ETV Bharat / bharat

ಗ್ರಾಹಕರಿಗೆ ಮತ್ತೆ ಶಾಕ್​..  ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 105 ರೂ. ಏರಿಕೆ! - ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 105 ರೂ.ಗಳಷ್ಟು ಹೆಚ್ಚಿಸಲಾಗಿದೆ.

Commercial LPG cylinder prices increased by Rs 105
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 105 ರೂ. ಏರಿಕೆ
author img

By

Published : Mar 1, 2022, 7:36 AM IST

Updated : Mar 1, 2022, 10:51 AM IST

ನವದೆಹಲಿ: ದೆಹಲಿಯಲ್ಲಿ ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ (19 ಕೆಜಿಯ ಸಿಲಿಂಡರ್​) ಬೆಲೆಯನ್ನು 105 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇಂದಿನಿಂದ ದೆಹಲಿಯಲ್ಲಿ 19 ಕೆ.ಜಿಯ ಸಿಲಿಂಡರ್ ಬೆಲೆ 2,012 ರೂ. ಆಗಿರಲಿದೆ.

5 ಕೆಜಿ ಸಿಲಿಂಡರ್ ಬೆಲೆ 27 ರೂ.ನಷ್ಟು ಏರಿಕೆಯಾಗಿದೆ. ಹಾಗಾಗಿ 5 ಕೆಜಿ ಸಿಲಿಂಡರ್ ಬೆಲೆ 569 ರೂ. ಇರಲಿದೆ. ಆದರೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಯಾವುದೇ ಹೆಚ್ಚಳವಿಲ್ಲ.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ: ಭಾರತೀಯ ಲೋಹದ ಷೇರುಗಳಲ್ಲಿ ಭಾರಿ ಏರಿಕೆ

ಎಲ್‌ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾಸಿಕವಾಗಿ ಪರಿಷ್ಕರಿಸಲಾಗುತ್ತದೆ. ಇನ್ನೂ ನ್ಯಾಷನಲ್ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಫೆಬ್ರವರಿ 1 ರಿಂದ 19 ಕೆಜಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು 91.50 ರೂ.ಗಳಷ್ಟು ಕಡಿತಗೊಳಿಸಿದ್ದವು.

Last Updated : Mar 1, 2022, 10:51 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.