ಅಹಮದಾಬಾದ್(ಗುಜರಾತ್) : ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿದ ಸಾಕು ನಾಯಿಯ ಅದ್ದೂರಿ ಹುಟ್ಟುಹಬ್ಬ ಆಚರಿಸಿದ ಆರೋಪದಡಿ ಮೂವರು ಆರೋಪಿಗಳನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಸಾಕು ನಾಯಿಯ ಮಾಲೀಕ ಚಿರಾಗ್, ಆತನ ಇಬ್ಬರು ಸ್ನೇಹಿತರಾದ ಉರ್ವೀಶ್ ಪಟೇಲ್ ಮತ್ತು ದಿವ್ಯೇಶ್ ಮೆಹ್ರಿಯಾ ಎಂಬುವರು ಬಂಧಿತರು.
ಮೂಲಗಳ ಪ್ರಕಾರ ಅಹಮದಾಬಾದ್‌ನ ಮಧುವನ್ ಗ್ರೀನ್ ಪಾರ್ಟಿ ಪ್ಲಾಟ್‌ನಲ್ಲಿ ಚಿರಾಗ್ ಅಲಿಯಾಸ್ ಡಾಗೋ ಪಟೇಲ್ ತನ್ನ ಅಬ್ಬಿ ಎಂಬ ನಾಯಿಯ ಹುಟ್ಟು ಹಬ್ಬದ ಆಚರಣೆಗೆ ಅಂದಾಜು 7 ಲಕ್ಷ ರೂ. ಖರ್ಚು ಮಾಡಿ ಪಾರ್ಟಿ ಆಯೋಜಿಸಿದ್ದನಂತೆ.
ಪಾರ್ಟಿಯಲ್ಲಿ ಭಾಗವಹಿಸಿದ್ದವರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ನೃತ್ಯ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ವಿಡಿಯೋ ವೈರಲ್ ಬಳಿಕ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ.
ಕೋವಿಡ್ ಮತ್ತು ಒಮಿಕ್ರಾನ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಗುಜರಾತ್‌ನ ಅಹಮದಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಇದನ್ನೂ ಓದಿ: ತಪ್ಪಿಸಿಕೊಳ್ಳಲು ಯತ್ನಿಸಿದ ಪಾಕ್ ಬೋಟ್ ಹಿಡಿದ ಕೋಸ್ಟ್ ಗಾರ್ಡ್, 10 ಮಂದಿ ಬಂಧನ