ETV Bharat / bharat

ಕೋವಿಡ್​ನಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ನಿಶ್ಚಿತಾರ್ಥವನ್ನೇ ತೊರೆದು ಬಂದ ಕೊರೊನಾ ವಾರಿಯರ್! - ವಲ್ಸಾದ್ ಸುದ್ದಿ

ಕೋವಿಡ್​ ಸಾಂಕ್ರಾಮಿಕ ಕಾಲದಲ್ಲಿ, ಆರೋಗ್ಯ ಕಾರ್ಯಕರ್ತರು, ಪೊಲೀಸರು, ನೈರ್ಮಲ್ಯ ಕಾರ್ಮಿಕರು ಮತ್ತು ಸ್ಮಶಾನಗಳಲ್ಲಿ ಕೆಲಸ ಮಾಡುವ ಕೊರೊನಾ ವಾರಿಯರ್ಸ್​ಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಗೌರವ್ ಪಟೇಲ್ ಎಂಬ ಕೊರೊನಾ ವಾರಿಯರ್​, ತನ್ನ ನಿಶ್ಚಿತಾರ್ಥದ ದಿನ ಸಹ ಕರ್ತವ್ಯ ಪ್ರಜ್ಞೆ ಮೆರೆದಿದ್ದು, ನಿಶ್ಚಿತಾರ್ಥದ ಬಟ್ಟೆ ಧರಿಸಿಯೇ ಸ್ಮಶಾನದಲ್ಲಿ ಬಂದು ಶವಸಂಸ್ಕಾರ ಮಾಡಿದ್ದಾರೆ.

cremation
cremation
author img

By

Published : May 3, 2021, 10:12 PM IST

ವಲ್ಸಾದ್/ಗುಜರಾತ್: ಇಲ್ಲಿನ ನಿವಾಸಿ ಗೌರವ್ ಪಟೇಲ್ ಎಂಬ ಯುವಕ ತನ್ನ ಎಂಗೇಜ್​ಮೆಂಟ್​ ದಿನ ಸಾವನ್ನಪ್ಪಿದ ಮೂವರು ಕೊರೊನಾ ರೋಗಿಗಳ ಶವಗಳ ಅಂತಿಮ ಸಂಸ್ಕಾರ ಮಾಡಲು ತಮ್ಮ ನಿಶ್ಚಿತಾರ್ಥ ಸಮಾರಂಭವನ್ನೇ ಬಿಟ್ಟು ಬಂದಿದ್ದಾರೆ.

ಸ್ಮಶಾನದಲ್ಲಿ ಗೌರವ್​ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಸದ್ಯ ಕೋವಿಡ್​ ಹಿನ್ನೆಲೆ ಅಲ್ಲಿಯೇ ಕೊರೊನಾ ವಾರಿಯರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಏಪ್ರಿಲ್ 26 ರಂದು ಕೋವಿಡ್​ನಿಂದ ಮೃತಪಟ್ಟ ಮೂರು ಮೃತ ದೇಹಗಳನ್ನು ಪಾರ್ಡಿಯಲ್ಲಿರುವ ಶವಾಗಾರಕ್ಕೆ ತರಲಾಯಿತು. ಆದರೆ, ಈ ವೇಳೆ ಹೆಣ ಸುಡುವ ಯಂತ್ರದಲ್ಲಿ ಸ್ವಲ್ಪ ತೊಂದರೆ ಕಂಡು ಬಂದಿದೆ, ಇದರಿಂದಾಗಿ ವ್ಯವಸ್ಥಾಪಕರು ಗೌರವ್ ಅವರನ್ನು ಸಹಾಯಕ್ಕಾಗಿ ಕರೆದಿದ್ದಾರೆ. ಇನ್ನು ತನ್ನ ನಿಶ್ಚಿತಾರ್ಥ ಹಿನ್ನೆಲೆ ರಜೆಯಲ್ಲಿದ್ದ ಗೌರವ್​ ಕರೆ ಬಂದ ಕೂಡಲೇ ತಕ್ಷಣವೇ ಎಂಗೇಜ್​ಮೆಂಟ್​ ಧಿರಿಸಿನಲ್ಲೇ ಶ್ಮಶಾನಕ್ಕೆ ತೆರಳಿ ಹೆಣ ಸುಡುವ ಒಲೆಯಲ್ಲಿ ದುರಸ್ತಿ ಮಾಡಿ ಮೂರು ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಗೌರವ್​ ತಂದೆ ಸಹ ಇದೇ ಸ್ಮಶಾನದಲ್ಲಿ 20 ವರ್ಷಗಳಿಂದ ಕಾರ್ಯನಿರ್ವಹಿಸಿದ್ದು, ಯಾವುದೇ ಸಮಾರಂಭದಲ್ಲಿದ್ದರೂ, ರಜೆ ಮೇಲಿದ್ದರೂ ಅಪ್ಪ ಮಗ ತುರ್ತು ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.