ETV Bharat / bharat

"ಆಮ್ಲಜನಕ ಕೊರತೆಯಿಂದ ಸಾವಾಗಿರುವ ವರದಿ ಬಂದಿಲ್ಲ": ಭಾರತಿ ಹೇಳಿಕೆ ಖಂಡಿಸಿ ಹಕ್ಕುಚ್ಯುತಿ ಮಂಡಿಸಲು 'ಕೈ​' ನಿರ್ಧಾರ

author img

By

Published : Jul 21, 2021, 12:02 PM IST

Updated : Jul 21, 2021, 12:21 PM IST

ಕೊರೊನಾ ಎರಡನೇ ಅಲೆಯಲ್ಲಿ ಆಮ್ಲಜನಕದ ತೀವ್ರ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯ ಕೊರೊನಾ ರೋಗಿಗಳು ರಸ್ತೆ ಮತ್ತು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆಯೇ? ಎಂಬ ಕಾಂಗ್ರೆಸ್ ಸಂಸದ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಪ್ರಶ್ನೆಗೆ ಲಿಖಿತ ರೂಪದಲ್ಲಿ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ಉತ್ತರಿಸಿದ್ದರು. ಆದರೆ ಅವರ ಹೇಳಿಕೆಯನ್ನು ಕಾಂಗ್ರೆಸ್​ ಖಂಡಿಸಿದ್ದು, ಭಾರತಿ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲು ನಿರ್ಧರಿಸಿದೆ.

Congress
ಕಾಂಗ್ರೆಸ್​ ನಿರ್ಧಾರ

ಹೈದರಾಬಾದ್: ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಸಾವಾಗಿರುವ ಬಗ್ಗೆ ನಿರ್ದಿಷ್ಟವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವರದಿ ನೀಡಿಲ್ಲ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ರಾಜ್ಯಸಭೆಗೆ ತಿಳಿಸಿದ್ದರು. ಈ ಹೇಳಿಕೆಯನ್ನು ಕಾಂಗ್ರೆಸ್​ ಖಂಡಿಸಿದ್ದು, ಭಾರತಿ ವಿರುದ್ಧ ಹಕ್ಕುಚ್ಯುತಿ ಸೂಚನೆ ಮಂಡಿಸಲು ನಿರ್ಧರಿಸಿದೆ.

ಕೊರೊನಾ ಎರಡನೇ ಅಲೆಯಲ್ಲಿ ಆಮ್ಲಜನಕದ ತೀವ್ರ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯ ಕೊರೊನಾ ರೋಗಿಗಳು ರಸ್ತೆ ಮತ್ತು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆಯೇ? ಎಂಬ ಕಾಂಗ್ರೆಸ್ ಸಂಸದ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಪ್ರಶ್ನೆಗೆ ಲಿಖಿತ ರೂಪದಲ್ಲಿ ಭಾರತಿ ಉತ್ತರಿಸಿದ್ದರು. "ಕೋವಿಡ್ ಸಾವುಗಳನ್ನು ವರದಿ ಮಾಡಲು ವಿವರವಾದ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ. ಅದರಂತೆ, ಎಲ್ಲಾ ನಿಯಮಿತವಾಗಿ ವರದಿ ಮಾಡುತ್ತಿವೆ. ಆದರೂ, ಆಮ್ಲಜನಕದ ಕೊರತೆಯಿಂದಾಗಿ ಯಾವುದೇ ಸಾವುಗಳು ಸಂಭವಿಸಿರುವ ಬಗ್ಗೆ ನಿರ್ದಿಷ್ಟವಾಗಿ ವರದಿ ಬಂದಿಲ್ಲ’ ಎಂದು ತಿಳಿಸಿದ್ದಾರೆ.

  • Govt has given a reply today that nobody in the country died due to a shortage of oxygen. In every state we saw how many patients died due to lack of oxygen. We know. The Minister misled the House. We will move a Privilege Motion against that Minister: KC Venugopal, Congress pic.twitter.com/ZmPeeoo8GJ

    — ANI (@ANI) July 20, 2021 " class="align-text-top noRightClick twitterSection" data=" ">

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್​, " ಡಾ.ಭಾರತಿಯವರ ಲಿಖಿತ ಉತ್ತರ ದಾರಿ ತಪ್ಪಿಸುವಂತಿದೆ. ಇದು ಖಂಡನೀಯ. ಪ್ರತಿ ರಾಜ್ಯದಲ್ಲಿ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಅನೇಕ ಜನರು ಸಾಯುವುದನ್ನು ಕಂಡಿದ್ದೇವೆ. ಹೇಳಿಕೆ ಖಂಡನೀಯವಾಗಿದ್ದು, ಭಾರತಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ನಿರ್ಧರಿಸಿದ್ದೇವೆ" ಎಂದು ಹೇಳಿದೆ.

  • सिर्फ़ ऑक्सीजन की ही कमी नहीं थी।

    संवेदनशीलता व सत्य की भारी कमी-
    तब भी थी, आज भी है। pic.twitter.com/DPhjih2jbX

    — Rahul Gandhi (@RahulGandhi) July 20, 2021 " class="align-text-top noRightClick twitterSection" data=" ">

ಸಚಿವರು ಅಥವಾ ಯಾವುದೇ ಸದಸ್ಯರು ಸತ್ಯವನ್ನು ತಡೆಹಿಡಿಯುವ ಮೂಲಕ ಅಥವಾ ಸುಳ್ಳು ಮಾಹಿತಿ ನೀಡುವ ಮೂಲಕ ಸದನದ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ನಿಲುವಳಿ ಸೂಚನೆ ಮಂಡಿಸಲಾಗುತ್ತದೆ. ತನ್ನ ತಪ್ಪನ್ನು ಒಪ್ಪಿಕೊಂಡರೆ ಸಂಸದೀಯ ಕಾನೂನಿನಡಿಯಲ್ಲಿ ಶಿಕ್ಷೆಗೆ ಸದಸ್ಯನು ಜವಾಬ್ದಾರನಾಗಿರುತ್ತಾನೆ" ಎಂದು ತಿಳಿಸಿದೆ.

ಹಕ್ಕುಚ್ಯುತಿ ಎಂದರೇನು? :

ತಮ್ಮ ಹಕ್ಕಿಗೆ ಚ್ಯುತಿ ತಂದಿದ್ದಾರೆ ಎಂದು ಯಾವುದೇ ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭೆ ಮತ್ತು ಪರಿಷತ್ತಿನ ಸದಸ್ಯರು ಯಾರ ವಿರುದ್ಧ ಬೇಕಾದರೂ ಕ್ರಮ ಕೈಗೊಳ್ಳಬೇಕಾದ ಒಂದು ವಿಶೇಷ ಹಕ್ಕನ್ನು ಹಕ್ಕುಚ್ಯುತಿ ಎಂದು ಕರೆಯಬಹುದು.
ಏನು ಹೇಳುತ್ತೆ ಲೋಕಸಭೆ ರೂಲ್​

ಲೋಕಸಭೆಯ ರೂಲ್ ಬುಕ್ ಚಾಪ್ಟರ್ 20ರ ರೂಲ್ ನಂಬರ್ 222ರ ಪ್ರಕಾರ ಲೋಕಸಭಾ ಸದಸ್ಯರಿಗೆ, ರಾಜ್ಯಸಭೆಯ ರೂಲ್ ಬುಕ್ 16ರ 187ನೇ ನಿಯಮದ ಪ್ರಕಾರ ರಾಜ್ಯಸಭೆ ಸದಸ್ಯರಿಗೆ ಹಕ್ಕುಚ್ಯುತಿ ಮಂಡನೆ ಮಾಡಲು ಅವಕಾಶ ನೀಡಲಾಗಿದೆ.

ಸಂಸದರು, ಶಾಸಕರ ಹಕ್ಕುಗಳನ್ನು ಮತ್ತು ಅವರಿಗೆ ಸಂವಿಧಾನ ನೀಡಿರುವ ರಕ್ಷಣಾ ವ್ಯವಸ್ಥೆಯನ್ನು ಯಾರಾದರೂ ಉಲ್ಲಂಘನೆ ಮಾಡಿದರೆ ಅಂತಹದ್ದನ್ನು ಹಕ್ಕುಚ್ಯುತಿ ಎಂದು ಹೇಳಲಾಗುತ್ತದೆ. ಇಂತಹ ಪ್ರಕರಣದಲ್ಲಿ ಸಂಸತ್ತು ಮತ್ತು ಶಾಸನ ಸಭೆಯ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲೂ ಸಹ ಅವಕಾಶವಿದೆ.

ಸಭಾ ನಾಯಕರ ಒಪ್ಪಿಗೆ ಬೇಕು

ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಲು ಸಭಾ ನಾಯಕರ ಒಪ್ಪಿಗೆ ಬೇಕು. ಹಕ್ಕುಚ್ಯುತಿ ಮಂಡಿಸುವ ಮೊದಲು ನೋಟಿಸ್ ನೀಡಬೇಕಾಗುತ್ತದೆ. ಈ ನೋಟಿಸ್‌ ಅನ್ನು ಸದನದಲ್ಲಿಯೇ ನೀಡಬೇಕು. ಮತ್ತು ಹಕ್ಕುಚ್ಯುತಿ ಮಂಡಿಸುವ ಸದಸ್ಯರು ಸಭಾ ನಾಯಕರಿಗೆ ಕಲಾಪದ ದಿನದ 10 ಗಂಟೆಯೊಳೆ ಮಾಹಿತಿ ನೀಡಬೇಕು.

ಸಭಾ ನಾಯಕರು ಹಕ್ಕುಚ್ಯುತಿ ಮಂಡನೆಯ ಬಗ್ಗೆ ಮೊದಲ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಇದನ್ನು ಮಂಡಿಸಬಹುದೇ ಅಥವ ಹೆಚ್ಚಿನ ತನಿಖೆಗಾಗಿ ಹಕ್ಕು ಬಾಧ್ಯತಾ ಸಮಿತಿಗೆ ಒಪ್ಪಿಸಬೇಕೆ? ಎಂದು ಸಭಾ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ.

Last Updated : Jul 21, 2021, 12:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.