ETV Bharat / state

ನೈಋತ್ಯ ರೈಲ್ವೆ: ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅಭಿಯಾನ 3.0- ಅಪ್ಲಿಕೇಶನ್ ಬಳಸುವುದು ಹೇಗೆ? - DIGITAL LIFE CERTIFICATE CAMPAIGN

ನೈಋತ್ಯ ರೈಲ್ವೆ ಇಲಾಖೆಯು ಪಿಂಚಣಿದಾರರಿಗೆ ಡಿಜಿಟಲ್​ ಲೈರ್ಟಿಫಿಕೇಟ್ ಅಭಿಯಾನ್​ 3.0 ಅನ್ನು ಪರಿಚಯಿಸಿದೆ. ಇದು ಪಿಂಚಣಿದಾರರಿಗೆ ಹೇಗೆ ಉಪಯೋಗವಾಗುತ್ತದೆ ಎಂಬುದನ್ನು ತಿಳಿಯೋಣ.

PENSIONERS  SOUTH WESTERN RAILWAY DEPARTMENT  DHARWAD
ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅಭಿಯಾನ (IANS)
author img

By ETV Bharat Karnataka Team

Published : Nov 8, 2024, 12:09 PM IST

ಹುಬ್ಬಳ್ಳಿ: ನೈಋತ್ಯ ರೈಲ್ವೆ ತನ್ನ ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಜೀವನ ಪ್ರಮಾಣಪತ್ರ) ಸಲ್ಲಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸಲು 'ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅಭಿಯಾನ 3.0' ಆರಂಭಿಸಿದೆ. ಈ ಅಭಿಯಾನದ ಮೂಲಕ ಪಿಂಚಣಿದಾರರು ಇನ್ನು ಮುಂದೆ ಬ್ಯಾಂಕ್ ಅಥವಾ ಇತರ ಸಂಬಂಧಿತ ಕಚೇರಿಗಳಿಗೆ ಭೇಟಿ ನೀಡದೆಯೇ ತಮ್ಮ ಪಿಂಚಣಿ ಮುಂದುವರಿಸಲು ಮನೆಯಿಂದಲೇ ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು.

ಡಿಜಿಟಲ್ ಲೈಫ್ ಪ್ರಮಾಣಪತ್ರಗಳ ಪ್ರಯೋಜನವೇನು?: ಭದ್ರತೆ ಮತ್ತು ಸಮಯದ ಉಳಿತಾಯದ ಮೂಲಕ ಎಲ್ಲಾ ಪಿಂಚಣಿದಾರರಿಗೆ ಅದರಲ್ಲೂ ವಿಶೇಷವಾಗಿ ಹಿರಿಯ ಪಿಂಚಣಿದಾರರಿಗೆ ಇದು ಅನುಕೂಲಕರವಾಗಿದೆ. ಪಿಂಚಣಿದಾರರನ್ನು ಸಬಲೀಕರಣಗೊಳಿಸಲು ಮತ್ತು ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸುವ ಹೆಚ್ಚು ತಡೆರಹಿತ ಮತ್ತು ಅನುಕೂಲಕರ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಡಿಜಿಟಲ್ ಪ್ರಮಾಣಪತ್ರ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲಾಗುತ್ತಿದೆ.

ಅಪ್ಲಿಕೇಶನ್ ಬಳಸುವುದು ಹೇಗೆ?: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್​ನಲ್ಲಿ ಆಧಾರ್ ಆಧರಿತ 'ಫೇಸ್ ಅಥೆಂಟಿಕೇಶನ್' ತಂತ್ರಜ್ಞಾನದ ಮೂಲಕ ಇದನ್ನು ಉಪಯೋಗಿಸಬೇಕಿದೆ. ಪಿಂಚಣಿದಾರರು Google Play Storeಗೆ ಭೇಟಿ ನೀಡಿ UIDAIನಿಂದ ಇತ್ತೀಚಿನ ಆವೃತ್ತಿಯೊಂದಿಗೆ (ಪ್ರಸ್ತುತ 0.7.43) 'ಆಧಾರ್ ಫೇಸ್ RD (ಆರಂಭಿಕ ಪ್ರವೇಶ) ಅಪ್ಲಿಕೇಶನ್' ಡೌನ್‌ಲೋಡ್ ಮಾಡಿಕೊಳ್ಳಬೇಕು.

Google Play Storeನಿಂದ ಇತ್ತೀಚಿನ ಆವೃತ್ತಿಯೊಂದಿಗೆ (3.6.3) "ಜೀವನ್ ಪ್ರಮಾನ್" ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಈ ಅಪ್ಲಿಕೇಶನ್‌ಗಳನ್ನು ಬಳಸುವ ಮೂಲಕ, ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರಗಳನ್ನು ಮನೆಯಿಂದಲೇ ಸಲ್ಲಿಸಬಹುದು. ಭೌತಿಕ ಭೇಟಿಗಳ ಅಗತ್ಯವಿಲ್ಲದೆ ಸುಗಮ ಮತ್ತು ಪರಿಣಾಮಕಾರಿ ಪ್ರಕ್ರಿಯೆಯನ್ನು ಆನಂದಿಸಬಹುದು. ಈ ಅಭಿಯಾನವು ತನ್ನ ಪಿಂಚಣಿದಾರ ಸಮುದಾಯದ ಅನುಭವ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಬದ್ಧತೆಯನ್ನು ನೈರುತ್ಯ ರೈಲ್ವೆ ಪ್ರತಿನಿಧಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಪಿಂಚಣಿದಾರರು ನೈಋತ್ಯ ರೈಲ್ವೆ ಸಹಾಯವಾಣಿ ಸಂಪರ್ಕಿಸಬಹುದು ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ವಿದೇಶದಲ್ಲೇ ಕುಳಿತು ತಾಯ್ನಾಡಿನಲ್ಲಿ ಯುಪಿಐ ಮೂಲಕ ವಹಿವಾಟು ನಡೆಸಬಹುದು ಎನ್​ಆರ್​ಐ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.