ನವದೆಹಲಿ: ದೇಶದಲ್ಲಿ ಕಳೆದ ಏಳು ತಿಂಗಳಿಂದ ಇದೇ ಮೊದಲ ಬಾರಿಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹೊಸದಾಗಿ 30,549 ಜನರಿಗೆ ವೈರಸ್ ದೃಢಪಟ್ಟಿದೆ. ಇದೀಗ ಸೋಂಕಿತರ ಸಂಖ್ಯೆ 3,17,26,507 ಕ್ಕೆ ಏರಿದೆ.
ಕಳೆದ 24 ಗಂಟೆಗಳಲ್ಲಿ ಕೊರೊನಾದಿಂದ 38,887 ಮಂದಿ ಗುಣಮುಖರಾಗಿದ್ದು, ಚೇತರಿಕೆಗೊಂಡವರ ಸಂಖ್ಯೆ 3,08,96,354 ಆಗಿದೆ. ಸಾವಿನ ಪ್ರಮಾಣವೂ ಕೊಂಚ ತಗ್ಗಿದ್ದು, ಒಂದು ದಿನದಲ್ಲಿ 422 ಮಂದಿ ಮೃತಪಟ್ಟಿದ್ದು, ಈವರೆಗೆ ವೈರಸ್ಗೆ ಬಲಿಯಾದವರ ಸಂಖ್ಯೆ 4,25,195ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 61,09,587 ಕೋವಿಡ್ ವ್ಯಾಕ್ಸಿನ್ ಡೋಸ್ಗಳನ್ನು ನೀಡಲಾಗಿದ್ದು, ಈವರೆಗೆ 47,85,44,114 ಲಸಿಕೆ ಡೋಸ್ಗಳು ನೀಡಲಾಗಿದೆ.
ಆಗಸ್ಟ್ 2 ರಂದು 16,49,295 ಕೊರೊನಾ ಸ್ಯಾಂಪಲ್ಗಳನ್ನು ಟೆಸ್ಟ್ ಮಾಡಲಾಗಿದ್ದು, ಆ ಮೂಲಕ ಈವರೆಗೆ 47,12,94,789 ಸ್ವಾಬ್ ಟೆಸ್ಟ್ಗಳನ್ನು ಮಾಡಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.
ಇದನ್ನೂ ಓದಿ: ಆರ್ಟಿಪಿಸಿಆರ್ ವರದಿ ಇಲ್ಲದೆ ರೈಲು ನಿಲ್ದಾಣಕ್ಕೆ ಬಂದಿಳಿದವರು ಕ್ವಾರಂಟೈನ್!