ಭೋಪಾಲ್ : ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅಕ್ಟೋಬರ್ 17 ರ ಚುನಾವಣಾ ಪ್ರಚಾರದ ಭಾಗವಾಗಿ ಇಂದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿದ್ದಾರೆ.
ಭೋಪಾಲ್ನಲ್ಲಿ ಖರ್ಗೆ ಅವರು ಅಲ್ಲಿನ ಪ್ರದೇಶ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಅಧ್ಯಕ್ಷೀಯ ಚುನಾವಣೆಗೆ ಬೆಂಬಲ ಕೋರಿದರು. ನಂತರ ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಪತ್ರ ಬರೆದು ಎಲ್ಲರ ಬೆಂಬಲ ಕೋರಿದ ಖರ್ಗೆ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಎರಡು ಪುಟಗಳ ಪತ್ರ ಬರೆದಿದ್ದಾರೆ. ಈ ಪತ್ರದ ಮೂಲಕ ದೇಶದ ಎಲ್ಲಾ ಪಿಸಿಸಿ ಪ್ರತಿನಿಧಿಗಳು ಮತ್ತು ಕಾಂಗ್ರೆಸ್‌ನ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ತಲುಪಲು ಖರ್ಗೆ ಪ್ರಯತ್ನಿಸಿದ್ದಾರೆ.
ಖರ್ಗೆ ಪತ್ರದಲ್ಲಿ ಏನಿದೆ?: ವಿಶೇಷವೆಂದರೆ ತಮ್ಮ ಪರವಾಗಿಯೂ ಮತ ಹಾಕುವಂತೆ ಮನವಿ ಮಾಡಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ನಿಮ್ಮ ಮತ್ತು ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ನನಗೆ ಐತಿಹಾಸಿಕ ಅವಕಾಶವನ್ನು ನೀಡಿ ಎಂದು ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
-
Congress is my family.
— Mallikarjun Kharge (@kharge) October 12, 2022 " class="align-text-top noRightClick twitterSection" data="
I believe, revival of the Indian National Congress is crucial to fight the divisive BJP and protect democratic ethos of the country. I will always remain a Congress party worker.
Your trust will be a guiding light in fulfilling the duties assigned to me. pic.twitter.com/pa6hchrvYR
">Congress is my family.
— Mallikarjun Kharge (@kharge) October 12, 2022
I believe, revival of the Indian National Congress is crucial to fight the divisive BJP and protect democratic ethos of the country. I will always remain a Congress party worker.
Your trust will be a guiding light in fulfilling the duties assigned to me. pic.twitter.com/pa6hchrvYRCongress is my family.
— Mallikarjun Kharge (@kharge) October 12, 2022
I believe, revival of the Indian National Congress is crucial to fight the divisive BJP and protect democratic ethos of the country. I will always remain a Congress party worker.
Your trust will be a guiding light in fulfilling the duties assigned to me. pic.twitter.com/pa6hchrvYR
ಪತ್ರದಲ್ಲಿ ಒಂದು ಸಾಲನ್ನು ಸಂಕೇತಿಸುತ್ತಾ, ಈ ಸಾಲು ನನಗೆ ಜೀವನದಲ್ಲಿ ತುಂಬಾ ಸ್ಫೂರ್ತಿ ನೀಡುತ್ತದೆ ಎಂದು ಖರ್ಗೆ ಬರೆದಿಕೊಂಡಿದ್ದಾರೆ. ’’ನಿಮ್ಮ ದೇಶವು ನಿಮಗಾಗಿ ಏನು ಮಾಡಬಹುದು ಎಂದು ಕೇಳಬೇಡಿ? ಆದರೆ ನಿಮ್ಮ ದೇಶಕ್ಕಾಗಿ ನೀವು ಏನು ಮಾಡಬಹುದು?‘‘ ಈ ಸಾಲಿನ ಮೂಲಕ ಸಕಾರಾತ್ಮಕ ಸಂದೇಶ ನೀಡಿದ್ದಾರೆ. ಈ ಮೂಲಕ ದೇಶ ಸೇವೆ ಮಾಡುವ ಮನೋಭಾವವನ್ನು ಖರ್ಗೆ ಪ್ರದರ್ಶಿಸಿದ್ದಾರೆ. ಇದೇ ವೇಳೆ ನನಗೆ ಕಾಂಗ್ರೆಸ್ ಜೊತೆ ಐದು ದಶಕಗಳ ಸಂಬಂಧವಿದೆ ಎಂದು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಉದಯಪುರದಲ್ಲಿ ಪಕ್ಷದ ಘೋಷಣೆಯಂತೆ ಒಂದೇ ಹುದ್ದೆ, ಒಬ್ಬ ವ್ಯಕ್ತಿ ಎಂಬ ಭರವಸೆಯನ್ನು ನಾನು ಪಾಲಿಸುತ್ತೇನೆ ಎಂದು ಖರ್ಗೆ ಹೇಳಿದ್ದಾರೆ. ಈ ಪತ್ರದ ಮೂಲಕ ಬಿಜೆಪಿ ಮತ್ತು ಸಂಘದ ವಿರುದ್ಧ ಹಿರಿಯ ನಾಯಕ ವಾಗ್ದಾಳಿ ನಡೆಸಿದ್ದಾರೆ. ದೇಶ ವಿರೋಧಿ ಕೋಮುವಾದಿ ಶಕ್ತಿಗಳ ವಿರುದ್ಧ ಆಂದೋಲನವನ್ನು ತೀವ್ರಗೊಳಿಸುವ ಅಗತ್ಯವಿದೆ ಎಂದು ಖರ್ಗೆ ಪತ್ರದಲ್ಲಿ ಒತ್ತಿ ಹೇಳಿದ್ದಾರೆ.
ಪತ್ರದಲ್ಲಿರುವ ಪ್ರಮುಖ ಏಳು ಅಂಶಗಳೇನು?
- ಉದಯಪುರ ಘೋಷಣೆಯ 50 ಸೂತ್ರವನ್ನು ಅನ್ವಯಿಸುವ ಮೂಲಕ ಅರ್ಧದಷ್ಟು ಹುದ್ದೆಗಳನ್ನು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಭರ್ತಿ ಮಾಡಬೇಕು. ಅವರ ಹುದ್ದೆಯಲ್ಲಿ 5 ವರ್ಷಗಳನ್ನು ಪೂರ್ಣಗೊಳಿಸಿದ ಯಾವುದೇ ವ್ಯಕ್ತಿ ಆ ಹುದ್ದೆಯಲ್ಲಿ ಮತ್ತೆ ಸೇವೆ ಸಲ್ಲಿಸಬಾರದು. ಇದರಿಂದ ಹೊಸ ಅಭ್ಯರ್ಥಿಯ ಯಶಸ್ವಿ ಆಯ್ಕೆ ಪ್ರಕ್ರಿಯೆ ಸುಗಮವಾಗಿ ನಡೆಯುತ್ತದೆ.
- ಎಲ್ಲಾ ಹಂತಗಳಲ್ಲಿ ಪಕ್ಷದ ಯಂತ್ರವನ್ನು ಬಲಪಡಿಸಲು ನಾನು ಗಮನ ಹರಿಸುತ್ತೇನೆ. ಬಾಕಿ ಇರುವ ನೇಮಕಾತಿಗಳನ್ನು ಶೀಘ್ರದಲ್ಲೇ ಮಾಡಲಾಗುವುದು.
- ನಾನು ಪಕ್ಷದ ಎಲ್ಲಾ ಹಂತಗಳಲ್ಲಿ ನನ್ನ ಕಾರ್ಯಕರ್ತರೊಂದಿಗೆ ಸಂವಾದವನ್ನು ಪ್ರಾರಂಭಿಸುತ್ತೇನೆ. ಪ್ರಮುಖ ನೇಮಕಾತಿಗಳಲ್ಲಿ ನಮ್ಮ ಕಾರ್ಯಕರ್ತರನ್ನು ಪರಿಗಣನೆ ಮಾಡಲಾಗುವುದು. ಪಕ್ಷಕ್ಕೆ ಮೀಸಲಾದ ಕಾರ್ಯಕರ್ತರನ್ನು ಎಲ್ಲ ದೊಡ್ಡ ಹುದ್ದೆಗಳಿಗೂ ನೇಮಿಸಲಾಗುವುದು.
- ರೈತರು, ಅಸಂಘಟಿತ ಕಾರ್ಮಿಕರು, ಯುವಕರು, ಮಹಿಳೆಯರು, ಎಸ್ಸಿ/ ಎಸ್ಟಿ/ ಹಿಂದುಳಿದ/ ಅಲ್ಪಸಂಖ್ಯಾತರು/ ಸಣ್ಣ ವ್ಯಾಪಾರ ಇತ್ಯಾದಿಗಳಿಗೆ ಸಂಬಂಧಿಸಿದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸಲು ರಾಜ್ಯ ಮತ್ತು ಜಿಲ್ಲಾ ಘಟಕಗಳಿಗೆ ವರ್ಷಕ್ಕೊಮ್ಮೆ ಅಧಿವೇಶನ ನಡೆಸಲಾಗುವುದು.
- ಚುನಾವಣೆ ಇರುವ ರಾಜ್ಯಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವುದು ನನ್ನ ಪ್ರಮುಖ ಆದ್ಯತೆ. ಇದರಿಂದ ನಾವು ನಮ್ಮ ಗೆಲುವನ್ನು ನಿರ್ಧರಿಸಲು ಸಹಕಾರಿ ಆಗಲಿದೆ.
- ಎಲ್ಲ ಮುಂಚೂಣಿ ಸಂಸ್ಥೆಗಳ ದೂರದೃಷ್ಟಿ - ಮಿಷನ್ ಮತ್ತು ಕ್ರಮಾನುಗತವನ್ನು ಪುನಃ ರಚಿಸುವುದು, ಅವುಗಳನ್ನು ಸಂಘಟಿಸುವುದು ಮತ್ತು ಕಾಂಗ್ರೆಸ್‌ನಲ್ಲಿ ಸುಗಮ ಪರಿವರ್ತನೆ ಮತ್ತು ಪ್ರಗತಿಗೆ ತಯಾರಿ ಮಾಡುವುದು ನನ್ನ ಅತ್ಯಂತ ಕರ್ತವ್ಯವಾಗಿದೆ.
- ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ರಂಗದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಕುರಿತು ಎಲ್ಲ ಪ್ರತಿನಿಧಿಗಳು ಮತ್ತು ಕಾರ್ಯಕರ್ತರಿಗೆ ಕಾಲಕಾಲಕ್ಕೆ ತರಬೇತಿಯನ್ನು ಆಯೋಜಿಸಲಾಗುವುದು. ನಾಯಕತ್ವ ಅಭಿವೃದ್ಧಿ ಮಿಷನ್ ಸ್ಥಾಪಿಸಲಾಗುವುದು ಮತ್ತು ಮುಂದಿನ ಪೀಳಿಗೆಯ ನಾಯಕತ್ವ ಅಭಿವೃದ್ಧಿಪಡಿಸಲು ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು ಎಂದು ಪತ್ರದಲ್ಲಿ ಖರ್ಗೆ ಭರವಸೆ ನೀಡಿದ್ದಾರೆ.
ಅಕ್ಟೋಬರ್ 17 ರಂದು ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆಯಲಿದೆ. ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ. ಮಾಹಿತಿ ಪ್ರಕಾರ ರಾಜ್ಯ ಕಾಂಗ್ರೆಸ್ ಸಮಿತಿಯ 319 ಪ್ರತಿನಿಧಿಗಳು ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ 1997ರಲ್ಲಿ ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆದಿತ್ತು.
ಖರ್ಗೆಗೆ ಕಮಲ್ನಾಥ್ ಬೆಂಬಲ: ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಈಗಾಗಲೇ ಖರ್ಗೆ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಆದಾಗ್ಯೂ, ಪಕ್ಷದ ಇತರ ಪ್ರತಿನಿಧಿಗಳು ತಮ್ಮ ನಾಯಕನನ್ನು ಆಯ್ಕೆ ಮಾಡಲು ಸ್ವತಂತ್ರರು ಎಂದು ಅವರು ಹೇಳಿದರು. ಇನ್ನು ಶಶಿ ತರೂರ್ ಅಕ್ಟೋಬರ್ 14 ರಂದು ಮಧ್ಯ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಧ್ಯ ಪ್ರದೇಶ ಕಾಂಗ್ರೆಸ್ ಮೀಡಿಯಾ ಸೆಲ್ ಉಪಾಧ್ಯಕ್ಷೆ ಸಂಗೀತಾ ಶರ್ಮಾ ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯು ಗಾಂಧಿ ಕುಟುಂಬದ ನಿಷ್ಠಾವಂತ ಖರ್ಗೆ, ತಿರುವನಂತಪುರಂ (ಕೇರಳ)ದ ಲೋಕಸಭಾ ಸಂಸದ ಶಶಿ ತರೂರ್ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಕಣದಲ್ಲಿರುವ ಇಬ್ಬರೂ ಅಭ್ಯರ್ಥಿಗಳು ದೇಶದ ದಕ್ಷಿಣ ಭಾಗಗಳಿಗೆ ಸೇರಿದವರು ಕುತೂಹಲಕಾರಿಯಾಗಿದೆ.
ಇದನ್ನೂ ಓದಿ: ಖರ್ಗೆ, ತರೂರ್ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ: ರಾಹುಲ್ ಗಾಂಧಿ