ETV Bharat / bharat

Congress in deep freezer:'ಕೋಮಾದಲ್ಲಿ ಕಾಂಗ್ರೆಸ್​'.. ಬಿಜೆಪಿ ವಿರುದ್ಧ ಹೋರಾಡಲು ದೀದಿ ನಾಯಕತ್ವ ಅಗತ್ಯ: ಟಿಎಂಸಿ - ಕೋಮಾದಲ್ಲಿ ಕಾಂಗ್ರೆಸ್​

ತೃಣಮೂಲ ಕಾಂಗ್ರೆಸ್​(ಟಿಎಂಸಿ)ಪಕ್ಷದ ಮುಖವಾಣಿಯಾಗಿರುವ ಜಾಗೋ ಬಾಂಗ್ಲಾದಲ್ಲಿ 'ಕಾಂಗ್ರೆಸ್​ ಇನ್​ ಡೀಪ್​ ಫ್ರೀಜರ್​' ಎಂಬ ತಲೆಬರಹದಲ್ಲಿ ಭಿತ್ತರಿಸಿದ ಸುದ್ದಿಯಲ್ಲಿ ಕಾಂಗ್ರೆಸ್​ ಪಕ್ಷವನ್ನು ಟೀಕೆ ಮಾಡಲಾಗಿದೆ.

TMC mouthpiece
ಕೋಮಾದಲ್ಲಿ ಕಾಂಗ್ರೆಸ್​
author img

By

Published : Dec 3, 2021, 9:21 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಯುಪಿಎ ಅಸ್ತಿತ್ವವನ್ನು ಪ್ರಶ್ನಿಸಿದ ಬಳಿಕ ಕಾಂಗ್ರೆಸ್​ ಮತ್ತು ಟಿಎಂಸಿ ನಾಯಕರ ಮಧ್ಯೆ ವಾಕ್ಸಮರ ಜೋರಾಗಿದೆ.

ಬಿಜೆಪಿ ವಿರುದ್ಧ ಹೋರಾಡುವ ಶಕ್ತಿ ಕಾಂಗ್ರೆಸ್​ ಉಳಿಸಿಕೊಂಡಿಲ್ಲ. ಅದು ಶಕ್ತಿಹೀನ ಪಕ್ಷವಾಗಿದೆ. ಪಕ್ಷ 'ಕೋಮಾ ಸ್ಥಿತಿ'ಗೆ ಜಾರಿದೆ ಎಂದು ಟಿಎಂಸಿ, ದೇಶದ ಹಳೆ ಪಕ್ಷವನ್ನು ವಿರುದ್ಧ ಕಟುವಾಗಿ ಟೀಕಿಸಿದೆ.

ಈ ಬಗ್ಗೆ ತೃಣಮೂಲ ಕಾಂಗ್ರೆಸ್​ ಪಕ್ಷದ ಮುಖವಾಣಿಯಾಗಿರುವ ಜಾಗೋ ಬಾಂಗ್ಲಾದಲ್ಲಿ 'ಕಾಂಗ್ರೆಸ್​ ಇನ್​ ಡೀಪ್​ ಫ್ರೀಜರ್​' ಎಂಬ ತಲೆಬರಹದಲ್ಲಿ ಭಿತ್ತರಿಸಿದ ಸುದ್ದಿಯಲ್ಲಿ ಕಾಂಗ್ರೆಸ್​ ಪಕ್ಷವನ್ನು ಟೀಕೆ ಮಾಡಲಾಗಿದೆ. ಮುಂದುವರಿದು ಕಾಂಗ್ರೆಸ್​ ದೇಶದ ಚುಕ್ಕಾಣಿ ಹಿಡಿಯುವಷ್ಟು ಬಲಯುತವಾಗಿಲ್ಲ. ಅದು ಆಂತರಿಕ ಕಚ್ಚಾಟದಲ್ಲಿಯೇ ಮುಳುಗಿದೆ. ಅಂತಹ ಪಕ್ಷ ಬಿಜೆಪಿ ವಿರುದ್ಧ ಹೋರಾಡುವುದು ಹೇಗೆ?. ಯುಪಿಎ ಅಸ್ತಿತ್ವ ಕಳೆದುಕೊಂಡಿದೆ ಎಂದೆಲ್ಲಾ ಟೀಕಿಸಲಾಗಿದೆ.

ಇದನ್ನೂ ಓದಿ: ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಸಾಲಿಗೆ ಹೊಸ ಒಟಿಟಿ ಸೇರ್ಪಡೆ.. ಭಾರತದಲ್ಲಿ ‘ಹೇಯು’ ಸೇವೆ ಆರಂಭ

ದೇಶಕ್ಕೆ ಪ್ರಸ್ತುತ ಪರ್ಯಾಯ ನಾಯಕತ್ವದ ಅಗತ್ಯವಿದೆ. ವಿರೋಧ ಪಕ್ಷಗಳೆಲ್ಲವೂ ಸೇರಿ ಮಮತಾ ಬ್ಯಾನರ್ಜಿ ಅವರಿಗೆ ಆ ಜವಾಬ್ದಾರಿಯನ್ನು ನೀಡಲು ಮುಂದಾಗಿವೆ. ಅವರು ಸ್ಥಾನವನ್ನು ಸಮರ್ಥವಾಗಿ ತುಂಬಲಿದ್ದಾರೆ. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ದೀದಿ ಒಬ್ಬರೇ ವಿರೋಧ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ ಎಂದು ಟಿಎಂಸಿ ಪಕ್ಷ ಹೇಳಿದೆ.

ನಿನ್ನೆಯಷ್ಟೇ ಚುನಾವಣಾ ಚಾಣಕ್ಯ ಎಂದೇ ಖ್ಯಾತರಾದ ಪ್ರಶಾಂತ್ ಕಿಶೋರ್​ ಕಾಂಗ್ರೆಸ್​ ನಾಯಕತ್ವ ಗಾಂಧಿ ಕುಟುಂಬದ ದೈವಿಕ ಶಕ್ತಿಯಲ್ಲ. ಪಕ್ಷದ ಹಿರಿಯ ನಾಯಕರೇ ನಾಯಕತ್ವದ ವಿರುದ್ಧ ಬಂಡೆದಿದ್ದಾರೆ ಎಂದು ಟ್ವೀಟ್​ ಮೂಲಕ ಟೀಕಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.