ETV Bharat / bharat

ಕಾಂಗ್ರೆಸ್​ನ ಹಿರಿಯ ನಾಯಕ ಮೋತಿ ಲಾಲ್ ವೋರಾ ಇನ್ನಿಲ್ಲ: ಮೋದಿ, ರಾಹುಲ್ ಸಂತಾಪ

ಕಾಂಗ್ರೆಸ್​ನ ಹಿರಿಯ ನಾಯಕ ಮೋತಿ ಲಾಲ್ ವೋರಾ ಇನ್ನಿಲ್ಲ

author img

By

Published : Dec 21, 2020, 3:27 PM IST

Updated : Dec 21, 2020, 9:09 PM IST

  • Shri Motilal Vora Ji was among the senior-most Congress leaders, who had vast administrative and organisational experience in a political career that spanned decades. Saddened by his demise. Condolences to his family and well-wishers. Om Shanti: PM @narendramodi

    — PMO India (@PMOIndia) December 21, 2020 " class="align-text-top noRightClick twitterSection" data=" ">

17:11 December 21

ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಸಂತಾಪ : ಮೋತಿ ಲಾಲ್ ವೋರಾ ಕಾಂಗ್ರೆಸ್ಸಿನ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಅವರು ರಾಜಕೀಯ ಜೀವನದಲ್ಲಿ ಅಪಾರ ಆಡಳಿತ ಮತ್ತು ಸಾಂಸ್ಥಿಕ ಅನುಭವವನ್ನು ಹೊಂದಿದ್ದರು. ಅವರ ನಿಧನದಿಂದ ಬೇಸರವಾಯಿತು. ದೇವರು ಅವರ ಕುಟುಂಬ ಮತ್ತು ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ರಾಹುಲ್ ಗಾಂಧಿ ಸಂತಾಪ: ವೋರಾ ಜಿ ನಿಜವಾದ ಕಾಂಗ್ರೆಸ್ಸಿಗ ಮತ್ತು ಅದ್ಭುತ ಮನುಷ್ಯ. ನಾವು ಅವರನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತೇವೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ದೇವರು ದುಃಖ ಭರಿಸುವ ಶಕ್ಕಿ ಕೊಡಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ಟೀಟ್ ಮಾಡಿದ್ದಾರೆ.

15:25 December 21

ತಮ್ಮ ಜೀವಿತಾವಧಿಯಲ್ಲಿ ನಾನಾ ಹುದ್ದೆಗಳನ್ನು ಅಲಂಕರಿಸಿದ್ದ ವೋರಾ ಇಂದು ಫೋರ್ಟಿಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಮೋತಿಲಾಲ್ ವೋರಾ ಸೋಮವಾರ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ನಿನ್ನೆ ತಾನೆ 93 ನೇ ವರ್ಷಕ್ಕೆ ಕಾಲಿಟ್ಟಿದ್ದರು.

ಕೋವಿಡ್​ಗೆ ತುತ್ತಾಗಿದ್ದ ವೋರಾ:  ವೋರಾ ಈ ಹಿಂದೆ ಕೋವಿಡ್​ ಸೋಂಕಿಗೆ ತುತ್ತಾಗಿದ್ದರು. ಆಗ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ದಾಖಲಿಸಲಾಗಿತ್ತು.

ರಾಜಸ್ತಾನದ ನಾಗ್ಪುರದಲ್ಲಿ ಜನನ: ಮೋಹನ್​ ಲಾಲ್ ವೋರಾ ಮತ್ತು ಅಂಬಾಬಾಯಿ ಅವರ ಪುತ್ರನಾಗಿ 20 ಡಿಸೆಂಬರ್ 1927 ರಂದು ರಾಜಸ್ತಾನದ ನಾಗ್ಪುರದಲ್ಲಿ ಜನಿಸಿದರು. ಇವರ ಪತ್ನಿ ಶಾಂತಿ ದೇವಿ ವೋರಾ.  

ಅನೇಕ ಹುದ್ದೆಗಳನ್ನು ಅಲಂಕರಿಸಿದ್ದ ಕೈ ಮುಖಂಡ: ಇವರು ಛತ್ತೀಸ್‌ಗಢದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ರಾಜ್ಯಸಭಾ ಸದಸ್ಯರಾಗಿ ನಾಲ್ಕು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜಿನಾಮೆ ಬಳಿಕ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆಯಾಗುವವರೆಗೂ ತಾತ್ಕಾಲಿಕವಾಗಿ ಕಾಂಗ್ರೆಸ್ ಪಕ್ಷದ ನೇತೃತ್ವವಹಿಸಿದ್ದರು. ಅಲ್ಲದೇ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿಯೂ ವೋರಾ ಕಾರ್ಯನಿರ್ವಹಿಸಿದ್ದಾರೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದ ವೋರಾ, ರಾಜಕೀಯಕ್ಕೆ ಕಾಲಿಡುವ ಮೊದಲು ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. 1972 ರಲ್ಲಿ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದರು. ಬಳಿಕ ಅವರನ್ನು 1983 ರಲ್ಲಿ ಅರ್ಜುನ್ ಸಿಂಗ್ ಅವರ ಆಡಳಿತದಲ್ಲಿ ಕೇಂದ್ರ ಸಚಿವರಾಗಿದ್ದರು. 

ಇದನ್ನೂ ಓದಿ:ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದ ವಿದೇಶಿಗರನ್ನು ವಾಪಸ್​ ಕಳಿಸಲು ಕ್ರಮ ಕೈಗೊಳ್ಳಿ: ಸರ್ಕಾರಕ್ಕೆ ಸುಪ್ರೀಂ ಸೂಚನೆ

1985 ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರು 1993 ರಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದರು. ರಾಜ್ಯಪಾಲರಾಗಿ ಅಧಿಕಾರವಧಿ ಮುಗಿದ ನಂತರ, 1998 ರ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ ರಾಜನಂದಗಾಂವ್ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು. ಆದರೆ, ಅದರ ನಂತರದ ಚುನಾವಣೆಯಲ್ಲಿ ಬಿಜೆಪಿಯ ಡಾ.ರಾಮನ್ ವಿರುದ್ಧ ಸೋತರು.  ಆ ಭಳಿಕ ಅವರು ಪಕ್ಷದ ಚಟುವಟಿಕೆಗಳಲ್ಲಿ ಮಾತ್ರ ನಿರತರಾಗಿದ್ದರು. ಪಕ್ಷದ ಖಜಾಂಚಿಯಾಗಿ ಕೆಲಸ ಮಾಡಿ ಗ್ರ್ಯಾಂಡ್​ ಓಲ್ಡ್​​ ಪಾರ್ಟಿಗೆ ಸೇವೆ ಸಲ್ಲಿಸಿದ್ದರು. 

ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನ: ತಮ್ಮ ಜೀವಿತಾವಧಿಯಲ್ಲಿ ನಾನಾ ಹುದ್ದೆಗಳನ್ನು ಅಲಂಕರಿಸಿದ್ದ ವೋರಾ ಇಂದು ಫೋರ್ಟಿಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

Last Updated : Dec 21, 2020, 9:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.