ಅಹಮದಾಬಾದ್: ಅಹಮದಾಬಾದ್ ನಗರದ ಮುಸ್ಲಿಂ ಪ್ರಾಬಲ್ಯದ ಜಮಾಲ್‌ಪುರ ಖಾಡಿಯಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಖೇದವಾಲಾ ಗೆಲುವು ಸಾಧಿಸಿದ್ದಾರೆ. ಅವರು ಐಎನ್ಡಿ ಅಭ್ಯರ್ಥಿ ಮೆಹಬೂಬ್ ಮೊಹಮ್ಮದ್ ಭಾಯ್ ರಂಗ್ರೇಜ್ ಅವರನ್ನು ಸೋಲಿಸಿದ್ದು, ಬಿಜೆಪಿ ಭೂಷಣ್ ಭಟ್ ಭಾರೀ ಹಿನ್ನಡೆ ಸಾಧಿಸಿದ್ದಾರೆ
ಕಾಂಗ್ರೆಸ್ನ ಇಮ್ರಾನ್ ಖೇದವಾಲಾ 2017 ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದರು. ಈ ಕ್ಷೇತ್ರದಲ್ಲಿ ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಯಾ-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಎಐಎಂಐ ಮತ್ತು ಆಮ್ ಆದ್ಮಿ ಪಕ್ಷವನ್ನು ಭಾರತೀಯ ಜನತಾ ಪಕ್ಷದ ಬಿ-ಟೀಮ್ ಎಂದು ಚುನಾವಣಾ ಪ್ರಚಾರದಲ್ಲಿ ಟೀಕಿಸಿದ್ದರು.
ಇದನ್ನೂ ಓದಿ: ಗುಜರಾತ್ನಲ್ಲಿ ಮತ್ತೆ ಕಮಲ ಕಮಾಲ್: ಸೌರಾಷ್ಟ್ರದಲ್ಲಿ ಖಾತೆ ತೆರೆದ ಆಮ್ ಆದ್ಮಿ, ಕಾಂಗ್ರೆಸ್ ಗೆ ಹಿನ್ನಡೆ