ETV Bharat / bharat

ಯುಪಿಯಲ್ಲಿ ಕಾಂಗ್ರೆಸ್ 12,000 ಕಿ.ಮೀ ಯಾತ್ರೆ: ಚುನಾವಣೆಗೆ ಪ್ರಿಯಾಂಕಾ ನೇತೃತ್ವದಲ್ಲಿ ಕಾರ್ಯತಂತ್ರ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿವ ಬೆನ್ನಲ್ಲೇ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ 12,000 ಕಿಮೀ ಉದ್ದದ ಯಾತ್ರೆ ಕೈಗೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.

Congress moots 12,000-km yatra to revive party's fortunes in Uttar Pradesh
ಕಾಂಗ್ರೆಸ್ 12,000 ಕಿಮೀ ಯಾತ್ರೆ
author img

By

Published : Sep 10, 2021, 6:52 PM IST

ಲಖನೌ (ಉತ್ತರ ಪ್ರದೇಶ): ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ 12,000 ಕಿಮೀ ಯಾತ್ರೆ ಕೈಗೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.

ಪಕ್ಷವು ಪ್ರಚಾರ ರ‍್ಯಾಲಿಯನ್ನು ಕೈಗೊಂಡಿದ್ದು, ಕಾಂಗ್ರೆಸ್ ಪ್ರತಿಜ್ಞಾ ಯಾತ್ರೆಯಲ್ಲಿ ‘ಹಮ್ ವಚನ ನಿಭಾಯೆಂಗೆ’ ಎಂದು ಹೇಳಿದೆ. 'ಈ ಯಾತ್ರೆಯು 12,000 ಕಿ.ಮೀ ಕ್ರಮಿಸಲಿದ್ದು ರಾಜ್ಯದ ಹಳ್ಳಿ ಮತ್ತು ಪಟ್ಟಣಗಳ ಮೂಲಕ ಹಾದು ಹೋಗುತ್ತದೆ. ಪಕ್ಷದ ಯಾತ್ರೆಯ ವಿವರಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುತ್ತದೆ' ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ಯದ ಪಕ್ಷದ ಉಸ್ತುವಾರಿಯೂ ಆಗಿರುವ ಪ್ರಿಯಾಂಕಾ ಗಾಂಧಿ, ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ಸನ್ನದ್ಧತೆಯನ್ನು ಪರಿಶೀಲಿಸಲು ಮತ್ತು ವಿವಿಧ ಪಕ್ಷದ ಸಮಿತಿಗಳೊಂದಿಗೆ ಕಾರ್ಯತಂತ್ರಗಳನ್ನು ಚರ್ಚಿಸಲು ಶುಕ್ರವಾರ ಲಖನೌದಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಗೆ ಆಗಮಿಸಿದ್ದಾರೆ.

ಪಕ್ಷದ ಮೂಲಗಳ ಪ್ರಕಾರ, ಪ್ರಿಯಾಂಕಾ ಗಾಂಧಿ ಹಲವು ಪ್ರಮುಖ ಸಭೆಗಳನ್ನು ನಡೆಸಲಿದ್ದಾರೆ. ಚುನಾವಣಾ ಕಾರ್ಯತಂತ್ರ ಜತೆಗೆ, ತಳಮಟ್ಟದಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಉದ್ದೇಶ ಇದಾಗಿದೆ.

ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರ ಸಮಿತಿ ಮತ್ತು ಕಾರ್ಯತಂತ್ರ ಸಮಿತಿ ಸದಸ್ಯರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಇದಲ್ಲದೇ, ಕಾಂಗ್ರೆಸ್ ಮುಖಂಡರು ಪಕ್ಷವು ನಡೆಸುತ್ತಿರುವ ಎಲ್ಲಾ ಪ್ರಚಾರಗಳನ್ನೂ ಪರಿಶೀಲಿಸುತ್ತಾರೆ. ಮುಂಬರುವ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಮತ್ತು ಮಾನದಂಡಗಳ ಕುರಿತು ಅವರು ಹಿರಿಯ ಕಾಂಗ್ರೆಸ್ ನಾಯಕರು ಮತ್ತು ವಿವಿಧ ಸಮಿತಿ ಸದಸ್ಯರಿಂದ ಸಲಹೆ ಪಡೆಯಲಿದ್ದಾರೆ.

2017ರ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದಂಕಿ ಸ್ಥಾನಗಳಿಗೆ ಕುಸಿದಿದೆ. ಭಾರತೀಯ ಜನತಾ ಪಕ್ಷ (BJP) 403 ಸದಸ್ಯರ ವಿಧಾನಸಭೆಯಲ್ಲಿ 312 ಸ್ಥಾನಗಳನ್ನು ಗೆದ್ದು ಸತತ ಎರಡನೇ ಅವಧಿಗೆ ಸರ್ಕಾರ ರಚಿಸಿತು.

ಇದನ್ನೂ ಓದಿ: ಕ್ರೀಡೆಗೆ ಯೋಗಿ ಸರ್ಕಾರದ ವಿಶೇಷ ಉತ್ತೇಜನ; ಗ್ರಾಮೀಣ ಪ್ರದೇಶಗಳಲ್ಲಿ ಮಿನಿ ಕ್ರೀಡಾಂಗಣಗಳ ನಿರ್ಮಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.