ETV Bharat / bharat

ಮುಂದುವರೆದ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಸಸ್ಪೆನ್ಸ್​​.. ಕುತೂಹಲ ಮೂಡಿಸಿದ ಸೋನಿಯಾ ನಡೆ! - ಕಾಂಗ್ರೆಸ್​​ ಪ್ರಶಾಂತ್ ಕಿಶೋರ್

2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಕೈ ಜೋಡಿಸಿ, ಕೆಲಸ ಮಾಡಲು ಮುಂದಾಗಿರುವ ಪ್ರಶಾಂತ್ ಕಿಶೋರ್​ ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಸ್ಪೆನ್ಸ್ ಮುಂದುವರೆದಿದೆ.

Prashant Kishore to join congress
Prashant Kishore to join congress
author img

By

Published : Apr 25, 2022, 3:42 PM IST

ನವದೆಹಲಿ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷ ಸೇರುವ ಸಸ್ಪೆನ್ಸ್​ ಈಗಲೂ ಮುಂದುವರೆದಿದೆ. ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರವಾಗಿ ಪಕ್ಷ ರಚನೆ ಮಾಡಿದ್ದ ಸಮಿತಿ ಈಗಾಗಲೇ ತನ್ನ ವರದಿಯನ್ನ ಸೋನಿಯಾ ಗಾಂಧಿ ಅವರ ಕೈಗೆ ನೀಡಿದೆ. ವರದಿ ಹಸ್ತಾಂತರ ಮಾಡಿದ ಬಳಿಕ ಕೂಡ ಕಾಂಗ್ರೆಸ್​​ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಯ್ದು ನೋಡುವ ತಂತ್ರದ ಮೊರೆಹೋಗಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಹೇಗಾದ್ರೂ ಮಾಡಿ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಕಾಂಗ್ರೆಸ್, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಅವರು ಕೈ ಪರವಾಗಿ ಕೆಲಸ ಮಾಡಲು ಈಗಾಗಲೇ ಒಪ್ಪಿಕೊಂಡಿದ್ದಾರೆ.

ಇದರ ಮಧ್ಯೆ ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಮಿತಿ ರಚನೆ ಮಾಡಲಾಗಿದ್ದು ಇಂದೇ ಸೋನಿಯಾ ಗಾಂಧಿ ಅವರಿಗೆ ಈ ಬಗ್ಗೆ ವರದಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಬರುವ ಮೇ. 13ರಿಂದ ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ ಮೂರು ದಿನಗಳ ಸಮಾವೇಶ ನಡೆಯಲಿದ್ದು, ಈ ವೇಳೆ ಇದರ ಬಗ್ಗೆ ಮಹತ್ವದ ಘೋಷಣೆ ಹೊರಹಾಕುವ ಸಾಧ್ಯತೆ ಇದೆ.

ಇದನ್ನೂ ಓದಿ: ಶ್ರೀಕಾಳಹಸ್ತಿಯಲ್ಲಿ ಭೀಕರ ರಸ್ತೆ ಅಪಘಾತ.. ನಾಲ್ವರ ದುರ್ಮರಣ, 8 ಮಂದಿ ಸ್ಥಿತಿ ಗಂಭೀರ

ಪ್ರಶಾಂತ್ ಕಿಶೋರ್ ಈಗಾಗಲೇ ಪ್ರಧಾನಿ ಮೋದಿ, ಜೆಡಿಯು, ವೈಎಸ್​ಆರ್ ಕಾಂಗ್ರೆಸ್​, ಡಿಎಂಕೆ ಮತ್ತು ಟಿಆರ್​ಎಸ್ ಜೊತೆ ಕೆಲಸ ಮಾಡಿದ್ದು, ಇದೀಗ ಕಾಂಗ್ರೆಸ್​ ಜೊತೆ ಕೈಜೋಡಿಸುತ್ತಿರುವ ಕಾರಣ, ಅನೇಕ ಸಮಸ್ಯೆಗಳು ಎದುರಾಗಿವೆ. ಒಂದು ವೇಳೆ ಕೈ ಪಕ್ಷ ಸೇರಿದರೆ, ಉಳಿದ ಪ್ರಾದೇಶಿಕ ಪಕ್ಷಗಳ ಜೊತೆಗಿನ ಸಂಬಂಧ ಕಡಿದುಕೊಳ್ಳಬೇಕಾಗುತ್ತದೆ. ಇದೇ ವಿಚಾರವಾಗಿ ಅವರೊಂದಿಗೆ ಮಾತುಕತೆ ಸಹ ನಡೆದಿದೆ.

2014ರಲ್ಲಿ ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಅವರು ಮುಖ್ಯಮಂತ್ರಿ ಕೆಸಿಆರ್ ಜೊತೆ ಕೆಲಸ ಮಾಡಲು ಒಪ್ಪಿಕೊಂಡಿದ್ದು, ಹೀಗಾಗಿ ಕಾಂಗ್ರೆಸ್​​ ಪಕ್ಷದ ಕೆಲವರು ಅವರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.