ಕನ್ನಡದ ಬಹುನಿರೀಕ್ಷಿತ ಚಿತ್ರ 'ಬಘೀರ' ತೆರೆಕಂಡು ಈಗಾಗಲೇ ಒಂದು ವಾರ ಪೂರೈಸಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಚಂದನವನದ ಚೆಂದುಳ್ಳಿ ಚೆಲುವೆ ರುಕ್ಮಿಣಿ ವಸಂತ್ ತೆರೆಹಂಚಿಕೊಂಡಿರುವ ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ಯಶ ಕಂಡಿದೆ. ತೆರಕಂಡ ಒಂದು ವಾರದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 15.46 ಕೋಟಿ ರೂಪಾಯಿಯ ವ್ಯವಹಾರ ನಡೆಸುವಲ್ಲಿ ಯಶ ಕಂಡಿದೆ.
ಈವರೆಗೆ, ಅಂದರೆ 8 ದಿನಗಳಲ್ಲಿ ಸಿನಿಮಾ 16.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಗ್ರಾಸ್ ಕಲೆಕ್ಷನ್ ಆದ್ರೆ, ಇಂಡಿಯಾ ನೆಟ್ ಕಲೆಕ್ಷನ್ 15.94 ಕೋಟಿ ರೂಪಾಯಿ. ಈ ಅಂಕಿ-ಅಂಶಗಳು ಸಿನಿಮಾ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ವರದಿಯನ್ನು ಆಧರಿಸಿದೆ. ಚಿತ್ರತಂಡ ಸಕ್ಸಸ್ ಮೀಟ್ನಲ್ಲಿ ಒಂದು ವಾರದಲ್ಲಿ 18 ರಿಂದ 20 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದು ಹೇಳಿಕೊಂಡಿದೆ.
'ಬಘೀರ' ಕಲೆಕ್ಷನ್: ಸೂರಿ ನಿರ್ದೇಶನದ ಬಹುನಿರೀಕ್ಷಿತ 'ಬಘೀರ' ಸಿನಿಮಾ ಕಳೆದ ಗುರುವಾರ ಅದ್ಧೂರಿಯಾಗಿ ತೆರೆಗಪ್ಪಳಿಸಿತು. ಅಕ್ಟೋಬರ್ 31, ದೀಪಾವಳಿ ಶುಭ ಸಂದರ್ಭದಲ್ಲಿ ಬಿಡುಗಡೆಯಾದ ಸಿನಿಮಾ ಈಗಲೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಕೆಜಿಎಫ್, ಕಾಂತಾರದಂತಹ ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿದ್ದ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಬಘೀರ' ಕಳೆದ 8 ದಿನಗಳಲ್ಲಿ 6.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಂಡಿಯಾ ನೆಟ್ ಕಲೆಕ್ಷನ್ - 15.94 ಕೋಟಿ ರೂಪಾಯಿ.
'ಬಘೀರ' ಕಲೆಕ್ಷನ್ (ಕನ್ನಡ ಆವೃತ್ತಿ): ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, 'ಬಘೀರ' ಸಿನಿಮಾ 2.55 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ಅಂಕಿಅಂಶಗಳನ್ನು ಪ್ರಾರಂಭಿಸಿತು. 2ನೇ ದಿನ 2.9 ಕೋಟಿ ರೂ., 3ನೇ ದಿನ 3.2 ಕೋಟಿ ರೂ., 4ನೇ ದಿನ 2.85 ಕೋಟಿ ರೂ., 5ನೇ ದಿನ 0.97 ಕೋಟಿ ರೂ., 6ನೇ ದಿನ 0.83 ಕೋಟಿ ರೂ., 7ನೇ ದಿನ 0.63 ಕೋಟಿ ರೂ., 8ನೇ ದಿನ 0.48 ಕೋಟಿ ರೂಪಾಯಿ ಸೇರಿ ಒಟ್ಟು 14.41 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
'ಬಘೀರ' ಕಲೆಕ್ಷನ್ (ತೆಲುಗು ಆವೃತ್ತಿ): ತೆಲುಗು ಆವೃತ್ತಿಯಲ್ಲಿ ಮೊದಲ ದಿನ 0.5 ಕೋಟಿ ರೂಪಾಯಿ, 2ನೇ ದಿನ 0.4 ಕೋಟಿ ರೂಪಾಯಿ, 3ನೇ ದಿನ 0.3 ಕೋಟಿ ರೂಪಾಯಿ, 4ನೇ ದಿನ 0.2 ಕೋಟಿ ರೂಪಾಯಿ, 5ನೇ ದಿನ 0.13 ಕೋಟಿ ರೂಪಾಯಿ ಸೇರಿದಂತೆ ಈವರೆಗೆ ಒಟ್ಟು 1.53 ಕೋಟಿ ರೂಪಾಯಿಯ ವ್ಯವಹಾರ ನಡೆದಿದೆ.
ಇದನ್ನೂ ಓದಿ: ನನ್ನ 3 ವರ್ಷಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ: 'ಬಘೀರ' ಸಂಭ್ರಮಾಚರಣೆಯಲ್ಲಿ ಶ್ರೀಮುರುಳಿ ಮನದಾಳ
ಬಘೀರ ಯಶಸ್ವಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು. ಚಿತ್ರದ ಹಿಂದಿರುವ ಹೊಂಬಾಳೆ ಫಿಲ್ಮ್ಸ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ನಲ್ಲಿ ಇದರ ವಿಡಿಯೋ ಹಂಚಿಕೊಂಡಿದೆ.
ನಿರ್ದೇಶಕ ಡಾ.ಸೂರಿ ಮಾತನಾಡಿ, "ಬಘೀರ ಸಕ್ಸಸ್ ನಿರೀಕ್ಷೆಗೂ ಮೀರಿದ್ದು, ಸಿನಿಮಾ ವೀಕ್ಷಿಸಿ ನಮ್ಮನ್ನು ಪ್ರೋತ್ಸಾಹಿಸಿದವರೆಲ್ಲರಿಗೂ ನಾನು ಚಿರರುಣಿ. ಗೆಲುವಿಗೆ ಇಡೀ ತಂಡ ಶ್ರಮಿಸಿದೆ" ಎಂದು ತಿಳಿಸಿದ ಅವರು, 18ರಿಂದ 20 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದರು.
ಇದನ್ನೂ ಓದಿ: ಬರ್ತಡೇ ದಿನ ಕೈಯಲ್ಲಿ ರುಂಡ ಹಿಡಿದು ಬಂದ ಅನುಷ್ಕಾ ಶೆಟ್ಟಿ; 'ಘಾಟಿ' ಗ್ಲಿಂಪ್ಸ್ ರಿಲೀಸ್