ETV Bharat / bharat

ಒಡಿಶಾ ವಿಧಾನಸಭೆಯ ಗೇಟ್​ ಬಳಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ

ಐದು ವರ್ಷದ ತಮ್ಮ ಮಗಳ ಅಪಹರಣ, ಕೊಲೆ ಪ್ರಕರಣದ ಬಗ್ಗೆ ದೂರು ನೀಡಿದ್ರೆ, ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಹೀಗಾಗಿ, ಆತ್ಮಹತ್ಯೆಗೆ ಮುಂದಾಗಿರುವುದಾಗಿ ದಂಪತಿ ಹೇಳಿದ್ದಾರೆ..

Couple attempts suicide near Odisha Assembly
ಒಡಿಶ್ಶಾ ವಿಧಾನಸಭೆಯ ಗೇಟ್​ ಬಳಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ
author img

By

Published : Nov 24, 2020, 9:47 PM IST

ಭುವನೇಶ್ವರ : ಒಡಿಶಾ ವಿಧಾನಸಭೆಯ ಮುಖ್ಯ ದ್ವಾರದ ಬಳಿ ನಯಾಗರ ಜಿಲ್ಲೆಯ ಜಾದಪುರ ಗ್ರಾಮದ ದಂಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಸೌದಾಮಿನಿ ಸಾಹು ಮತ್ತು ಅಶೋಕ್ ಸಾಹು ಎಂಬುವರು ಆತ್ಮಹತ್ಯೆಗೆ ಯತ್ನಿಸಿದ ದಂಪತಿ. ಇವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ, ವಿಧಾನಸಭೆಯ ದ್ವಾರದ ಭದ್ರತೆಯಲ್ಲಿದ್ದ ಸಿಬ್ಬಂದಿ ಅವರ ಕೈಯಿಂದ ಡೀಸೆಲ್ ಬಾಟಲ್ ಮತ್ತು ಬೆಂಕಿ ಪೊಟ್ಟಣ ಕಸಿದುಕೊಂಡಿದ್ದಾರೆ.

ದಂಪತಿಯನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿ

ಐದು ವರ್ಷದ ತಮ್ಮ ಮಗಳ ಅಪಹರಣ, ಕೊಲೆ ಪ್ರಕರಣದ ಬಗ್ಗೆ ದೂರು ನೀಡಿದ್ರೆ, ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಹೀಗಾಗಿ, ಆತ್ಮಹತ್ಯೆಗೆ ಮುಂದಾಗಿರುವುದಾಗಿ ದಂಪತಿ ಹೇಳಿದ್ದಾರೆ. ಸಚಿವ ಅರುಣ್​ ಶಾಹು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ದಂಪತಿಯ 5 ವರ್ಷದ ಮಗಳು ಜುಲೈನಲ್ಲಿ ಅಪಹರಣಕ್ಕೊಳಗಾಗಿದ್ದಳು. ಬಳಿಕ, ಜುಲೈ 20ರಂದು ಮನೆಯ ಹಿಂದೆ ಆಕೆಯ ಅಸ್ಥಿ ಪಂಜರ ಪತ್ತೆಯಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.