ನವದೆಹಲಿ : ರೈತರ ಪ್ರತಿಭಟನಾ ಸ್ಥಳಗಳಿಂದ ನೀರು ಮತ್ತು ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿರುವುದಕ್ಕಾಗಿ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ದೂಷಿಸುತ್ತದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಕೆ ಸಿ ವೇಣುಗೋಪಾಲ್ ಕಿಡಿ ಕಾರಿದರು.
71 ದಿನಗಳಿಂದ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಒಂದು ಕಡೆ ಕೇಂದ್ರ ಸರ್ಕಾರ ಮಾತುಕತೆಗೆ ಸಿದ್ಧವಾಗಿದೆ. ಮತ್ತೊಂದೆಡೆ ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ರೈತರಿಗೆ ಕಿರುಕುಳ ನೀಡುತ್ತಿದೆ. ಒಂದು ಪ್ರಜಾಪ್ರಭುತ್ವ ಸರ್ಕಾರ ಈ ರೀತಿ ವರ್ತಿಸಲು ಹೇಗೆ ಸಾಧ್ಯ? ಎಂದು ವೇಣುಗೋಪಾಲ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದರೆ ಶಬರಿಮಲೆ ನಿಯಮ ಉಲ್ಲಂಘಿಸುವವರಿಗೆ 2 ವರ್ಷ ಜೈಲು ಶಿಕ್ಷೆ: ಯುಡಿಎಫ್
ನೂತನ ಕೃಷಿ ಕಾನೂನುಗಳ ವಿರುದ್ಧದ ಹೋರಾಟಕ್ಕಾಗಿ ರೈತರಿಗೆ ಕಾಂಗ್ರೆಸ್ ಹೆಗಲು ಕೊಟ್ಟು ಅವರ ಪರ ನಿಲ್ಲುತ್ತದೆ ಎಂದ ಅವರು, ಇಂದಿನ 'ಚಕ್ಕಾ ಜಾಮ್'ಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.