ಚೆನ್ನೈ: ಡಿಫೆನ್ಸ್ ಸಿವಿಲಿಯನ್ ರಿಕ್ರೂಟ್‌ಮೆಂಟ್ ಗ್ರೂಪ್ ಸಿ ಪರೀಕ್ಷೆಯು ನಿನ್ನೆ (ಅಕ್ಟೋಬರ್ 9) ಚೆನ್ನೈನ ನುಂಗಂಬಾಕ್ಕಂನಲ್ಲಿರುವ ಸೇನಾ ಪಬ್ಲಿಕ್ ಸ್ಕೂಲ್‌ನಲ್ಲಿ ಮಿಲಿಟರಿ ಕಂಟೋನ್ಮೆಂಟ್ ಉದ್ಯೋಗಗಳಿಗಾಗಿ ನಡೆದಿತ್ತು. ಈ ಪರೀಕ್ಷೆಗೆ ತಮಿಳುನಾಡು ರಾಜ್ಯದವರು ಸೇರಿದಂತೆ ಇತರ ರಾಜ್ಯದ 1,728 ಮಂದಿ ಹಾಜರಾಗಿದ್ದರು. ಏತನ್ಮಧ್ಯೆ, ಹರಿಯಾಣದ 28 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಲು ಬ್ಲೂಟೂತ್ ಸಾಧನವನ್ನು ಬಳಸಿರುವ ಬಗ್ಗೆ ಶಂಕೆಗಳು ವ್ಯಕ್ತವಾಗಿವೆ.
ಸೇನಾ ಪ್ರವೇಶ ಪರೀಕ್ಷೆ ವೇಳೆ ಅಕ್ರಮ ಎಸಗಲು ಯತ್ನಿಸಿದ 28 ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಚೆನ್ನೈನ ನಂದಂಬಾಕ್ಕಂ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಇವರು ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸಿದ್ದರು.
ಕೆಲವು ಅಭ್ಯರ್ಥಿಗಳ ವರ್ತನೆಯಲ್ಲಿ ಅಸಹಜತೆ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವರನ್ನು ಪ್ರಶ್ನಿಸಿದ್ದಾರೆ. ಈ ರೀತಿ ಅಕ್ರಮದ ಮಾಹಿತಿ ಹೊರಬಿದ್ದಿದ್ದು, ಬ್ಲೂಟೂತ್ ತಂತ್ರಜ್ಞಾನದ ಮೂಲಕ ಅಕ್ರಮ ಎಸಗಲಾಗಿದೆ.
ಎಲ್ಲಾ ಆರೋಪಿಗಳನ್ನು ನಂದಂಬಾಕ್ಕಂ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ನಂತರ ಇವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸಿಕ್ಕಿಬಿದ್ದ ಎಲ್ಲಾ 28 ಜನರು ಸೇನಾ ಹುದ್ದೆಗಳಿಗೆ ಅರ್ಜಿ ಸಲ್ಲಿಸದಂತೆ ನಿಷೇಧಿಸಲಾಗಿದೆ. ಘಟನೆಯ ತನಿಖೆ ನಡೆಯುತ್ತಿದೆ ಎಂದು ನಂದಂಬಾಕ್ಕಂ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸ್ಮಾರ್ಟ್ ವಾಚ್ ಬಳಸಿ ಕೆಪಿಟಿಸಿಎಲ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಿಸಿಟಿವಿಯಿಂದ ಕೃತ್ಯ ಬಯಲು