ETV Bharat / bharat

ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ವೈಎಸ್ ಶರ್ಮಿಳಾ ನೇಮಕ - ಕಾಂಗ್ರೆಸ್ ಅಧ್ಯಕ್ಷರ ನೇಮಕ

ತಕ್ಷಣದಿಂದ ಜಾರಿಗೆ ಬರುವಂತೆ ವೈಎಸ್ ಶರ್ಮಿಳಾ ರೆಡ್ಡಿ ಅವರನ್ನು ಆಂಧ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಆಂಧ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ವೈಎಸ್ ಶರ್ಮಿಳಾ ನೇಮಕ

author img

By ANI

Published : Jan 16, 2024, 3:34 PM IST

Updated : Jan 16, 2024, 4:28 PM IST

ನವದೆಹಲಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ರೆಡ್ಡಿ ಅವರನ್ನು ಮಂಗಳವಾರ ಆಂಧ್ರ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಶರ್ಮಿಳಾ ಈ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ಸೇರಿದ್ದರು. ಅಲ್ಲದೇ ತಮ್ಮ ವೈಎಸ್ಆರ್ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್​​ನಲ್ಲಿ ವಿಲೀನಗೊಳಿಸಿದ್ದರು. ಈ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್​ ಹೈಕಮಾಂಡ್​ ಶರ್ಮಿಳಾ ಅವರನ್ನು ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿದೆ. ಪಕ್ಷ ಪ್ರಕಟಣೆ ಕೂಡ ಹೊರಡಿಸಿದೆ.

  • YS Sharmila Reddy appointed as the president of the Andhra Pradesh Congress with immediate effect. Outgoing president Gidigu Rudra Raju to be the Special Invitee to the Congress Working Committee. pic.twitter.com/KdjlduDldS

    — ANI (@ANI) January 16, 2024 " class="align-text-top noRightClick twitterSection" data=" ">

ಆಂಧ್ರಪ್ರದೇಶದ ಅಧ್ಯಕ್ಷ ಸ್ಥಾನಕ್ಕೆ ಗಿಡುಗು ರುದ್ರರಾಜು ರಾಜೀನಾಮೆ ನೀಡಿದ ಒಂದು ದಿನದ ನಂತರ ಕಾಂಗ್ರೆಸ್​ನಲ್ಲಿ ಈ ಬೆಳವಣಿಗೆ ನಡೆದಿದೆ. ಸದ್ಯ ರುದ್ರರಾಜು ಅವರನ್ನು ಹೈಕಮಾಂಡ್​​ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗಿದೆ.

ಇದನ್ನೂ ಓದಿ: ರಾಹುಲ್​, ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ ಆಂಧ್ರ ಸಿಎಂ ಜಗನ್​ ಸಹೋದರಿ ಶರ್ಮಿಳಾ

ವೈಎಸ್ಆರ್ ವಿಲೀನದ ಬಳಿಕ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಅಧಿಕಾರದ ಗದ್ದುಗೆಗೆ ಏರಿದ್ದು ಆಂಧ್ರದಲ್ಲಿಯೂ ಗೆಲ್ಲುವ ಭರವಸೆ ಹೊಂದಿದೆ. ಆಂಧ್ರಪ್ರದೇಶದಲ್ಲಿ ಲೋಕಸಭೆ ಚುನಾವಣೆ ಜೊತೆಗೆ ಏಪ್ರಿಲ್-ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಕೂಡ ನಡೆಯಲಿದೆ ಎಂದು ಹೇಳಲಾಗುತ್ತಿದ್ದು ಕೈ ಪಕ್ಷ ಈಗಿನಿಂದಲೇ ಸಂಘಟನೆಯಲ್ಲಿ ತೊಡಗಿದೆ. ರಾಜ್ಯ ಇಬ್ಭಾಗವಾದ ನಂತರ ಸರಿಪಡಿಸಲಾಗದಷ್ಟು ಪಾತಾಳದಲ್ಲಿದ್ದ ಆಂಧ್ರ ಪ್ರದೇಶ ಕಾಂಗ್ರೆಸ್​ಗೆ ಶರ್ಮಿಳಾ ಅವರ ಆಗಮನ ಹೊಸ ಉತ್ಸಾಹ ತಂದಿದೆ. ಈಗಾಗಲೇ ವೈಎಸ್‌ಆರ್‌ಸಿಪಿ ತೊರೆದಿರುವ ಹಲವು ಪ್ರಮುಖ ನಾಯಕರು ಪುನಃ ಕಾಂಗ್ರೆಸ್ ಪಕ್ಷ ಸೇರುವ ಬಯಕೆ ಇಟ್ಟುಕೊಂಡಿದ್ದಾರೆ.

ತೆಲಂಗಾಣ ವಿಧಾನಸಭೆ ಚುನಾವಣೆಗೂ ಮುನ್ನ ವೈಎಸ್​​ಆರ್​ ತೆಲಂಗಾಣ ಕಾಂಗ್ರೆಸ್​ ಸ್ಥಾಪಿಸಿದ್ದ ಶರ್ಮಿಳಾ ಅವರು, ಕೆಸಿಆರ್ ಸರ್ಕಾರದ ವಿರುದ್ಧ ತೆಲಂಗಾಣ ರಾಜ್ಯಾದ್ಯಂತ ಅಭಿಯಾನ ಕೈಗೊಂಡಿದ್ದರು. ರಾಜ್ಯ ತುಂಬೆಲ್ಲ ಓಡಾಡಿ ಹೋರಾಟ ನಡೆಸಿದ್ದರು. ಆದರೆ, ಅಂತಿಮವಾಗಿ ಚುನಾವಣೆ ಘೋಷಣೆ ಆಗುವುದಕ್ಕೂ ಮುನ್ನ ವೈಎಸ್​ಆರ್​​ ತೆಲಂಗಾಣ ಕಾಂಗ್ರೆಸ್​ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು.

ಈ ವೇಳೆ ಅವರು, ತಮ್ಮ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಟಿಆರ್​ಎಸ್​​ಗೆ ಅನುಕೂಲ ಆಗುತ್ತೆ ಹಾಗೂ ಮತ ವಿಭಜನೆ ಕೆಸಿಆರ್​​ಗೆ ಲಾಭ ತಂದುಕೊಡುತ್ತದೆ ಎಂಬ ಕಾರಣ ನೀಡಿ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದರು. ಇವರ ಈ ನಿರ್ಧಾರ ಸಹ ಕೆಸಿಆರ್ ಸೋಲಿಗೆ ಕಾರಣವಾಯ್ತು. ಈ ಮೂಲಕ ಅವರು 10 ವರ್ಷಗಳ ಬಳಿಕ ಕಾಂಗ್ರೆಸ್​ ತೆಲಂಗಾಣದಲ್ಲಿ ಅಧಿಕಾರ ಹಿಡಿಯಲು ಪರೋಕ್ಷವಾಗಿ ನೆರವಾಗಿದ್ದರು.

ಇನ್ನು ಚುನಾವಣೆ ಬಳಿಕ ಅಂದರೆ ಈ ತಿಂಗಳ ಆರಂಭದಲ್ಲಿ ಜಗನ್​ ಸಹೋದರಿಯೂ ಆಗಿರುವ ವೈಎಸ್​ ಶರ್ಮಿಳಾ ವೈಎಸ್​​ಆರ್​​ಪಿ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್​ ಪಕ್ಷದಲ್ಲಿ ವಿಲೀನಗೊಳಿಸಿರುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲ ತಂದೆ ಈ ಹಿಂದೆ ಇದ್ದ ಮಾತೃ ಪಕ್ಷ ಕಾಂಗ್ರೆಸ್​ ಸೇರ್ಪಡೆ ಆಗಿದ್ದರು. ಇದೀಗ ರಾಷ್ಟ್ರೀಯ ಕಾಂಗ್ರೆಸ್​ ನಾಯಕರು ಶರ್ಮಿಳಾ ಅವರನ್ನು ತೆಲಂಗಾಣದ ಕಾಂಗ್ರೆಸ್​ ರಾಜ್ಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ಹೈಕಮಾಂಡ್​ನ ಈ ನಿರ್ಧಾರ ಅಚ್ಚರಿ ಮೂಡಿಸಿದ್ದು, ತೆಲಂಗಾಣದಲ್ಲಿ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಹಾಗೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತಷ್ಟು ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಈ ಆಯ್ಕೆ ಮಾಡಲಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

Last Updated : Jan 16, 2024, 4:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.