ETV Bharat / bharat

ತೆಲಂಗಾಣದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ​ಯುವತಿಯರ ಮದುವೆಗೆ ₹ 1 ಲಕ್ಷ, 10 ಗ್ರಾಂ ಚಿನ್ನ, ರೈತರ ಸಾಲ ಮನ್ನಾ

Telangana Assembly Elections: ನವೆಂಬರ್​ 30ರಂದು ನಡೆಯಲಿರುವ 119 ಸದಸ್ಯ ಬಲದ ತೆಲಂಗಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ಪ್ರಣಾಳಿಕೆಯನ್ನು ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದ್ದಾರೆ.

congress-manifesto-promises-telangana-girl-children-rs1-lakh-10g-gold-wedding-assistance-all-you-need-to-know
ತೆಲಂಗಾಣದಲ್ಲಿ ಕಾಂಗ್ರೆಸ್ 'ಅಭಯಹಸ್ತಂ' ಪ್ರಣಾಳಿಕೆ: ಯುವತಿಯರ ಮದುವೆಗೆ ₹ 1 ಲಕ್ಷ, 10 ಗ್ರಾಂ ಚಿನ್ನದ ಭರವಸೆ
author img

By ETV Bharat Karnataka Team

Published : Nov 17, 2023, 6:32 PM IST

Updated : Nov 17, 2023, 8:16 PM IST

ಹೈದರಾಬಾದ್ (ತೆಲಂಗಾಣ): ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಪಕ್ಷ ಶುಕ್ರವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಮುಖ ಆರು ಗ್ಯಾರಂಟಿಗಳನ್ನು ಪ್ರಕಟಿಸಿರುವ ಕಾಂಗ್ರೆಸ್​, ರೈತರ ಬೆಳೆ ಸಾಲ ಮನ್ನಾ, ಕೃಷಿ ಬಳಕೆಗೆ 24 ಗಂಟೆ ಉಚಿತ ವಿದ್ಯುತ್, ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಹೆಸರಲ್ಲಿ ಬಡ ಯುವತಿಯರ ಮದುವೆಗೆ ಒಂದು ಲಕ್ಷ ರೂ. ಆರ್ಥಿಕ ನೆರವು ಹಾಗೂ 10 ಗ್ರಾಂ ಚಿನ್ನ ನೀಡುವುದು ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದೆ.

ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ, ತೆಲಂಗಾಣ ರಾಜ್ಯಕ್ಕಾಗಿ ಎಷ್ಟೋ ಜನ ಪ್ರಾಣ ಕಳೆದುಕೊಂಡರು ಹಾಗೂ ಹೋರಾಟ ಮಾಡಿದರು. ಆದರೆ, ಪ್ರತ್ಯೇಕ ತೆಲಂಗಾಣದ ಲಾಭವನ್ನು ಬಿಆರ್​ಎಸ್​ ನಾಯಕ, ಸಿಎಂ ಕೆ.ಚಂದ್ರಶೇಖರ್​ ರಾವ್​ ಮಾತ್ರ ಅನುಭವಿಸುತ್ತಿದ್ದಾರೆ ಎಂದರು. ಮುಂದುವರೆದು ಮಾತನಾಡಿದ ಅವರು, ತೆಲಂಗಾಣದ ಜನತೆಗೆ ಕಾಂಗ್ರೆಸ್​ ಆರು ಗ್ಯಾರಂಟಿಗಳ ಜೊತೆಗೆ 'ಅಭಯಹಸ್ತಂ' ಹೆಸರಿನಲ್ಲಿ ಪ್ರಣಾಳಿಕೆ ಪ್ರಕಟಿಸಿದೆ. ಅಧಿಕಾರಕ್ಕೆ ಬಂದ ತಕ್ಷಣವೇ ಪ್ರಣಾಳಿಕೆಯನ್ನು ಸಂಪೂರ್ಣವಾಗಿ ಜಾರಿಗೆ ತರುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್​ ಪಕ್ಷಕ್ಕೆ ಅಧಿಕಾರ ನೀಡಲು ರಾಜ್ಯದ ಮತದಾರರು ಈಗಾಗಲೇ ನಿರ್ಧರಿಸಿದ್ದಾರೆ. ಜನತೆ ಬದಲಾವಣೆ ಬಯಸಿದ್ದಾರೆ. ಕರ್ನಾಟಕದಲ್ಲಿ ಐದು ಗ್ಯಾರಂಟಿಗಳಿಗೆ ಅನುಷ್ಠಾನವನ್ನು ಮಾಡಿ ತೋರಿಸಿದ್ದೇವೆ. ತೆಲಂಗಾಣದಲ್ಲೂ 6 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಮೊದಲ ಸಂಪುಟ ಸಭೆಯಲ್ಲೇ ನಮ್ಮ ಗ್ಯಾರಂಟಿಗಳನ್ನು ಅಂಗೀಕರಿಸಲಾಗುತ್ತದೆ ಎಂದು ಖರ್ಗೆ ತಿಳಿಸಿದರು.

ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಏನಿದೆ?: ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಬಡ ಕುಟುಂಬಗಳಲ್ಲಿ ನವಜಾತ ಹೆಣ್ಣು ಮಕ್ಕಳಿಗೆ 'ಬಂಗಾರು ತಲ್ಲಿ' ಯೋಜನೆಯ ಮೂಲಕ ಹಣಕಾಸಿನ ನೆರವು, ಬಡ ಕುಟುಂಬದ ಯುವತಿಯರ ಮದುವೆಗೆ 1 ಲಕ್ಷ ರೂ. ಆರ್ಥಿಕ ನೆರವು ಹಾಗೂ 'ಇಂದಿರಮ್ಮ' ಉಡುಗೊರೆಯಾಗಿ 10 ಗ್ರಾಂ ಚಿನ್ನ, ತೆಲಂಗಾಣ ಚಳವಳಿಯ ಹುತಾತ್ಮರ ಕುಟುಂಬಗಳಿಗೆ 25 ಸಾವಿರ ರೂ. ಮಾಸಿಕ ಪಿಂಚಣಿ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಆಶ್ವಾಸನೆ ಕೊಟ್ಟಿದೆ.

ಅಲ್ಲದೇ, ಅಧಿಕಾರ ವಹಿಸಿಕೊಂಡ ಆರು ತಿಂಗಳೊಳಗೆ ಶಿಕ್ಷಕರ ಹುದ್ದೆಗಳನ್ನು ಭರ್ತಿ, 2 ಲಕ್ಷ ಬೆಳೆ ಸಾಲ ಮನ್ನಾ ಮತ್ತು ವಾರ್ಷಿಕ 3 ಲಕ್ಷದವರೆಗಿನ ಬಡ್ಡಿ ರಹಿತ ಬೆಳೆ ಸಾಲ, ರಾಜ್ಯ ಬಜೆಟ್‌ನ ಶೇ.15ರಷ್ಟು ಮೀಸಲಿಡುವುದರೊಂದಿಗೆ ಶಿಕ್ಷಣಕ್ಕೆ ಒತ್ತು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಇಂಟರ್​ನೆಟ್‌, ಪ್ರತಿ ಆಟೋ ಚಾಲಕರ ಖಾತೆಗೆ ವರ್ಷಕ್ಕೆ 12,000 ರೂ. ಜಮೆ ಮಾಡುವ ಭರವಸೆಯನ್ನು ಕಾಂಗ್ರೆಸ್​ ನೀಡಿದೆ.

  • ಮುಖ್ಯಾಂಶಗಳು:
  • ಎಲ್ಲ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಕೃಷಿಗೆ 24 ಗಂಟೆಗಳ ನಿರಂತರ ಉಚಿತ ವಿದ್ಯುತ್.
  • ರೈತರಿಗೆ 2 ಲಕ್ಷ ರೂ. ಬೆಳೆ ಸಾಲ ಮನ್ನಾ ಮತ್ತು ವಾರ್ಷಿಕ 3 ಲಕ್ಷದವರೆಗೆ ಬಡ್ಡಿರಹಿತ ಬೆಳೆ ಸಾಲ. ಪ್ರಮುಖ ಬೆಳೆಗಳಿಗೆ ಸಮಗ್ರ ವಿಮಾ ಯೋಜನೆ ಜಾರಿ.
  • 500 ರೂ.ಗೆ ಗ್ಯಾಸ್ ಸಿಲಿಂಡರ್.
  • 6 ತಿಂಗಳೊಳಗೆ ಶಿಕ್ಷಕರ ಹುದ್ದೆಗಳ ಭರ್ತಿ ಮತ್ತು ವಾರ್ಷಿಕ ಉದ್ಯೋಗ ಕ್ಯಾಲೆಂಡರ್​ಗೆ ಬಿಡುಗಡೆಗೆ ಮೆಗಾ ಡಿಎಸ್​ಸಿ (Departmental Selection Committee) ಪರೀಕ್ಷೆ.
  • ತೆಲಂಗಾಣ ಚಳವಳಿ ಹುತಾತ್ಮರ ಕುಟುಂಬಗಳಿಗೆ 25 ಸಾವಿರ ರೂ. ಮಾಸಿಕ ಪಿಂಚಣಿ. ಪ್ರತಿ ಕುಟುಂಬಕ್ಕೆ ಸರ್ಕಾರಿ ನೌಕರಿ, ಹೋರಾಟಗಾರರ ಮೇಲಿನ ಪ್ರಕರಣಗಳ ವಾಪಸ್​, ಮತ್ತು 250 ಚದರ ಗಜದ ಮನೆ ನಿವೇಶನ ಹಂಚಿಕೆ.
  • ಕಾಳೇಶ್ವರಂ ಯೋಜನೆ ಕಾಮಗಾರಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ.
  • ಬಸರಾ ಟ್ರಿಪಲ್‌ಐಟಿಯಂತಹ ವ್ಯವಸ್ಥೆಗಳೊಂದಿಗೆ ಶಿಕ್ಷಣಕ್ಕಾಗಿ ರಾಜ್ಯದ ಬಜೆಟ್‌ನ ಶೇ.15ರಷ್ಟು ಅನುದಾನ ಹಂಚಿಕೆ.
  • 'ಭೂಮಾತಾ' ಹೆಸರಿನ ಹೊಸ ಪೋರ್ಟಲ್‌ನೊಂದಿಗೆ ಧರಣಿ ಪೋರ್ಟಲ್​ ಬದಲಾವಣೆ ಮತ್ತು ರೈತರಿಗೆ ಭೂಮಿಯ ಮೇಲೆ ಸಂಪೂರ್ಣ ಹಕ್ಕು.
  • ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿ.
  • ಎಸ್​ಸಿ ವರ್ಗೀಕರಣದ ನಂತರ ಎಸ್​ಸಿ ಉಪಜಾತಿಗಳಿಗೆ ಮೂರು ನಿಗಮಗಳ ರಚನೆ. ಜಾತಿ ಗಣತಿಯ ನಂತರ ಹಿಂದುಳಿದ ವರ್ಗಗಳಿಗೆ ಜನಸಂಖ್ಯೆ ಆಧಾರಿತ ಮೀಸಲಾತಿ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಉಪ ಯೋಜನೆಗಳ ಜಾರಿ ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗೆ ವಿಶೇಷ ಕಲ್ಯಾಣ ಮಂಡಳಿ ಸ್ಥಾಪನೆ.
  • ಪ್ರತಿ ಆಟೋ ಚಾಲಕರ ಖಾತೆಗೆ ವರ್ಷಕ್ಕೆ 12,000 ರೂ. ಜಮೆ.
  • 18 ವರ್ಷ ವಯಸ್ಸಿನ ಎಲ್ಲ ಓದುತ್ತಿರುವ ಹುಡುಗಿಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್​
  • ಸ್ವಸಹಾಯ ಗುಂಪುಗಳಿಗೆ ಸಾಲದ ಮಿತಿ 10 ಲಕ್ಷಕ್ಕೆ ಹೆಚ್ಚಳ
  • 18 ವರ್ಷ ವಯಸ್ಸಿನ ಎಲ್ಲ ಓದುತ್ತಿರುವ ಹುಡುಗಿಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್.
  • ಹೈದರಾಬಾದ್ ಪತ್ರಕರ್ತರ ವಸತಿ ಸಮಸ್ಯೆಗೆ ಪರಿಹಾರ ಮತ್ತು ಮೃತ ಪತ್ರಕರ್ತರ ಕುಟುಂಬಗಳಿಗೆ 2 ಲಕ್ಷ ಆರ್ಥಿಕ ನೆರವು.
  • ವಿಕಲಚೇತನರಿಗೆ ಮಾಸಿಕ ಪಿಂಚಣಿ 5,016 ರೂ.ಗೆ ಏರಿಕೆ ಮತ್ತು 50 ವರ್ಷ ಮೇಲ್ಪಟ್ಟ ಜಾನಪದ ಕಲಾವಿದರಿಗೆ 3,016 ರೂ. ನೆರವು
  • ಪ್ರತಿ ಜಿಲ್ಲೆಯಲ್ಲೂ 'ಗುರುಕುಲ' ಕ್ರೀಡಾ ಶಾಲೆ ಆರಂಭ
  • ಉತ್ತಮ ಗುಣಮಟ್ಟದ ಪಡಿತರ ಅಕ್ಕಿ ವಿತರಣೆ.
  • ಮಹಿಳೆಯರು, ವೃದ್ಧರು ಮತ್ತು ಅಂಗವಿಕಲರಿಗೆ ಮೆಟ್ರೋ ರೈಲು ದರದಲ್ಲಿ ಶೇ.50ರಷ್ಟು ರಿಯಾಯಿತಿ.

Last Updated : Nov 17, 2023, 8:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.