ETV Bharat / bharat

ನೈನಿತಾಲ್ ಮೃಗಾಲಯದಿಂದ ಜಾಮ್‌ನಗರದ ಖಾಸಗಿ ಮೃಗಾಲಯಕ್ಕೆ ಎರಡು ಹುಲಿಗಳ ಸ್ಥಳಾಂತರ - Etv bharat kannada

ನೈನಿತಾಲ್‌ನ ಮೃಗಾಲಯದಲ್ಲಿ ಬಹಳ ಕಾಲದಿಂದ ಇದ್ದ, 3 ವರ್ಷದ ಹುಲಿ ಶಿಖಾ ಮತ್ತು 14 ವರ್ಷದ ಬೇತಾಲ್​ನನ್ನು ಅಂಬಾನಿ ಗ್ರೂಪ್ ನಿರ್ಮಿಸುತ್ತಿರುವ ಜಾಮ್‌ನಗರದ ಖಾಸಗಿ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ.

ಹುಲಿಗಳ ಸ್ಥಳಾಂತರ
ಹುಲಿಗಳ ಸ್ಥಳಾಂತರ
author img

By

Published : Jul 27, 2022, 7:42 PM IST

ಡೆಹ್ರಾಡೂನ್: ಉತ್ತರಾಖಂಡದ ನೈನಿತಾಲ್ ಮೃಗಾಲಯದ ಎರಡು ಹುಲಿಗಳು ಈಗ ಪ್ರಧಾನಿ ನರೇಂದ್ರ ಮೋದಿ ಅವರ ತವರಿನಲ್ಲಿರುವ ಜಾಮ್‌ನಗರ (ಗುಜರಾತ್) ಮೃಗಾಲಯವನ್ನು ಸೇರಿವೆ. ಇಲ್ಲಿಯವರೆಗೆ ಈ ಹುಲಿಗಳು ನೈನಿತಾಲ್‌ನ ಗೋವಿಂದ್ ಬಲ್ಲಭ್ ಪಂತ್ ಮೃಗಾಲಯದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದವು.

ಈಗ ಅವುಗಳನ್ನು ಗುಜರಾತ್‌ಗೆ ವರ್ಗಾಯಿಸಲಾಗಿದೆ. ಇದರ ಬಗ್ಗೆ ಕಾಂಗ್ರೆಸ್ ತಗಾದೆ ತೆಗೆದಿದ್ದು, ತೆಗೆದುಕೊಳ್ಳುವುದು ಗೊತ್ತು. ಆದರೆ ಏನನ್ನೂ ಕೊಡುವುದಿಲ್ಲ ಎಂದು ವ್ಯಂಗ್ಯವಾಡಿದೆ. ಮಾಹಿತಿ ಪ್ರಕಾರ, ಹುಲಿಗಳ ವರ್ಗಾವಣೆ ಪ್ರಕ್ರಿಯೆಯು ಏಪ್ರಿಲ್ 2, 2022 ರಿಂದ ನಡೆಯುತ್ತಿದೆ. ಈ ಪ್ರಕ್ರಿಯೆಯು ಇತ್ತೀಚೆಗೆ ಪೂರ್ಣಗೊಂಡಿದೆ.

ಮುಖ್ಯ ವನ್ಯಜೀವಿ ವಾರ್ಡನ್ ಅವರಿಂದ ಅನುಮತಿ ಪಡೆದು ಎರಡೂ ಹುಲಿಗಳನ್ನು ಇಲ್ಲಿಂದ ಸ್ಥಳಾಂತರಿಸಲಾಗಿದೆ. ಈ ಎರಡು ಹುಲಿಗಳನ್ನು ಗುಜರಾತ್‌ನಿಂದ ಕರೆದೊಯ್ಯಲು ವಿಶೇಷ ತಂಡ ಮತ್ತು ವಾಹನ ನೈನಿತಾಲ್ ತಲುಪಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವದ ಅತಿದೊಡ್ಡ ಮೃಗಾಲಯವನ್ನು ಮಾಡಲು ಮುಂದಾಗಿದೆ.

ಗುಜರಾತ್‌ಗೆ ಶಿಖಾ ಮತ್ತು ಬೇತಾಲ್: ಈ ಹುಲಿಗಳು ನೈನಿತಾಲ್‌ನ ಮೃಗಾಲಯದಲ್ಲಿ ಬಹಳ ಕಾಲ ಇದ್ದವು. 3 ವರ್ಷದ ಹುಲಿ ಶಿಖಾ ಮತ್ತು 14 ವರ್ಷದ ಬೇತಾಲ್​ನನ್ನು ಜಾಮ್‌ನಗರಕ್ಕೆ ಕಳುಹಿಸಲಾಗಿದೆ. ನೈನಿತಾಲ್‌ನ ಕಿಶನ್‌ಪುರದಿಂದ 3 ವರ್ಷಗಳ ಹಿಂದೆ ಶಿಖಾನನ್ನು ರಕ್ಷಿಸಲಾಗಿತ್ತು. 14 ವರ್ಷದ ಬೇತಾಲ್​ನನ್ನೂ ಸಹ ಈ ಹಿಂದೆ ತಂತಿಗೆ ಸಿಲುಕಿ ಗಾಯಗೊಂಡಾಗ ರಕ್ಷಿಸಿ, ಮೃಗಾಲಯಕ್ಕೆ ಕರೆತರಲಾಗಿತ್ತು.

ಇದನ್ನೂ ಓದಿ: ₹1 ಕೋಟಿ ಲಾಟರಿ ಗೆದ್ದ ವ್ಯಕ್ತಿ.. ಸಾಲದ ಸುಳಿಯಲ್ಲಿ ಸಿಲುಕಿ ಮನೆ ಮಾರಲು ಮುಂದಾದವನಿಗೆ ಜಾಕ್​ಪಾಟ್​!

ಡಿಎಫ್‌ಒ ಚಂದ್ರಶೇಖರ ಜೋಶಿ ಮಾತನಾಡಿ, ಡಿಎಫ್‌ಒ ಬಿಜುಲಾಲ್ ಟಿಆರ್ ಅವರ ಅವಧಿಯಲ್ಲಿ ಇಂತಹ ಪ್ರಕ್ರಿಯೆ ಮೊದಲು ಪ್ರಾರಂಭವಾಯಿತು. ಮುಖ್ಯ ವನ್ಯಜೀವಿ ವಾರ್ಡನ್‌ನಿಂದ ಅನುಮತಿ ಪತ್ರ ಪಡೆದ ನಂತರವೇ ಈ ಹುಲಿಗಳನ್ನು ಜಾಮ್‌ನಗರ ತಂಡಕ್ಕೆ ಹಸ್ತಾಂತರಿಸಲಾಗಿದೆ. ಈ ಪ್ರಾಣಿಗಳನ್ನು ಈ ರೀತಿ ಬೇರೆಡೆಗೆ ವರ್ಗಾಯಿಸಿರುವುದು ಇದೇ ಮೊದಲಲ್ಲ ಎನ್ನುತ್ತಾರೆ ಜೋಶಿ.

ಹಾಗಾಗಿ ಹುಲಿ ಸಂರಕ್ಷಣೆ ಮತ್ತು ಅವುಗಳ ಸಂಖ್ಯೆಯನ್ನು ಹೆಚ್ಚಿಸಲು ಕೈಗೊಂಡಿರುವ ಉತ್ತಮ ಉಪಕ್ರಮವಾಗಿದೆ. ಉತ್ತರಾಖಂಡದಲ್ಲಿ ಕಾಡು ಪ್ರಾಣಿಗಳಿಗೆ ಕೊರತೆಯಿಲ್ಲ. ಪ್ರಸ್ತುತ, ನೈನಿತಾಲ್ ಮೃಗಾಲಯದಲ್ಲಿ ಇನ್ನೂ 3 ಹುಲಿಗಳಿವೆ.

ಕಾಂಗ್ರೆಸ್ ಟೀಕೆ: ಇದು ಉತ್ತರಾಖಂಡದ ಶೋಷಣೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕರಣ್ ಮಹರಾ ಬಣ್ಣಿಸಿದ್ದಾರೆ. ಬಿಜೆಪಿಯವರಾಗಲಿ, ಪ್ರಧಾನಿ ನರೇಂದ್ರ ಮೋದಿಯವರಾಗಲಿ ಉತ್ತರಾಖಂಡದಿಂದ ತೆಗೆದುಕೊಳ್ಳುವುದು ಮಾತ್ರ ಗೊತ್ತು, ಏನನ್ನೂ ಕೊಡುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.