ETV Bharat / bharat

ಜಿನ್ನಾ ದೃಷ್ಟಿಕೋನ ಬೆಂಬಲಿಸುತ್ತಿರುವ ಬಿಜೆಪಿ ಎಂದ ಶಶಿ ತರೂರ್.. ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಹೊಸ ಹೆಸರು ಸೂಚಿಸಿದ್ರಾ ಕೈ ನಾಯಕ? - ಇಂಡಿಯಾಗೆ ಅಸಂಖ್ಯಾತ ಬ್ರ್ಯಾಂಡ್ ಮೌಲ್ಯ

ದೇಶದ ಹೆಸರು ಇಂಡಿಯಾ ಅಥವಾ ಭಾರತ ಎಂಬ ಕುರಿತು ರಾಷ್ಟ್ರದಾದ್ಯಂತ ಚರ್ಚೆ ನಡೆಯುತ್ತಿದೆ. ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಹೆಸರು ಬದಲಿಸುವ ಬಗ್ಗೆ ಕಾಂಗ್ರೆಸ್​ ನಾಯಕ ಶಶಿ ತರೂರ್​ ಹೊಸ ಹೆಸರನ್ನು ಸೂಚಿಸಿದ್ದಾರೆ.

congress-leader-shashi-tharoor-on-bharat-renaming-controversy
ಜಿನ್ನಾ ದೃಷ್ಟಿಕೋನ ಬೆಂಬಲಿಸುತ್ತಿರುವ ಬಿಜೆಪಿ ಎಂದ ಶಶಿ ತರೂರ್.. ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಹೊಸ ಹೆಸರು ಸೂಚಿಸಿದ್ರಾ ಕೈ ನಾಯಕ?
author img

By ETV Bharat Karnataka Team

Published : Sep 6, 2023, 2:09 PM IST

ನವದೆಹಲಿ: ದೇಶವನ್ನು ಇಂಡಿಯಾ ಬದಲಿಗೆ ಭಾರತ ಎಂದು ಮಾತ್ರ ಹೆಸರಿಸುವ ಕುರಿತು ಮಂಗಳವಾರದಿಂದ ಭಾರಿ ಚರ್ಚೆ ನಡೆಯುತ್ತಿದೆ. ಇದು ರಾಜಕೀಯ ಬಿರುಗಾಳಿಯನ್ನೂ ಎಬ್ಬಿಸಿದೆ. ಪ್ರತಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ 'ಇಂಡಿಯಾ' ಎಂದು ಹೆಸರಿಟ್ಟಿರುವ ಕಾರಣ ಕೇಂದ್ರ ಸರ್ಕಾರ ದೇಶಕ್ಕೆ 'ಭಾರತ' ಎಂದು ಮರುನಾಮಕರಣ ಮಾಡಲು ಮುಂದಾಗಿದೆ ಎಂಬ ಹೇಳಿಕೆಗಳು ಕೇಳಿಬರುತ್ತಿವೆ. ಇದರ ನಡುವೆ ಕಾಂಗ್ರೆಸ್​ ಸಂಸದ ಶಶಿ ತರೂರ್​, ತಮ್ಮ ಮೈತ್ರಿಕೂಟವನ್ನು 'ಭಾರತ' ಎಂದೂ ಕರೆಯಬಹುದು ಎಂದು ಸಲಹೆ ನೀಡಿದ್ದಾರೆ.

  • While the subject is live, let’s recall that it was Jinnah who objected to the name ‘India’ since it implied that our country was the successor state to the BritishRaj and Pakistan a seceding state. As with CAA, the BJP govt keeps supporting Jinnah’s view! https://t.co/Tfm7SucJAn

    — Shashi Tharoor (@ShashiTharoor) September 5, 2023 " class="align-text-top noRightClick twitterSection" data=" ">

ದೆಹಲಿಯಲ್ಲಿ ಸೆಪ್ಟೆಂಬರ್​ 9 ಹಾಗೂ 10ರಂದು ಜಿ-20 ಶೃಂಗಸಭೆ ನಡೆಯುತ್ತಿದೆ. ಈ ಶೃಂಗಸಭೆ ನಿಮಿತ್ತ ರಾಷ್ಟ್ರಪತಿಗಳು ಔತಣಕೂಟವನ್ನು ಏರ್ಪಡಿಸಿದ್ದಾರೆ. ಇದರ ಆಮಂತ್ರಣ ಪತ್ರಿಕೆಯಲ್ಲಿ ಹಿಂದಿನಿಂದಲೂ ಬಳಕೆಯಲ್ಲಿದ್ದ 'ಪ್ರೆಸಿಡೆಂಟ್​ ಆಫ್​ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್​ ಆಫ್​ ಭಾರತ' ಎಂದು ಮುದ್ರಣ ಮಾಡಿರುವುದೇ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಕಾಂಗ್ರೆಸ್​ ಸೇರಿ ಇತರ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಮತ್ತೊಂದೆಡೆ, ಆಳಿತಾರೂಢ ಬಿಜೆಪಿ ನಾಯಕರು ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಕಾಂಗ್ರೆಸ್​ ನಾಯಕ ಶಶಿ ತರೂರ್, ಇಂಡಿಯಾ ಹಾಗೂ ಭಾರತ ಎರಡೂ ಹೆಸರನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು. ಇಂದು ಬಿಜೆಪಿ ಸರ್ಕಾರದ ವಿರುದ್ಧ ನೇರವಾಗಿ ವಾಗ್ದಾಳಿ ಮಾಡಿರುವ ಅವರು, ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ದೃಷ್ಟಿಕೋನವನ್ನು ಬಿಜೆಪಿ ಬೆಂಬಲಿಸುತ್ತಿದೆ ಎಂದು ಕುಟುಕಿದ್ದಾರೆ.

  • We could of course call ourselves the Alliance for Betterment, Harmony And Responsible Advancement for Tomorrow (BHARAT).

    Then perhaps the ruling party might stop this fatuous game of changing names.

    — Shashi Tharoor (@ShashiTharoor) September 6, 2023 " class="align-text-top noRightClick twitterSection" data=" ">

''ವಿಭಜನೆಯ ಸಂದರ್ಭದಲ್ಲಿ ಜಿನ್ನಾ ಇಂಡಿಯಾ ಎಂಬ ಹೆಸರಿನ ಬಗ್ಗೆ ಆಕ್ಷೇಪಿಸಿದ್ದರು. ಏಕೆಂದರೆ, ಭಾರತವು ಬ್ರಿಟಿಷ್ ರಾಜ್‌ನ ಉತ್ತರಾಧಿಕಾರಿ ಮತ್ತು ಪಾಕಿಸ್ತಾನವು ಪ್ರತ್ಯೇಕಗೊಳ್ಳುತ್ತಿರುವ ರಾಜ್ಯ ಎಂದು ಸೂಚಿಸುತ್ತದೆ ಎಂದು ಜಿನ್ನಾ ಭಾವಿಸಿದ್ದರು. ಈ ಹಿಂದೆ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ)ಯಂತೆ ಬಿಜೆಪಿ ಸರ್ಕಾರ ಮತ್ತೊಮ್ಮೆ ಜಿನ್ನಾ ದೃಷ್ಟಿಕೋನ ಬೆಂಬಲಿಸುತ್ತಲೇ ಇದೆ'' ಎಂದು ಶಶಿ ತರೂರ್ ಟ್ವೀಟ್​ ಮಾಡಿದ್ದಾರೆ.

  • While there is no constitutional objection to calling India “Bharat”, which is one of the country’s two official names, I hope the government will not be so foolish as to completely dispense with “India”, which has incalculable brand value built up over centuries. We should… pic.twitter.com/V6ucaIfWqj

ಇದೇ ವೇಳೆ, ಪ್ರತಿಪಕ್ಷಗಳ ಮೈತ್ರಿಕೂಟವನ್ನು 'ಭಾರತ' ಎಂದು ಕರೆಯಬಹುದು ಎಂದೂ ತರೂರ್ ಮತ್ತೊಂದು ಟ್ವೀಟ್​ ಮಾಡಿದ್ದಾರೆ. ''ನಾವು ಖಂಡಿತವಾಗಿಯೂ 'ನಾಳೆಗಾಗಿ ಉತ್ತಮ, ಸಾಮರಸ್ಯ ಮತ್ತು ಜವಾಬ್ದಾರಿಯುತ ಪ್ರಗತಿ' (Betterment, Harmony And Responsible Advancement for Tomorrow - BHARAT)ಗಾಗಿ ನಮ್ಮ ಮೈತ್ರಿ ಎಂದು ಕರೆಯಬಹುದು. ಆಗ ಬಹುಶಃ ಆಡಳಿತ ಪಕ್ಷವು ಹೆಸರು ಬದಲಾಯಿಸುವ ಈ ದುರಾಸೆಯ ಆಟವನ್ನು ನಿಲ್ಲಿಸಬಹುದು'' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯಾಗೆ ಅಸಂಖ್ಯಾತ ಬ್ರ್ಯಾಂಡ್ ಮೌಲ್ಯ: ಮಂಗಳವಾರ ಕೂಡ ಇದೇ ವಿಷಯವಾಗಿ ಟ್ವೀಟ್​ ಮಾಡಿದ್ದ ಕಾಂಗ್ರೆಸ್​ ಸಂಸದ ಶಶಿ ತರೂರ್,​ ಭಾರತ ಹಾಗೂ ಇಂಡಿಯಾ ದೇಶದ ಎರಡು ಅಧಿಕೃತ ಹೆಸರುಗಳು ಎಂದು ಪ್ರತಿಪಾದಿಸಿದ್ದರು. ''ದೇಶಕ್ಕಿರುವ ಎರಡು ಅಧಿಕೃತ ಹೆಸರುಗಳಲ್ಲಿ ಒಂದಾಗಿರುವ ಇಂಡಿಯಾವನ್ನು 'ಭಾರತ್' ಎಂದು ಕರೆಯಲು ಯಾವುದೇ ಸಾಂವಿಧಾನಿಕ ಆಕ್ಷೇಪಣೆ ಇಲ್ಲ. ಶತಮಾನಗಳಿಂದ ಅಸಂಖ್ಯಾತ ಬ್ರಾಂಡ್ ಮೌಲ್ಯವನ್ನು ಹೊಂದಿರುವ 'ಇಂಡಿಯಾ' ಪದವನ್ನು ಸಂಪೂರ್ಣವಾಗಿ ತ್ಯಜಿಸುವಷ್ಟು ಮೂರ್ಖತನವನ್ನು ಸರ್ಕಾರವು ತೋರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಇತಿಹಾಸದ ಪುನರಾವರ್ತಿತ ಹೆಸರು, ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿರುವ ಹೆಸರಿನ ನಮ್ಮ ಹಕ್ಕನ್ನು ಬಿಟ್ಟುಕೊಡುವ ಬದಲು ಎರಡೂ ಪದಗಳನ್ನು ಬಳಸುವುದನ್ನು ಮುಂದುವರಿಸಬೇಕು'' ಎಂದು ಹೇಳಿದ್ದರು.

ಇದನ್ನೂ ಓದಿ: ಪ್ರತಿಪಕ್ಷಗಳ ಒಕ್ಕೂಟಕ್ಕೆ 'ಭಾರತ' ಎಂದು ಹೆಸರಿಟ್ಟರೆ ಏನ್ಮಾಡ್ತಾರೆ? - ಕೇಜ್ರಿವಾಲ್​: ಇಂಡಿಯಾ ಎಂದರೆ ಭಾರತವೇ, ಹಠಾತ್ ಏನಾಯಿತು? - ಮಮತಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.