ಮಲಪ್ಪುರಂ, ಕೇರಳ: ಕಾಂಗ್ರೆಸ್ ನಾಯಕ ಮತ್ತು ವಯನಾಡು ಸಂಸದ ರಾಹುಲ್ ಗಾಂಧಿ ಕೇರಳದ ಮಲಪ್ಪುರಂಗೆ ಭೇಟಿ ನೀಡಿದ್ದು, ಓಣಂ ಹಬ್ಬದ ಪ್ರಯುಕ್ತ ತಯಾರಿಸಲಾಗಿದ್ದ 'ಓಣಂ ಸಾದ್ಯ' (ವಿವಿಧ ಭಕ್ಷ್ಯಗಳು) ಸವಿದಿದ್ದಾರೆ.
ವಂಡೂರ್ನಲ್ಲಿರುವ ಗಾಂಧಿ ಭವನ ಸ್ನೇಹಾರಾಮಂ ವೃದ್ಧಾಶ್ರಮಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅಲ್ಲಿ ನೆಲೆಸಿದ್ದವರ ಜೊತೆಗೂಡಿ ಓಣಂ ಓಣಂ ಸಾದ್ಯವನ್ನು ಸವಿದಿದ್ದಾರೆ. ಎರಡು ದಿನಗಳ ವಯನಾಡು ಪ್ರವಾಸ ಕೈಗೊಂಡಿರುವ ಅವರು ಆಗಸ್ಟ್ 16ರಂದು ವೈನಾಡಿಗೆ ಬಂದಿದ್ದರು.
-
Kerala: Congress leader Rahul Gandhi had onasadya with the residents of Gandhi Bhavan Sneharamam (old age home) at Wandoor in Malappuram district today. pic.twitter.com/yvhN5zsWO1
— ANI (@ANI) August 17, 2021 " class="align-text-top noRightClick twitterSection" data="
">Kerala: Congress leader Rahul Gandhi had onasadya with the residents of Gandhi Bhavan Sneharamam (old age home) at Wandoor in Malappuram district today. pic.twitter.com/yvhN5zsWO1
— ANI (@ANI) August 17, 2021Kerala: Congress leader Rahul Gandhi had onasadya with the residents of Gandhi Bhavan Sneharamam (old age home) at Wandoor in Malappuram district today. pic.twitter.com/yvhN5zsWO1
— ANI (@ANI) August 17, 2021
ತಮ್ಮದೇ ಕ್ಷೇತ್ರವಾದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ಸಭೆಯೊಂದನ್ನು ನಡೆಸಿದರು. ಇದೇ ವೇಳೆ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ನನ್ನ ಕೊಂದರೂ ಸರಿ ಆಫ್ಘನ್ ತೊರೆಯಲ್ಲ: ಪಟ್ಟು ಹಿಡಿದ ಏಕೈಕ ಹಿಂದೂ ಅರ್ಚಕ