ETV Bharat / bharat

ಮಧ್ಯಪ್ರದೇಶ: ಕಾಂಗ್ರೆಸ್ ಸೇರಿದ ಇಬ್ಬರು ಮಾಜಿ ಬಿಜೆಪಿ ಸಚಿವರು

ಮಧ್ಯಪ್ರದೇಶದಲ್ಲಿ ಬಿಜೆಪಿಯ ಇಬ್ಬರು ಮಾಜಿ ಸಚಿವರು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

Congress spots a trend as 2 ex-BJP ministers join party in poll-bound MP
ಮಧ್ಯಪ್ರದೇಶ:ಕಾಂಗ್ರೆಸ್ ಸೇರಿದ ಇಬ್ಬರು ಮಾಜಿ ಬಿಜೆಪಿ ಸಚಿವರು
author img

By

Published : May 6, 2023, 4:01 PM IST

ನವದೆಹಲಿ: ಮಧ್ಯಪ್ರದೇಶದಲ್ಲಿ ಚುನಾವಣಾ ಕಣಕ್ಕಿಳಿದಿರುವ ಬಿಜೆಪಿಯ ಇಬ್ಬರು ಮಾಜಿ ಸಚಿವರು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ. "ಹೆಚ್ಚಿನ ಸಮೀಕ್ಷೆಗಳು ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್​​ ಗೆಲುವಿಗೆ ಸಾಕಷ್ಟು ಅನುಕೂಲಕರ ವಾತಾವರಣ ಇದೆ ಎಂದು ಹೇಳಿವೆ. ಅದಕ್ಕಾಗಿಯೇ ಬಿಜೆಪಿ ಮತ್ತು ಜೆಡಿಎಸ್​ನ ಉನ್ನತ ಮಟ್ಟದ ಬಹಳಷ್ಟು ನಾಯಕರು ಚುನಾವಣೆಗೂ ಮುಂಚಿತವಾಗಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ನಾಯಕರು ನಮ್ಮ ಬಳಿಗೆ ಬರುತ್ತಿರುವ ಇತ್ತೀಚಿನ ಬೆಳವಣಿಗೆಯನ್ನು ನಾವು ಮಧ್ಯಪ್ರದೇಶದಲ್ಲೂ ನೋಡುತ್ತಿದ್ದೇವೆ" ಎಂದು ಮಧ್ಯಪ್ರದೇಶದ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಸಿಪಿ ಮಿತ್ತಲ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

  • दीपक जोशी का कांग्रेस में स्वागत:

    अपने पिता की तस्वीर के साथ कमलनाथ जी के कुशल नेतृत्व वाली कांग्रेस में शामिल हुये दीपक जोशी जी का हार्दिक स्वागत है।

    मध्यप्रदेश बचाने के इस महाअभियान में दीपक जोशी जी हमारे सम्मानित साथी और सहयोगी रहेंगे।

    “जय मध्यप्रदेश, जय कांग्रेस” pic.twitter.com/RlNAHSSBjV

    — MP Congress (@INCMP) May 6, 2023 " class="align-text-top noRightClick twitterSection" data=" ">

ಮಾಜಿ ಮುಖ್ಯಮಂತ್ರಿ ಕೈಲಾಶ್ ಜೋಶಿ ಅವರ ಪುತ್ರ ದೀಪಕ್ ಜೋಶಿ ಮತ್ತು ರಾಧೆಲಾಲ್ ಬಘೇಲ್ ಅವರು ಶನಿವಾರ ಮಧ್ಯಪ್ರದೇಶ ಘಟಕದ ಅಧ್ಯಕ್ಷ ಕಮಲ್ ನಾಥ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬ್ರಾಹ್ಮಣ ಮತ್ತು ಒಬಿಸಿ ವರ್ಗಕ್ಕೆ ಸೇರಿದ ದೀಪಕ್ ಜೋಶಿ ಮತ್ತು ರಾಧೆಲಾಲ್ ಬಘೇಲ್ ಇಬ್ಬರನ್ನು ರಾಜ್ಯ ಬಿಜೆಪಿಯ ಕಡೆಗಣಿಸಿದೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್​ನ್ನು ಬಲಪಡಿಸಲು ಪಕ್ಷಾಂತರಗೊಂಡಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.

ಹೆಚ್ಚಿನ ಬಿಜೆಪಿ ನಾಯಕರು ನಮ್ಮೊಂದಿಗೆ ಸೇರುವ ನಿರೀಕ್ಷೆಯಿದೆ - ಮಿತ್ತಲ್: ಈ ವೇಳೆ ದೀಪಕ್ ಜೋಶಿ ತಮ್ಮ ದಿವಂಗತ ತಂದೆಯ ಭಾವಚಿತ್ರವನ್ನು ಕಮಲ್ ನಾಥ್ ಅವರಿಗೆ ನೀಡಿದರು ಮತ್ತು ರಾಜ್ಯದಲ್ಲಿ ಕೈಲಾಶ್ ಜೋಶಿ ಅವರ ಪ್ರಾಮಾಣಿಕ ರಾಜಕೀಯದ ಪರಂಪರೆಯನ್ನು ರಕ್ಷಿಸುವಂತೆ ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥರಿಗೆ ಮನವಿ ಮಾಡಿದರು. "ಮುಂಬರುವ ದಿನಗಳಲ್ಲಿ ಹೆಚ್ಚಿನ ಬಿಜೆಪಿ ನಾಯಕರು ನಮ್ಮೊಂದಿಗೆ ಸೇರುವ ನಿರೀಕ್ಷೆಯಿದೆ. ನಾವು 2018 ರಲ್ಲಿ ಗೆದ್ದಂತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ" ಎಂದು ಮಿತ್ತಲ್ ವಿಶ್ವಾಸ ವ್ಯಕ್ತಪಡಿಸಿದರು.

ಕಮಲ್ ನಾಥ್, ದಿಗ್ವಿಜಯ್ ಸಿಂಗ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಪ್ರತಿನಿಧಿಸುತ್ತಿದ್ದ ಅಂದಿನ ಬಣಗಳು ಒಗ್ಗಟ್ಟಿನಿಂದ ಕೆಲಸ ಮಾಡಿದ್ದರಿಂದ 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು ಎಂದು ಮಧ್ಯಪ್ರದೇಶದ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ನೆನಪಿಸಿಕೊಂಡರು. ಸಿಂಧಿಯಾ 2020 ರಲ್ಲಿ ಬಿಜೆಪಿಗೆ ಸೇರಿದರು ಮತ್ತು ಅವರ ರಾಜಕೀಯ ಮಹತ್ವಾಕಾಂಕ್ಷೆಗಳಿಂದಾಗಿ ಕಮಲ್ ನಾಥ್ ಸರ್ಕಾರದ ಪತನಕ್ಕೆ ಕಾರಣರಾದರು. ಆದರೆ, ಈ ಬಾರಿ ರಾಜ್ಯ ಘಟಕದಲ್ಲಿ ಯಾವುದೇ ಬಣಗಳಿಲ್ಲ. ಕಮಲ್ ನಾಥ್ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಮತ್ತು ದಿಗ್ವಿಜಯ್ ಸಿಂಗ್​ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದಾರೆ" ಎಂದು ಮಿತ್ತಲ್ ತಿಳಿಸಿದರು.

"ರಾಜಕೀಯ ಭ್ರಷ್ಟಾಚಾರದಿಂದಾಗಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ 2020 ರಲ್ಲಿ ಅಧಿಕಾರಕ್ಕೆ ಬಂತ್ತು. ಅವರು ರಾಜ್ಯದ ಅಭಿವೃದ್ಧಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಸಿಪಿ ಮಿತ್ತಲ್ ಟೀಕಿಸಿದರು.

ಇದನ್ನೂ ಓದಿ: ಭಜರಂಗಬಲಿಯೇ ಬೇರೆ, ಬಜರಂಗ ದಳವೇ ಬೇರೆ.. ನಾವು ಹನುಮನ ನಿಜವಾದ ಭಕ್ತರು: ಜೈರಾಮ್ ರಮೇಶ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.