ETV Bharat / bharat

ವಿದೇಶಿ ರಕ್ಷಣಾ ಉತ್ಪನ್ನ ಖರೀದಿ ವಿವಾದಕ್ಕೆ ಸ್ವದೇಶಿ ಉತ್ಪನ್ನ ತಯಾರಿಕೆಯೇ ಪರಿಹಾರ - ಪ್ರಧಾನಿ ಮೋದಿ - Corporate rivalry leads to controversies over defence purchase from abroad says PM Modi

ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರಕ್ಷಣಾ ಶಸ್ತ್ರಾಸ್ತ್ರಗಳ ಹೆಚ್ಚು ಬಳಕೆಯನ್ನು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಇದು ದೇಶದ ರಕ್ಷಣಾ ಅವಶ್ಯಕತೆಗೆ ತಕ್ಕಂತೆ ತಯಾರಿಸಲ್ಪಟ್ಟಿರುತ್ತದೆ ಎಂದು 'ರಕ್ಷಣಾ ವಲಯದಲ್ಲಿ ಮತ್ತಷ್ಟು ಸ್ವಾವಲಂಬನೆಗೆ ಬಜೆಟ್ ಹೇಗೆ ಸಹಾಯ ಮಾಡುತ್ತದೆ' ಎಂಬುದರ ಕುರಿತ ವೆಬ್‌ನಾರ್‌ನಲ್ಲಿ ಹೇಳಿದ್ದಾರೆ..

Corporate rivalry leads to controversies over defence purchase from abroad: PM Modi
ವಿದೇಶಿ ರಕ್ಷಣಾ ಉತ್ಪನ್ನ ಖರೀದಿ ವಿವಾದಗಳಿಗೆ ಸ್ವದೇಶಿ ಉತ್ಪನ್ನ ತಯಾರಿಕೆಯೇ ಪರಿಹಾರ - ಪ್ರಧಾನಿ ಮೋದಿ
author img

By

Published : Feb 25, 2022, 4:03 PM IST

ನವದೆಹಲಿ : ಸ್ವದೇಶಿ ರಕ್ಷಣಾ ಉದ್ಯಮವು ವಿದೇಶದಿಂದ ಖರೀದಿಸುವ ರಕ್ಷಣಾ ಉತ್ಪನ್ನಗಳಿಗೆ ಸಂಬಂಧಿಸಿದ ವಿವಾದಗಳಂತಹ ಸಮಸ್ಯೆಗಳನ್ನು ಪರಿಹರಿಸುತ್ತದೆ. ಯಾಕೆಂದರೆ, ಇದು ರಕ್ಷಣಾ ಕಂಪನಿಗಳ ನಡುವಿನ ಪೈಪೋಟಿಗೆ ಪರಿಣಾಮಕಾರಿಯಾಗಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಕ್ಷಣಾ ವಲಯದಲ್ಲಿ ಮತ್ತಷ್ಟು ಸ್ವಾವಲಂಬನೆಗೆ ಬಜೆಟ್ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತ ವೆಬ್‌ನಾರ್ ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಹಾಗೂ ಅಭಿವೃದ್ಧಿಪಡಿಸಿದ ರಕ್ಷಣಾ ಶಸ್ತ್ರಾಸ್ತ್ರಗಳ ಹೆಚ್ಚು ಬಳಕೆಯನ್ನು ಪ್ರತಿಪಾದಿಸಿದ್ದಾರೆ. ಇದು ಪ್ರಕೃತಿಯಲ್ಲಿ ವಿಶಿಷ್ಟವಾಗಿರುವುದರ ಜೊತೆಗೆ ದೇಶದ ರಕ್ಷಣಾ ಅವಶ್ಯಕತೆಗೆ ತಕ್ಕಂತೆ ತಯಾರಿಸಲ್ಪಟ್ಟಿದೆ ಎಂದು ಹೇಳಿದ್ದಾರೆ.

ವಿದೇಶಿ ಕಂಪನಿಗಳಿಂದ ರಕ್ಷಣಾ ಸಾಧನಗಳನ್ನು ಖರೀದಿಸಿದಾಗ ಸಾಮಾನ್ಯವಾಗಿ ಎಲ್ಲಾ ರೀತಿಯ ಆರೋಪಗಳನ್ನು ಮಾಡಲಾಗುತ್ತದೆ. ನಾನು ಈ ವಿಷಯದಲ್ಲಿ ಹೆಚ್ಚು ಆಳವಾಗಿ ಮಾತನಾಡಲು ಬಯಸುವುದಿಲ್ಲ. ಆದರೆ, ಪ್ರತಿ ಸಾಧನ ಖರೀದಿಯು ವಿವಾದಗಳಿಗೆ ಕಾರಣವಾಗಿರುವುದು ನಿಜ ಎಂದಿದ್ದಾರೆ.

ವಿವಿಧ ರಕ್ಷಣಾ ಕಂಪನಿಗಳ ನಡುವಿನ ಪೈಪೋಟಿಯಿಂದಾಗಿ ಇತರರು ಉತ್ಪಾದಿಸುವ ರಕ್ಷಣಾ ಸಾಧನಗಳ ಮಾರುಕಟ್ಟೆ ಕೆಡಿಸುವ ನಿರಂತರ ಪ್ರಚಾರ ಯಾವಾಗಲೂ ನಡೆಯುತ್ತಲೇ ಇದೆ. ಯಾವ ಆಯುಧ ಒಳ್ಳೆಯದು, ಯಾವುದು ಕೆಟ್ಟದು, ಯಾವ ಆಯುಧ ಉಪಯುಕ್ತವಾಗಿದೆ, ಯಾವುದು ಉಪಯುಕ್ತವಲ್ಲ ಎಂಬುದರ ಬಗ್ಗೆಯೂ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಲಾಗಿದೆ.

ಇದನ್ನು ಬಹಳ ಯೋಜಿತ ರೀತಿಯಲ್ಲಿ ಮಾಡಲಾಗುತ್ತದೆ. ಇದು ಕಾರ್ಪೊರೇಟ್ ಜಗತ್ತಿನಲ್ಲಿ ಪೈಪೋಟಿಯ ಭಾಗವಾಗಿದೆ. ಇಂತಹ ವಿಷಯಗಳು ಗೊಂದಲ ಮತ್ತು ಆತಂಕಗಳಿಗೆ ಕಾರಣವಾಗುವ ಜೊತೆಗೆ ಭ್ರಷ್ಟಾಚಾರಕ್ಕೆ ಬಾಗಿಲು ತೆರೆಯುತ್ತವೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಆತ್ಮ ನಿರ್ಭರ ಭಾರತ್‌ನಿಂದ ಸಮಸ್ಯೆಗೆ ಪರಿಹಾರ

ಆತ್ಮ ನಿರ್ಭರ ಭಾರತ್ ಅಭಿಯಾನವು ಇಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ವಿದೇಶದಿಂದ ಖರೀದಿಸಿದ ರಕ್ಷಣಾ ಸಾಧನಗಳಲ್ಲಿ ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಬಳಕೆಯ ಆರೋಪಗಳು ಆಗಾಗ್ಗೆ ಸೃಷ್ಟಿಯಾಗುತ್ತವೆ. ಇವು ದೇಶದಲ್ಲಿ ದೊಡ್ಡ ವಿವಾದಗಳಾಗಿವೆ.

1989ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಸರ್ಕಾರವು ಸ್ವೀಡಿಷ್ ಕಂಪನಿ ಬೋಫೋರ್ಸ್‌ನಿಂದ ಹೊವಿಟ್ಜರ್ ಖರೀದಿಯಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿದ್ದರಿಂದ ಆಗ ಕಾಂಗ್ರೆಸ್ ಚುನಾವಣೆಯಲ್ಲಿ ಸೋತಿತ್ತು.

ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರವು ಇಟಾಲಿಯನ್ ರಕ್ಷಣಾ ಕಂಪನಿ ಲಿಯೊನಾರ್ಡೊದಿಂದ ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್‌ಗಳ ಖರೀದಿಯ ಟೆಂಡರ್ ಅನ್ನು ರದ್ದುಗೊಳಿಸಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಫ್ರೆಂಚ್ ಕಂಪನಿ ಡಸಾಲ್ಟ್ ಏವಿಯೇಷನ್‌ನಿಂದ 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುವ ಪ್ರಧಾನಿ ಮೋದಿಯವರ ನಿರ್ಧಾರವು ಸದ್ಯ ದೇಶದಲ್ಲಿ ವಿವಾದಕ್ಕೆ ಕಾರಣವಾಗಿದೆ. ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ವಿಚಾರದಲ್ಲಿ ಸರ್ಕಾರವು ಉದ್ಯಮಿ ಅನಿಲ್ ಅಂಬಾನಿ ಅವರಿಗೆ ಉಪ-ಗುತ್ತಿಗೆಗಳನ್ನು ನೀಡುತ್ತಿದೆ ಎಂದು ಕಾಂಗ್ರೆಸ್, ಇತರ ವಿರೋಧ ಪಕ್ಷಗಳು ಆರೋಪಿಸುತ್ತಲೇ ಇವೆ.

ಇದನ್ನೂ ಓದಿ: ಪುಟಿನ್​ ಜೊತೆ ಮೋದಿ ಮಾತುಕತೆ: ಯುದ್ಧಕ್ಕೆ ವಿರಾಮ ಹಾಕುವಂತೆ ಮನವಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.