ETV Bharat / bharat

8,000 ಕೋಟಿ ರೂ.ಗೆ ವಿಮಾನ ಖರೀದಿಸುವ ಪಿಎಂಗೆ 4,000 ಕೋಟಿ ರೂ. ಕಬ್ಬಿನ ಬಾಕಿ ನೀಡಲು ಆಗ್ತಿಲ್ಲ: ಪ್ರಿಯಾಂಕಾ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅಭಿವೃದ್ಧಿ ವಿಚಾರವನ್ನಿಟ್ಟುಕೊಂಡು ಸ್ಪರ್ಧೆ ಮಾಡಲಿದೆ ಎಂದಿರುವ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

Priyanka Gandhi Vadra in UP
Priyanka Gandhi Vadra in UP
author img

By

Published : Dec 2, 2021, 4:54 PM IST

ಮೊರಾದಾಬಾದ್​​(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್​​ ಹಾಗೂ ಆಡಳಿತ ರೂಢ ಬಿಜೆಪಿ ನಡುವೆ ನೇರ ಫೈಪೋಟಿ ಏರ್ಪಡುವುದು ಬಹುತೇಕ ಖಚಿತವಾಗಿದೆ. ಇದರ ಮಧ್ಯೆ ಎರಡು ಪಕ್ಷಗಳ ನಡುವೆ ಆರೋಪ - ಪ್ರತ್ಯಾರೋಪ ಸರ್ವೆಸಾಮಾನ್ಯವಾಗಿದ್ದು, ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಇದೀಗ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಉತ್ತರ ಪ್ರದೇಶದ ಮೊರಾದಾಬಾದ್​​ನಲ್ಲಿ ನಡೆದ ಕಾಂಗ್ರೆಸ್​ ಪ್ರತಿಜ್ಞಾ ರ‍್ಯಾಲಿಯಲ್ಲಿ ಭಾಗಿಯಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿದರು.

  • It will take only Rs 4,000 Cr for clearing all dues of sugar cane farmers. PM Modi bought private aircraft in Rs 8,000 Cr last year during #COVID19. Centre is paying Rs 20,000 Cr for beautification of Parliament but don't have money to clear your dues: Priyanka Gandhi Vadra pic.twitter.com/ltwSQOFnzw

    — ANI UP (@ANINewsUP) December 2, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ಭಾರತಕ್ಕೆ ಲಗ್ಗೆ ಹಾಕಿದ ರೂಪಾಂತರಿ: ಕರ್ನಾಟಕದಲ್ಲಿ ಎರಡು ಒಮಿಕ್ರೋನ್ ಕೇಸ್​​​ ಪತ್ತೆ

ಸಾಂಕ್ರಾಮಿಕ ಕೋವಿಡ್​​ ಸಂದರ್ಭದಲ್ಲಿ 8,000 ಕೋಟಿ ರೂಪಾಯಿ ನೀಡಿ ಖಾಸಗಿ ವಿಮಾನ ಖರೀದಿ ಮಾಡುವ ಪ್ರಧಾನಿಯವರಿಗೆ ರೈತರ ಕಬ್ಬಿನ ಬಾಕಿ ಹಣ 4,000 ಕೋಟಿ ರೂ. ನೀಡಲು ಆಗುತ್ತಿಲ್ಲ. ನೂತನ ಸಂಸತ್ ಕಟ್ಟಡ ನಿರ್ಮಾಣಕ್ಕಾಗಿ ಕೇಂದ್ರ 20,000 ಕೋಟಿ ರೂ. ನೀಡುತ್ತಿದೆ. ಆದರೆ, ರೈತರ ಬಗ್ಗೆ ಗಮನ ಹರಿಸಲು ಅವರ ಬಳಿ ಸಮಯವಿಲ್ಲ ಎಂದರು.

ಅಭಿವೃದ್ಧಿ ಆಧಾರದ ಮೇಲೆ ಕಾಂಗ್ರೆಸ್​ ಉತ್ತರ ಪ್ರದೇಶ ಚುನಾವಣೆ ಎದುರಿಸಲಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 20 ಲಕ್ಷ ಉದ್ಯೋಗ, ಪ್ರತಿ ಜಿಲ್ಲೆಯಲ್ಲೂ ಉತ್ಪಾದನಾ ಕೇಂದ್ರ ತೆರೆಯಲಾಗುವುದು ಎಂದರು. ಕೃಷಿ ಕಾಯ್ದೆ ಹೋರಾಟದ ವೇಳೆ ಮಡಿದ ರೈತರಿಗೆ ಪ್ರಧಾನಿ ಯಾವುದೇ ಗೌರವ ನೀಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.