ETV Bharat / bharat

ಪ್ರಧಾನಿ ಮೋದಿ ವಿರುದ್ಧ ಮಧ್ಯಪ್ರದೇಶ ಕಾಂಗ್ರೆಸ್‌ ನಾಯಕನ ವಿವಾದಾತ್ಮಕ ಹೇಳಿಕೆ! - ಮಾಜಿ ಸಚಿವ ರಾಜಾ ಪಟೇರಿಯಾ ವಿವಾದಾತ್ಮಕ ಹೇಳಿಕೆ

ಹಿರಿಯ ಕಾಂಗ್ರೆಸ್‌ ನಾಯಕ ರಾಜಾ ಪಟೇರಿಯಾ ಅವರ ಹೇಳಿಕೆಯನ್ನು ಅತ್ಯಂತ ಆಕ್ಷೇಪಾರ್ಹವೆಂದು ಪರಿಗಣಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

A Congress leader who made a controversial statement
ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ
author img

By

Published : Dec 12, 2022, 3:45 PM IST

ಭೋಪಾಲ್(ಮಧ್ಯಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ರಾಜಾ ಪಟೇರಿಯಾ ವಿವಾದಾತ್ಮಕ ಹೇಳಿಕೆ ನೀಡಿದ್ದು, ವಿಡಿಯೋ ವೈರಲ್​ ಆಗುತ್ತಿದೆ. ಈ ಬೆನ್ನಲ್ಲೇ ರಾಜಾ ಪಟೇರಿಯಾ ವಿರುದ್ಧ ಗೃಹ ಸಚಿವ ಡಾ.ನರೋತ್ತಮ್ ಮಿಶ್ರಾ ಅವರು ಎಫ್‌ಐಆರ್‌ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಜಾ ತಮ್ಮ ವಿವರಣೆ ನೀಡಿದ್ದಾರೆ.

ರಾಜಾ ಪಟೇರಿಯಾ ಹೇಳಿದ್ದೇನು?: 'ಪ್ರಧಾನಿ ಮೋದಿಯವರು ಜಾತಿ, ಧರ್ಮ ಮತ್ತು ಭಾಷೆಯ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದ್ದಾರೆ. ಅಲ್ಲದೇ ದಲಿತ, ಬುಡಕಟ್ಟು, ಅಲ್ಪಸಂಖ್ಯಾತರ ಜೀವಕ್ಕೆ ಅಪಾಯವಿದೆ. ಆದ್ದರಿಂದ ಸಂವಿಧಾನ ಉಳಿಸಬೇಕೆಂದಾದರೆ ಮೋದಿಯವರನ್ನು ಹತ್ಯೆ ಮಾಡಬೇಕು' ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದರು. 'ತಮ್ಮ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಆ ರೀತಿಯಾಗಿ ನಾನು ಏನನ್ನೂ ಹೇಳಿಲ್ಲ' ಎಂದು ವಿವಾದದ ನಡುವೆ ರಾಜಾ ಸ್ಪಷ್ಟನೆ ಕೊಟ್ಟಿದ್ದಾರೆ.

  • यह है ⁦@INCIndia⁩ का असली चेहरा पूर्व मंत्री व कांग्रेस नेता श्री राजा पटेरिया मोदी जी की हत्या का बयान देकर समाज को विभाजित कर भड़काऊ भाषण दे रहे है ⁦@BJP4India⁩ ⁦@BJP4MP⁩ ⁦@vdsharmabjp⁩ ⁦@HitanandSharma⁩ ⁦⁦@LokendraParasarpic.twitter.com/XfJ0EApASx

    — Rajpal Singh Sisodiya (@rpssisodiya) December 12, 2022 " class="align-text-top noRightClick twitterSection" data=" ">

ಗೃಹ ಸಚಿವ ನರೋತ್ತಮ್ ಮಿಶ್ರಾ ಪ್ರತಿಕ್ರಿಯಿಸಿ, 'ಪ್ರಸ್ತುತ ಕಾಂಗ್ರೆಸ್ ಇಟಲಿ ಕಾಂಗ್ರೆಸ್ ಆಗಿದೆ. ಪ್ರಧಾನಿ ವಿರುದ್ಧ ನೀಡಿದ ಹೇಳಿಕೆಗಾಗಿ ರಾಜಾ ಪಟೇರಿಯಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಾನು ಎಸ್‌ಪಿಗೆ ಸೂಚಿಸಿದ್ದೇನೆ' ಎಂದು ಹೇಳಿದರು.

  • माननीय प्रधानमंत्री श्री @narendramodi जी को लेकर आपत्तिजनक बयान देने वाले कांग्रेस नेता राजा पटेरिया के खिलाफ पन्ना एसपी को तत्काल एफआईआर करने के निर्देश दिए गए है। pic.twitter.com/uTR2zBHjIP

    — Dr Narottam Mishra (@drnarottammisra) December 12, 2022 " class="align-text-top noRightClick twitterSection" data=" ">

ಬಿಜೆಪಿ ಆಕ್ಷೇಪ: ರಾಜಾ ಪಟೇರಿಯಾರ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಧಾನಿ ಮೋದಿಯವರ ಹತ್ಯೆಗೆ ಸಂಬಂಧಿಸಿದಂತೆ ಜನರನ್ನು ಈ ರೀತಿ ಪ್ರಚೋದಿಸುವುದು ಅತ್ಯಂತ ಗಂಭೀರ ಮತ್ತು ಖಂಡನೀಯ. ಇದು ಕಾಂಗ್ರೆಸ್‌ನ ನಿಜವಾದ ಮುಖ ಎಂದಿದೆ.

ಇದನ್ನೂ ಓದಿ: ಗುಜರಾತ್​ನ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ.. ಪಿಎಂ ಮೋದಿ, ಅಮಿತ್​ ಶಾ, ಬೊಮ್ಮಾಯಿ ಭಾಗಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.