ETV Bharat / bharat

ಪೆಗಾಸಸ್​ ಪ್ರಕರಣ: ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಕಾಂಗ್ರೆಸ್​ ಒತ್ತಾಯ - ಪೆಗಾಸಸ್​​ ಎಂಬ ಸ್ಪೈವೇರ್

ಇಸ್ರೇಲ್​ ಮೂಲದ ಪೆಗಾಸಸ್​​ ಎಂಬ ಸ್ಪೈವೇರ್​ ಅಪ್ಲಿಕೇಶನ್​ ದೇಶದಲ್ಲಿ ಭಾರೀ ಸದ್ದು ಮಾಡ್ತಿದ್ದು, ಇದರ ಮೂಲಕ ನಡೆದಿರುವ ಫೋನ್​ ಹ್ಯಾಕಿಂಗ್​​​ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೊಳಪಡಿಸುವಂತೆ ಕಾಂಗ್ರೆಸ್​ ಆಗ್ರಹಿಸಿದೆ.

congress
congress
author img

By

Published : Jul 20, 2021, 5:40 PM IST

ನವದೆಹಲಿ: ಪೆಗಾಸಸ್​​ ಸ್ಪೈವೇರ್ ಇದೀಗ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಇದೇ ವಿಷಯವನ್ನಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿವೆ. ನಿನ್ನೆಯಿಂದ ಆರಂಭಗೊಂಡಿರುವ ಮುಂಗಾರು ಅಧಿವೇಶನದ ಸದನದಲ್ಲೂ ಇದೇ ವಿಷಯ ಸದ್ದು ಮಾಡ್ತಿದ್ದು, ಈ ಪ್ರಕರಣವನ್ನ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸುವಂತೆ ಕಾಂಗ್ರೆಸ್ ಒತ್ತಾಯ ಮಾಡಿದೆ.

ಇದೇ ವಿಷಯವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕಾಂಗ್ರೆಸ್​ ಸಂಸದ ಶಕ್ತಿಶಾಹಿ ಗೋಹಿಲ್​, ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಪೋನ್ ಟ್ಯಾಪಿಂಗ್ ಬಗ್ಗೆ ಚರ್ಚೆ ನಡೆಸುವಂತೆ ನೋಟಿಸ್​ ನೀಡಲಾಗಿದ್ದು, ಸದನದಲ್ಲಿ 267ರ ಅಡಿಯಲ್ಲಿ ಚರ್ಚೆಗೆ ವಕಾಶ ನೀಡಬೇಕು ಎಂದಿದ್ದಾರೆ. ಜತೆಗೆ ಪೆಗಾಸಸ್​​ ಟ್ಯಾಪಿಂಗ್​ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಲು ಕೇಂದ್ರ ಸರ್ಕಾರ ಆದೇಶಿಸಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೊಬೈಲ್​ ಟಾರ್ಚ್‌ಲೈಟ್​ ಬಳಸಿ ಆಪರೇಷನ್​... ಸರ್ಕಾರಿ ಆಸ್ಪತ್ರೆಯಲ್ಲಿ ಇದೆಂಥಾ ದುಸ್ಥಿತಿ!?

ಪೆಗಾಸಸ್​​ನಿಂದ ದೇಶದ ಅನೇಕ ರಾಜಕೀಯ ಮುಖಂಡರು, ಪತ್ರಕರ್ತರ ಪೋನ್ ಹ್ಯಾಕ್​ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವರು ತಕ್ಷಣವೇ ಪ್ರತಿಕ್ರಿಯೆ ನೀಡಬೇಕು. ಪೋನ್​ ಟ್ಯಾಪಿಂಗ್ ಮೂಲಕ ಭಾರತೀಯ ಪ್ರಜಾಪ್ರಭುತ್ವ ಹಾಳು ಮಾಡುವ ಕೆಲಸ ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ. ಪೆಗಾಸಸ್​ ವಿಚಾರದಲ್ಲಿ ಕೇಂದ್ರ ಸರ್ಕಾರ ಗೊಂದಲ ಸೃಷ್ಟಿ ಮಾಡ್ತಿದ್ದು, ಸ್ಪೈವೇರ್​ ಖರೀದಿ ಮಾಡಿದೆಯೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟವಾದ ಉತ್ತರ ನೀಡಿಲ್ಲ ಎಂದಿದ್ದಾರೆ.

ಪೆಗಾಸಸ್​ ವಿಚಾರವನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ಸೇರಿದಂತೆ ವಿವಿಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸುತ್ತಿದ್ದು, ಉಭಯ ಸದನಗಳಲ್ಲಿ ಗದ್ದಲ ಮಾಡುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಪ್ರತಿಕ್ರಿಯೆ ನೀಡಿರುವ ರವಿಶಂಕರ್ ಪ್ರಸಾದ್​, ಈ ಸುದ್ದಿ ಬ್ರೇಕ್ ಮಾಡಿರುವ 'ದಿ ವೈರ್'​ ಈ ಹಿಂದೆ ಕೂಡ ಅನೇಕ ತಪ್ಪು ಸುದ್ದಿ ಬಿತ್ತರಿಸಿರುವ ಉದಾಹರಣೆಗಳಿವೆ ಎಂದಿದ್ದಾರೆ. 50 ವರ್ಷ ದೇಶದಲ್ಲಿ ಆಡಳಿತ ನಡೆಸಿರುವ ಪಕ್ಷವೊಂದು ಈ ರೀತಿಯ ಕೀಳುಮಟ್ಟದ ರಾಜಕೀಯ ಮಾಡುತ್ತಿರುವುದು ನಿಜಕ್ಕೂ ಆಘಾತಕಾರಿ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.