ್ನು ಬಳಸಿ ಸೃಷ್ಟಿಸಲಾಗಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

ಎಂಪಿ ನವನೀತ್​ ಕೌರ್ ರಾಣಾ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಜಾತಿ ಪ್ರಮಾಣಪತ್ರ ವಿಚಾರವಾಗಿ ನ್ಯಾಯಮೂರ್ತಿಗಳಾದ ಆರ್.ಡಿ.ಧನುಕಾ ಮತ್ತು ವಿ.ಜಿ.ಬಿಶ್ತ್ ಅವರಿದ್ದ ವಿಭಾಗೀಯ ನ್ಯಾಯಪೀಠವು ವಿಚಾರಣೆ ನಡೆಸಿತು. ರಾಣಾ ಸಲ್ಲಿಸಿರುವ ಜಾತಿ ಪ್ರಮಾಣ ಪತ್ರ ನಕಲಿಯಾಗಿದೆ ಎಂದು ಕೋರ್ಟ್ ತಿಳಿಸಿದೆ.

ಅಲ್ಲದೆ, ರಾಣಾ 2 ಲಕ್ಷ ರೂಪಾಯಿಯನ್ನು ಎರಡು ವಾರಗಳೊಳಗೆ ಮಹಾರಾಷ್ಟ್ರ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸುವಂತೆ ಸೂಚಿಸಿದೆ. ರಾಣಾ ಮೂಲತಃ ‘ಮೋಚಿ’ ಸಮುದಾಯಕ್ಕೆ ಸೇರಿದವರಾಗಿದ್ದು, ರಾಜಕೀಯ ಪ್ರವೇಶಕ್ಕಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ಆ ವರ್ಗದ ಅಭ್ಯರ್ಥಿಗೆ ಲಭ್ಯವಿರುವ ವಿವಿಧ ಪ್ರಯೋಜನಗಳನ್ನು ಇವರು ಪಡೆದಿದ್ದಾರೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ:ಮಂಗಗಳಿಗೆ ಅರಣ್ಯದಲ್ಲಿ ಪುನರ್ವಸತಿ ಕೋರಿ PIL : ಯೋಜನೆ ರೂಪಿಸಲು ಹೈಕೋರ್ಟ್ ನಿರ್ದೇಶನ

ಈ ಕುರಿತು ಮಾತನಾಡಿರುವ ರಾಣಾ, ಈ ದೇಶದ ಪ್ರಜೆಯಾಗಿ ನ್ಯಾಯಾಲಯದ ಆದೇಶವನ್ನು ನಾನು ಗೌರವಿಸುತ್ತೇನೆ. ಜತೆಗೆ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಹೋಗುತ್ತೇನೆ.

ಅಲ್ಲಿ ನನಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು. ನವನೀತ್ ರಾಣಾ 2019ರಲ್ಲಿ ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.