ETV Bharat / bharat

ಎಲ್​ಪಿಜಿ ದರ ಏರಿಕೆ ವಿರುದ್ಧ ಆಕ್ರೋಶ: ಸ್ಮೃತಿ ಇರಾನಿ ಪ್ರಶ್ನಿಸಿದ ಕಾಂಗ್ರೆಸ್​ ವಕ್ತಾರೆ ಸುಪ್ರಿಯಾ ಶ್ರೀನಾಟೆ

ಕಾಂಗ್ರೆಸ್​​ ಸರ್ಕಾರವಿದ್ದಾಗ, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಸಚಿವೆ ಸ್ಮೃತಿ ಇರಾನಿ, ಈಗ ಒಂದು ಮಾತಾಡುತ್ತಿಲ್ಲವೇಕೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇಟ್ ಪ್ರಶ್ನಿಸಿದ್ದಾರೆ.

ಸ್ಮೃತಿ ಇರಾನಿ
ಸ್ಮೃತಿ ಇರಾನಿ
author img

By

Published : Feb 15, 2021, 7:35 PM IST

Updated : Feb 15, 2021, 7:58 PM IST

ನವದೆಹಲಿ: ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿ ಜನರು ವೇತನ ಕಡಿತ ಎದುರಿಸುತ್ತಿರುವ ಸಮಯದಲ್ಲಿ, ಮೋದಿ ಸರ್ಕಾರ ಎಲ್​ಪಿಜಿ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಇದರಿಂದ ಅವರಿಗೆ ನಾಚಿಕೆಯಾಗಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದೆ.​​

ಸ್ಮೃತಿ ಇರಾನಿ ಪ್ರಶ್ನಿಸಿದ ಕಾಂಗ್ರೆಸ್​ ವಕ್ತಾರೆ ಸುಪ್ರಿಯಾ ಶ್ರೀನಾಟೆ

ದೆಹಲಿಯಲ್ಲಿ 14. 2 ಕೆಜಿ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂ.ಗೆ ಹೆಚ್ಚಿಸಲಾಗಿದ್ದು, ಇದರ ಒಟ್ಟು ವೆಚ್ಚ 769 ರೂ.ಆಗಲಿದೆ.

ಕಳೆದ 2 ತಿಂಗಳಲ್ಲಿ ಎಲ್‌ಪಿಜಿ ಅನಿಲ ಬೆಲೆ ಸಿಲಿಂಡರ್‌ಗೆ 175 ರೂ.ಗಳಷ್ಟು ಏರಿಕೆಯಾಗಿದೆ. ಫೆಬ್ರವರಿಯಲ್ಲಿ ನಾವು 75 ರೂ.ಗಳ ಬೆಲೆ ಏರಿಕೆ ಕಂಡಿದ್ದೇವೆ. ನಾವು ಅಧಿಕಾರದಲ್ಲಿದ್ದಾಗ, ಜಾಗತಿಕ ಕಚ್ಚಾ ತೈಲ ದರಗಳು ಹೆಚ್ಚಿದ್ದರೂ, ಬೆಲೆಗಳು ಪ್ರತಿ ಸಿಲಿಂಡರ್‌ಗೆ ಸುಮಾರು 400 ರೂ. ಮಾತ್ರ ಇತ್ತು ಎಂದು ಕಾಂಗ್ರೆಸ್​ನ ವಕ್ತಾರೆ ಸುಪ್ರಿಯಾ ಶ್ರೀನೇಟ್ ಹೇಳಿದ್ದಾರೆ.

ಓದಿ: ಸಿದ್ದು, ಜಯಾ ಹಾದಿಯಲ್ಲೇ ಸಾಗಿದ ದೀದಿ: 'ಮಾ' ಯೋಜನೆಗೆ ಚಾಲನೆ

ಬಿಜೆಪಿ ಪ್ರತಿಪಕ್ಷದಲ್ಲಿದ್ದಾಗ ಪೆಟ್ರೋಲ್ ಬೆಲೆ ಏರಿಕೆಯಾಗಿದೆ ಎಂದು ಸ್ಮೃತಿ ಇರಾನಿ ಪ್ರತಿಭಟನೆ ನಡೆಸುತ್ತಿದ್ದರು. ಆದ್ರೆ ಇವಾಗ ಏಕೆ ಸುಮ್ಮನಿದ್ದಾರೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ವಿಷಯದ ಬಗ್ಗೆ ಒಂದು ಮಾತು ಕೂಡ ಆಡುತ್ತಿಲ್ಲ ಎಂದು ಶ್ರಿನಾಟೆ ಅಪಹಾಸ್ಯ ಮಾಡಿದ್ದಾರೆ.

  • 50 rupee hike in LPG!!!!! N they call themselves Aam Aadmi ki Sarkar. What a shame!

    — Smriti Z Irani (@smritiirani) June 24, 2011 " class="align-text-top noRightClick twitterSection" data=" ">

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದ ಸಮಯದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾಗಿದೆ. ಇಂದು ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸತತ ಏಳನೇ ದಿನವೂ ಏರಿಸಲಾಗಿದೆ ಎಂದರು.

Last Updated : Feb 15, 2021, 7:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.