ETV Bharat / bharat

ಯೋಗದಲ್ಲಿ ಆರಂಭಿಕರು ಈ ತಪ್ಪುಗಳನ್ನು ಮಾಡದಿರಿ: ಇಲ್ಲಿವೆ ಉಪಯುಕ್ತ ಟಿಪ್ಸ್‌ - Diet Rules for Yoga practice

ಯೋಗಾಭ್ಯಾಸ ಮಾಡುವಾಗ ನಮ್ಮ ಮೆದುಳು, ಮನಸ್ಸು ಮತ್ತು ದೇಹ ಮೂರೂ ಒಂದೇ ಸಮಯದಲ್ಲಿ ಸಕ್ರಿಯವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಒಂದು ತಪ್ಪು ದೇಹಕ್ಕೆ ಹಾನಿಯನ್ನುಂಟು ಮಾಡಬಹುದು. ಆರಂಭಿಕರು ಮಾಡುವ ಇಂತಹ ಕೆಲವು ತಪ್ಪುಗಳು ಇಲ್ಲಿವೆ..

Common Mistakes In Yoga Made By Beginners
ಯೋಗದಲ್ಲಿ ಆರಂಭಿಕರು ಮಾಡುವ ಸಾಮಾನ್ಯ ತಪ್ಪುಗಳಿವು
author img

By

Published : Jan 7, 2022, 3:45 PM IST

ಯೋಗವನ್ನು ನಿಯಮಿತವಾಗಿ ಶಿಸ್ತುಬದ್ಧವಾಗಿ ಮತ್ತು ಸುರಕ್ಷತೆಯೊಂದಿಗೆ ಅಭ್ಯಾಸ ಮಾಡಿದಾಗ ಅದು ಮನಸ್ಸು ಮತ್ತು ದೇಹ ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ. ಆದರೆ, ಕೆಲವೊಮ್ಮೆ ಸಣ್ಣ ತಪ್ಪು ಕೂಡ ದೇಹಕ್ಕೆ ಹಾನಿ ಉಂಟುಮಾಡುತ್ತದೆ. ಆದ್ದರಿಂದ, ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಕೆಲವು ಸಂಗತಿಗಳು ಇಲ್ಲಿವೆ.

ಯೋಗವು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ಅದು ನಮ್ಮನ್ನು ಸದೃಢವಾಗಿರಿಸುತ್ತದೆ. ಮನಸ್ಸು ಮತ್ತು ದೇಹದ ನಡುವೆ ಸಮತೋಲನವನ್ನು ರೂಪಿಸುತ್ತದೆ. ಯೋಗದಲ್ಲಿ ಅನೇಕ ಭಂಗಿಗಳು ಅಥವಾ ಆಸನಗಳಿವೆ, ಅದು ನಮ್ಮ ದೇಹದ ವಿವಿಧ ಭಾಗಗಳಿಗೆ ಆಂತರಿಕವಾಗಿ ಮತ್ತು ಬಾಹ್ಯವಾಗಿ ಆರೋಗ್ಯಕಾರಿಯಾಗಿದೆ. ಆದರೆ ಯೋಗಾಭ್ಯಾಸ ಮಾಡುವಾಗ ಆಸನಗಳನ್ನು ಸರಿಯಾಗಿ ಮಾಡುವುದರ ಜೊತೆಗೆ, ಯೋಗದ ನಿಯಮಗಳನ್ನು ಪಾಲಿಸುವುದು ಸಹ ಮುಖ್ಯವಾಗಿದೆ ಎಂದು ಯೋಗ ತರಬೇತುದಾರರಾದ ಮೀನು ವರ್ಮಾ ಹೇಳುತ್ತಾರೆ.

ಯೋಗಾಭ್ಯಾಸ ಮಾಡುವಾಗ ವಿಭಿನ್ನ ಚಟುವಟಿಕೆಗಳು ನಡೆಯುತ್ತವೆ. ಇದರಿಂದಾಗಿ ನಮ್ಮ ಮೆದುಳು, ಮನಸ್ಸು ಮತ್ತು ದೇಹ, ಮೂರೂ ಒಂದೇ ಸಮಯದಲ್ಲಿ ಸಕ್ರಿಯವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಒಂದು ಸಮನ್ವಯದ ಕೊರತೆ ತಪ್ಪುಗಳನ್ನು ಉಂಟುಮಾಡಬಹುದು. ತಜ್ಞರ ಪ್ರಕಾರ ಯೋಗಾಭ್ಯಾಸ ಮಾಡುವಾಗ ಜನರು ಮಾಡುವ ಸಾಮಾನ್ಯ ತಪ್ಪುಗಳು ಈ ಕೆಳಕಂಡಂತಿವೆ.

1. ಸೂಕ್ತವಾದ ಬಟ್ಟೆಗಳನ್ನು ಧರಿಸುವುದಿಲ್ಲ

ಯೋಗಾಸನಗಳನ್ನು ಅಭ್ಯಾಸ ಮಾಡುವಾಗ ನಾವು ಧರಿಸುವ ಬಟ್ಟೆಗಳು ನಮಗೆ ಕಂಫರ್ಟಬಲ್ ಆಗಿರಬೇಕು. ತುಂಬಾ ಬಿಗಿಯಾದ ಅಥವಾ ತುಂಬಾ ಸಡಿಲವಾದ ಬಟ್ಟೆಗಳನ್ನು ಧರಿಸಬೇಡಿ. ಏಕೆಂದರೆ ಅವು ವ್ಯಾಯಾಮ, ಏಕಾಗ್ರತೆ ಮತ್ತು ಉಸಿರಾಟದಲ್ಲಿ ತೊಂದರೆ ಉಂಟುಮಾಡಬಹುದು. ಬೆವರು ಹೀರಿಕೊಳ್ಳಲು ಹಾಗೂ ದೇಹದ ಚಲನ-ವಲನಕ್ಕೆ ಸುಲಭವಾಗುವಂತಹ ಉಡುಪುಗಳನ್ನು ಧರಿಸಿ.

2. ಸರಿಯಾದ ಸ್ಥಳ ಮತ್ತು ಮ್ಯಾಟ್ ಆಯ್ಕೆ

ಯೋಗ ಮ್ಯಾಟ್‌ಗಳು ಮೊಣಕಾಲುಗಳು, ಸೊಂಟ, ಕೈಗಳು, ಅಂಗೈ ಮತ್ತು ಪಾದಗಳಿಗೆ ದಿಂಬಿನ ಪಾತ್ರವನ್ನು ವಹಿಸುತ್ತವೆ ಮತ್ತು ಆಸನಗಳನ್ನು ಮಾಡುವಾಗ ಜಾರಿಬೀಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ, ಯೋಗವನ್ನು ಪ್ರಾರಂಭಿಸುವ ಉತ್ಸಾಹದ ನಡುವೆ ಜನರು ಉತ್ತಮವಾಗಿದೆಯೇ ಎಂದು ಪರಿಶೀಲಿಸದೆ ಚಾಪೆಗಳನ್ನು ಖರೀದಿಸುತ್ತಾರೆ. ತುಂಬಾ ನಯವಾದ ಮತ್ತು ಜಾರು ಮ್ಯಾಟ್‌ಗಳು ಬೀಳುವಿಕೆಗೆ ಕಾರಣವಾಗಬಹುದು ಮತ್ತು ವ್ಯಕ್ತಿಯನ್ನು ನೋಯಿಸಬಹುದು. ಅಲ್ಲದೆ, ಕೆಲವೊಮ್ಮೆ ಜನರು ಸಾಕಷ್ಟು ಅಗಲವಿಲ್ಲದ ಚಾಪೆಗಳನ್ನು ಖರೀದಿಸುತ್ತಾರೆ, ಅದು ಸರಿಯಲ್ಲ.

3. ಏಕಾಗ್ರತೆ ಇಲ್ಲದೆ ವ್ಯಾಯಾಮ

ಯೋಗ ಅಥವಾ ಇತರ ಯಾವುದೇ ವ್ಯಾಯಾಮವನ್ನು ಅಭ್ಯಾಸ ಮಾಡುವಾಗ ದೇಹ ಮತ್ತು ಮನಸ್ಸಿನ ಸಮನ್ವಯವು ಮುಖ್ಯವಾಗಿದೆ, ವಿಶೇಷವಾಗಿ ಸಂಪೂರ್ಣ ಏಕಾಗ್ರತೆ ಅಗತ್ಯ. ಆದರೆ ಹಲವು ಬಾರಿ ಯೋಗಾಭ್ಯಾಸ ಮಾಡುವಾಗ ಜನರು ಏಕಾಗ್ರತೆಯ ಕೊರತೆಯಿಂದ ಮನೆ, ಕಚೇರಿ ಮುಂತಾದ ಕಡೆ ತಮ್ಮ ಜವಾಬ್ದಾರಿಗಳ ಬಗ್ಗೆ ಚಿಂತಿಸುತ್ತಾ ವಿಚಲಿತರಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ವ್ಯಾಯಾಮದ ನಡುವೆಯೇ ಮನಸ್ಸು ಬೇರೆಡೆ ಯೋಚನೆ ಮಾಡುವುದರಿಂದ ಆಸನಗಳನ್ನು ತಪ್ಪಾಗಿ ಮಾಡುತ್ತಾರೆ.

ಇದನ್ನೂ ಓದಿ: Tips For Pregnant : ಧೂಮಪಾನ ಮಾಡುವ ಗರ್ಭಿಣಿಯರಿಗೆ ಸಣ್ಣ ಗಾತ್ರದ ಮಕ್ಕಳ ಜನನ.. ಅಧ್ಯಯನ

4. ತಜ್ಞರಿಂದ ತರಬೇತಿ ಪಡೆಯದೇ ವ್ಯಾಯಾಮ

ಅನೇಕ ಬಾರಿ, ಜನರು ತಜ್ಞರಿಂದ ಯಾವುದೇ ತರಬೇತಿಯಿಲ್ಲದೆ ಮತ್ತು ಯೂಟ್ಯೂಬ್​ನಲ್ಲಿ ಸಿಗುವ ವೀಡಿಯೊಗಳನ್ನು ವೀಕ್ಷಿಸುವ ಮೂಲಕ ವ್ಯಾಯಾಮವನ್ನು ಪ್ರಾರಂಭಿಸುತ್ತಾರೆ, ಆದರೆ ಅದು ತಪ್ಪು. ಇದು ದೇಹಕ್ಕೆ ಹಾನಿ ಮಾಡುತ್ತದೆ. ವಿಶೇಷವಾಗಿ ಕಾಯಿಲೆ ಅಥವಾ ದೈಹಿಕ ಗಾಯದಿಂದ ಚೇತರಿಸಿಕೊಳ್ಳುತ್ತಿರುವವರ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ. ಕೆಲವೊಮ್ಮೆ, ಇದು ಮೊದಲೇ ಅಸ್ತಿತ್ವದಲ್ಲಿರುವ ಅನಾರೋಗ್ಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆ ಕೂಡ ಇರುತ್ತದೆ. ಆದ್ದರಿಂದ, ತಜ್ಞರ ಮೇಲ್ವಿಚಾರಣೆಯಿಲ್ಲದೆ ಯೋಗವನ್ನು ಅಭ್ಯಾಸ ಮಾಡಬಾರದು ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಯೋಗವನ್ನು ಪ್ರಾರಂಭಿಸುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು.

ಆಹಾರ ನಿಯಮಗಳು ಹೀಗಿರಲಿ..

ನೀವು ಯೋಗಾಸನವನ್ನು ಬೆಳಗ್ಗೆಯಾದರೂ ಮಾಡಿ ಅಥವಾ ಸಂಜೆಯಾದರೂ ಮಾಡಿ. ಆದರೆ ಯೋಗ ಪ್ರಾರಂಭಿಸುವ ಕನಿಷ್ಠ 30-40 ನಿಮಿಷಗಳ ಮೊದಲು ಏನನ್ನೂ ತಿನ್ನಬೇಡಿ. ಅಷ್ಟೇ ಅಲ್ಲ ಆ ಸಮಯಕ್ಕಿಂತ ಮುಂಚೆಯೇ ಅತಿಯಾದದನ್ನು ಏನನ್ನೂ ತಿನ್ನಬೇಡಿ. ಬೆಳಗ್ಗೆ, ಅಭ್ಯಾಸ ಪ್ರಾರಂಭವಾಗುವ ಕನಿಷ್ಠ 40 ನಿಮಿಷಗಳ ಮೊದಲು ಬಾಳೆಹಣ್ಣು ಅಥವಾ ಇತರ ಹಣ್ಣುಗಳು, ಒಣ ಹಣ್ಣುಗಳು ಅಥವಾ ಲಘು ಉಪಹಾರವನ್ನು ಸೇವಿಸಬಹುದು. ಮತ್ತೊಂದೆಡೆ, ಸಂಜೆ ಅಭ್ಯಾಸ ಮಾಡುವವರು 1 ಗಂಟೆ ಮೊದಲು ಬೇಯಿಸಿದ ತರಕಾರಿಗಳು, ಸಲಾಡ್, ಮೊಳಕೆ ಕಾಳುಗಳಂತಹ ಲಘು ತಿಂಡಿಗಳನ್ನು ಸೇವಿಸಬಹುದು. ಇದನ್ನು ತಿಂದ 30 ನಿಮಿಷಗಳ ನಂತರವೇ ನೀರು ಕುಡಿಯಿರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.