ETV Bharat / technology

ಐಒಎಸ್​ 18.2 ಪಬ್ಲಿಕ್​ ಬೀಟಾ ಹೊರತಂದ ಆ್ಯಪಲ್:​ ವಿಶೇಷತೆಗಳೇನು? - APPLE

Apple released iOS 18.2: ಆ್ಯಪಲ್​ ಕಂಪನಿ ಐಒಎಸ್​ 18.2 ಪಬ್ಲಿಕ್​ ಬೀಟಾವನ್ನು ಬಿಡುಗಡೆ ಮಾಡಿದೆ. ಇದು ಹೊಸ AI ಎಮೋಜಿ ಜನರೇಟರ್ ಅಪ್ಲಿಕೇಶನ್, ಸಿರಿಯೊಂದಿಗೆ ChatGPT ಇಂಟಿಗ್ರೇಷನ್​ ವೈಶಿಷ್ಟ್ಯಗಳನ್ನು ಹೊಂದಿದೆ.

APPLE  IOS 18 2 PUBLIC BETA  APPLE RELEASE NEW IOS UPDATE
ಐಒಎಸ್​ 18.2 ಪಬ್ಲಿಕ್​ ಬೀಟಾ ಹೊರತಂದ ಆ್ಯಪಲ್ (Apple)
author img

By ETV Bharat Tech Team

Published : Nov 8, 2024, 12:04 PM IST

Apple released iOS 18.2: ಆ್ಯಪಲ್​ ಒಡೆತನದ ಐಫೋನ್​ ಸಾಫ್ಟ್​ವೇರ್​ ಅಪ್​ಡೇಟ್​ ಐಒಎಸ್​ 18.2 ಪಬ್ಲಿಕ್​ ಬೀಟಾ ಬಿಡುಗಡೆ ಮಾಡಿದೆ. ಆ್ಯಪಲ್​ ಇತ್ತೀಚೆಗಷ್ಟೇ ಐಒಎಸ್​ 18.1 ಅನ್ನು ಹೊರತಂದಿತ್ತು. ಎಐ ಆಧರಿತ ಆ್ಯಪಲ್​ ಇಂಟೆಲಿಜೆನ್ಸ್​ ಫೀಚರ್​ಗಳೊಂದಿಗೆ ಐಫೋನ್​ಗಾಗಿ ಈ ಅಪ್‌ಡೇಟ್​ ಬಿಡುಗಡೆ ಮಾಡಿದೆ. ಹೊಸ ಅಪ್​ಡೇಟ್​ನೊಂದಿಗೆ ಐಫೋನ್​ 15 ಪ್ರೋ ಮತ್ತು ಐಫೋನ್​ 16 ಸ್ಮಾರ್ಟ್​ಫೋನ್​ಗಳು ಆ್ಯಪಲ್‌ನ ಮೊದಲ ಎಐ ಫೀಚರ್​ಗಳನ್ನು ಪಡೆದುಕೊಂಡಿದೆ. ಈಗ ಎಐ ವೈಶಿಷ್ಟ್ಯಗಳ ದ್ವಿತೀಯ ಭಾಗ ಐಒಎಸ್​ 18.2ನಲ್ಲಿ ಲಭ್ಯವಿದೆ.

ಐಒಎಸ್ 18.2ನ ಸ್ಟೇಬಲ್​ ಅಪ್​ಡೇಟ್​ಗೆ ಮೊದಲು, ಕಂಪನಿಯು ಸಾರ್ವಜನಿಕ ಬೀಟಾವನ್ನು ಬಿಡುಗಡೆ ಮಾಡಿದೆ. ಆ್ಯಪಲ್​ ಇಂಟೆಲಿಜೆನ್ಸ್ ವೈಶಿಷ್ಟ್ಯಗಳು ಪ್ರಸ್ತುತ ಯುಎಸ್​ ಇಂಗ್ಲಿಷ್​ನಲ್ಲಿ ಬಳಕೆದಾರರಿಗೆ ಲಭ್ಯವಿದೆ. ಈ ವೈಶಿಷ್ಟ್ಯಗಳನ್ನು ಯುಕೆ, ಐರ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಐಒಎಸ್​ 18.2, iPhone 15 Pro ಮತ್ತು iPhone 16 ಸೀರಿಸ್​ ಬಳಕೆದಾರರು Apple Intelligence ವೈಶಿಷ್ಟ್ಯಗಳನ್ನು ಪಡೆಯುತ್ತಾರೆ. ಇದು Genmoji ವೈಶಿಷ್ಟ್ಯವನ್ನೂ ಸಹ ಒಳಗೊಂಡಿದೆ. ಈ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ಕಸ್ಟಮ್ ಎಮೋಜಿಯನ್ನು ರಚಿಸಲು ಸಾಧ್ಯವಾಗುತ್ತದೆ. ಇಮೇಜ್ ಪ್ಲೇಗ್ರೌಂಡ್ ಸಹಾಯದಿಂದ ಬಳಕೆದಾರರು ಕಾರ್ಟೂನ್ ತರಹದ ಚಿತ್ರಗಳನ್ನೂ ರಚಿಸಲು ಸಾಧ್ಯವಾಗುತ್ತದೆ.

ಐಒಎಸ್ 18.2ರಲ್ಲಿ ಬಳಕೆದಾರರು ನೋಟ್ಸ್ ಅಪ್ಲಿಕೇಶನ್ ಮತ್ತು ಇಮೇಜ್ ವಾಂಡ್ ಸಹಾಯದಿಂದ ಕೇವಲ ರಫ್​ ಸ್ಕೆಚ್‌ನಿಂದ ಸಂಪೂರ್ಣ ಚಿತ್ರವನ್ನು ರಚಿಸಬಹುದು. ಇದರೊಂದಿಗೆ ಸಿರಿಯನ್ನು ಚಾಟ್ ಜಿಪಿಟಿಗೆ ಲಿಂಕ್ ಮಾಡಲಾಗುತ್ತದೆ. ರೋಲ್ ಔಟ್ ಆಗುವ ಮೊದಲು ನೀವು ಈ ವೈಶಿಷ್ಟ್ಯಗಳನ್ನು ಪಡೆಯಲು ಬಯಸಿದರೆ, ನಂತರ ನೀವು ನಿಮ್ಮ iPhoneನಲ್ಲಿ iOS 18.2ರ ಪಬ್ಲಿಕ್​ ಬೀಟಾವನ್ನು ಇನ್​ಸ್ಟಾಲ್ ಮಾಡಿಕೊಳ್ಳಬಹುದು. ಇದಕ್ಕಾಗಿ ಆ್ಯಪಲ್ ಬೀಟಾ ಟೆಸ್ಟಿಂಗ್ ಪ್ರೋಗ್ರಾಂಗೆ ನೋಂದಾಯಿಸಿಕೊಳ್ಳಬೇಕು.

ಪಬ್ಲಿಕ್​ ಬೀಟಾವನ್ನು ಸ್ಥಾಪಿಸುವ ಮೊದಲು ನಿಮ್ಮ ಅಸ್ತಿತ್ವದಲ್ಲಿರುವ ಐಒಎಸ್​ ಸೆಟಪ್ ಅನ್ನು ನೀವು ಬ್ಯಾಕಪ್ ಮಾಡಬೇಕು. ಸಾಧ್ಯವಾದರೆ ನಿಮ್ಮ ದ್ವಿತೀಯ ಸಾಧನದಲ್ಲಿ ಮಾತ್ರ ಪಬ್ಲಿಕ್​ ಬೀಟಾವನ್ನು ಇನ್​ಸ್ಟಾಲ್​ ಮಾಡಿಕೊಳ್ಳಬೇಕು. ನೀವು ಬ್ಯಾಕಪ್ ಹೊಂದಿದ್ರೆ ಡೇಟಾವನ್ನು ಕಳೆದುಕೊಳ್ಳದೆ ನೀವು ಸುಲಭವಾಗಿ iOS 18.1 ಗೆ ಹಿಂತಿರುಗಲು ಸಾಧ್ಯವಾಗುತ್ತದೆ. ಒಮ್ಮೆ ನೀವು ಆ್ಯಪಲ್​ನ ಬೀಟಾ ಟೆಸ್ಟಿಂಗ್ ಪ್ಲಾಟ್‌ಫಾರ್ಮ್‌ಗೆ ಸೇರಿಕೊಂಡರೆ, ನೀವು ಐಫೋನ್​ನಲ್ಲಿ iOS 18.2 ಪಬ್ಲಿಕ್​ ಬೀಟಾವನ್ನು ಇನ್​ಸ್ಟಾಲ್​ ಮಾಡಲು ಸಾಧ್ಯವಾಗುತ್ತದೆ.

ಐಒಎಸ್ 18.2 ಅನ್ನು ಡೌನ್‌ಲೋಡ್ ಮತ್ತು ಇನ್​ಸ್ಟಾಲ್​ ಮಾಡುವುದು ಹೀಗೆ:

  • ಮೊದಲು ನೀವು ನಿಮ್ಮ ಐಫೋನ್‌ನ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಬೇಕು.
  • ಸ್ಕ್ರೋಲಿಂಗ್ ಮಾಡುವಾಗ ನೀವು ಕೆಳಗೆ ಜನರಲ್ ಟ್ಯಾಪ್ ಮಾಡಬೇಕು.
  • ಇದರ ನಂತರ ನೀವು ಸಾಫ್ಟ್​ವೇರ್ ಅಪ್​ಡೇಟ್​ ಕ್ಲಿಕ್ ಮಾಡಬೇಕು.
  • ಇಲ್ಲಿ ನೀವು iOS 18.2 ಸಾರ್ವಜನಿಕ ಬೀಟಾವನ್ನು ಡೌನ್‌ಲೋಡ್ ಮಾಡಲು ಮತ್ತು ಇನ್​ಸ್ಟಾಲ್​ ಮಾಡುವ ಆಪ್ಷನ್​ ಪಡೆಯುತ್ತೀರಿ.

ಐಒಎಸ್ 18.2ರ ಸ್ಟೇಬಲ್​ ವರ್ಸನ್​ಗೆ ಸಂಬಂಧಿಸಿದಂತೆ ಇದು ಮುಂದಿನ ತಿಂಗಳೊಳಗೆ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚಿನ ಐಒಎಸ್ ಆವೃತ್ತಿಯ ಅಪ್​ಡೇಟ್​ ಪಡೆಯಲು ಆ್ಯಪಲ್ ಐಫೋನ್‌ಗಳ ಲಿಸ್ಟ್​​ ಇಲ್ಲಿವೆ.

iPhone 16, iPhone 16 Plus, iPhone 16 Pro, iPhone 16 Pro Max, iPhone 15, iPhone 15 Plus, iPhone 15 Pro, iPhone 15 Pro Max, iPhone 14, iPhone 14 Plus, iPhone 14 Pro, iPhone 14 Pro Max, iPhone 13 , iPhone 13 mini, iPhone 13 Pro, iPhone 13 Pro Max, iPhone 12, iPhone 12 mini, iPhone 12 Pro, iPhone 12 Pro Max, iPhone 11, iPhone 11 Pro, iPhone 11 Pro Max, iPhone XS, iPhone XS Max, iPhone XR ಮತ್ತು iPhone SE (2ನೇ ತಲೆಮಾರಿನ ಮತ್ತು ಮೇಲಿನ ಸಾಧನಗಳು).

ಇದನ್ನೂ ಓದಿ: ಅಪ್ರಾಪ್ತರ ವಯಸ್ಸಿನ ನಿಖರತೆ ಕಂಡುಹಿಡಿಯಲು AI ಚಾಲಿತ ಹೊಸ ಟೂಲ್​ ತರ್ತಿದೆ ಮೆಟಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.